Site icon Vistara News

Finance Commission: 16ನೇ ಹಣಕಾಸು ಆಯೋಗ ರಚನೆ, ಅರವಿಂದ್ ಪನಗಾರಿಯಾ ಅಧ್ಯಕ್ಷ

Arvind Panagariya

ನವದೆಹಲಿ: 16ನೇ ಹಣಕಾಸು ಆಯೋಗ (16th Finance Commission) ರಚಿಸಿರುವ ಕೇಂದ್ರ ಸರ್ಕಾರವು (Central Government), ನೀತಿ ಆಯೋಗದ (Niti Ayog) ಮಾಜಿ ಉಪಾಧ್ಯಕ್ಷ ಅರವಿಂದ್ ಪನಗಾರಿಯಾ (Arvind Panagariya) ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. 2026 ಮತ್ತು 2031ರ ನಡುವಿನ ಐದು ವರ್ಷಗಳ ಅವಧಿಯನ್ನು ಒಳಗೊಂಡಿರುವ ಆಯೋಗವು ತನ್ನ ವರದಿಯನ್ನು 2025ರ ಅಕ್ಟೋಬರ್ 31ರೊಳಗೆ ನೀಡಲಿದೆ.

ಭಾರತ ಸರ್ಕಾರವು, ಭಾರತದ ರಾಷ್ಟ್ರಪತಿಗಳ ಅನುಮೋದನೆಯೊಂದಿಗೆ, ಸಂವಿಧಾನದ 280 (1) ನೇ ವಿಧಿಯ ಅನುಸಾರವಾಗಿ ಹದಿನಾರನೇ ಹಣಕಾಸು ಆಯೋಗವನ್ನು ರಚಿಸಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಹಣಕಾಸು ಆಯೋಗದ ಅಧ್ಯಕ್ಷರಾಗಿ ನೇಮಕವಾಗಿರುವ ಅರವಿಂದ್ ಪನಗಾರಿಯಾ ಅವರು 2025ರಿಂದ 2017ರವರೆಗೆ ನೀತಿ ಆಯೋಗದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಕೊಲಂಬಿಯಾ ವಿಶ್ವ ವಿದ್ಯಾಲಯದಲ್ಲಿ ಪ್ರೊಫೆಸರ್ ಕೂಡ ಆಗಿದ್ದಾರೆ.

ರಿತ್ವಿಕ್ ರಂಜನಂ ಪಾಂಡೆ ಅವರನ್ನು ಆಯೋಗದ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗದೆ. ಭಾನುವಾರ ಹೊರಡಿಸಲಾದ ಅಧಿಸೂಚನೆಯಲ್ಲಿ 16ನೇ ಆಯೋಗದ ಸಂಪೂರ್ಣ ವಿವರಗಳನ್ನು ಹಂಚಿಕೊಳ್ಳಲಾಗಿದೆ. ಆಯೋಗದ ಸದಸ್ಯರ ನೇಮಕಾತಿಯ ಅಧಿಸೂಚನೆಯನ್ನು ಪ್ರತ್ಯೇಕವಾಗಿ ಹೊರಡಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಒಕ್ಕೂಟ ಮತ್ತು ರಾಜ್ಯಗಳ ನಡುವಿನ ತೆರಿಗೆಗಳ ನಿವ್ವಳ ಆದಾಯದ ಹಂಚಿಕೆ, ಅಥವಾ ಸಂವಿಧಾನದ ಅಧ್ಯಾಯ Iರ ಭಾಗ XII ಅಡಿಯಲ್ಲಿ ಹಂಚಿಕೆಯಾಗಬಹುದು ಮತ್ತು ಅಂತಹ ಆದಾಯದ ಆಯಾ ಷೇರುಗಳ ರಾಜ್ಯಗಳ ನಡುವಿನ ಹಂಚಿಕೆಯನ್ನು ಆಯೋಗವು ಲೆಕ್ಕ ಹಾಕಿ ಶಿಫಾರಸು ಮಾಡಲಿದೆ.

ಕೇಂದ್ರ ಸಂಚಿತ ನಿಧಿಯಿಂದ ರಾಜ್ಯಗಳ ಆದಾಯದ ಅನುದಾನ-ಸಹಾಯವನ್ನು ನಿಯಂತ್ರಿಸಬೇಕಾದ ತತ್ವಗಳು ಮತ್ತು ಆರ್ಟಿಕಲ್ 275 ರ ಅಡಿಯಲ್ಲಿ ಅವರ ಆದಾಯದ ಅನುದಾನದ ಮೂಲಕ ರಾಜ್ಯಗಳಿಗೆ ಪಾವತಿಸಬೇಕಾದ ಮೊತ್ತಗಳ ಕುರಿತು ಶಿಫಾರಸು ಮಾಡಲಿದೆ.

ಈ ಸುದ್ದಿಯನ್ನೂ ಓದಿ: Siddaramaiah: ರಾಜ್ಯಕ್ಕೆ ವಿಶೇಷ, ನಿರ್ದಿಷ್ಟ ಅನುದಾನ ಬಿಡುಗಡೆ ಮಾಡಿ; ಕೇಂದ್ರ ಹಣಕಾಸು ಸಚಿವೆಗೆ ಸಿದ್ದರಾಮಯ್ಯ ಪತ್ರ

Exit mobile version