ನವ ದೆಹಲಿ: ವಾಣಿಜ್ಯ ಬಳಕೆಯ 19 ಕೆಜಿ ಅಡುಗೆ ಅನಿಲ ಸಿಲಿಂಡರ್ ಬೆಲೆ (Commercial LPG cylinder)ಯನ್ನು ಇಂದು ಭಾರತೀಯ ತೈಲ ನಿಗಮ 115.50 ರೂಪಾಯಿ ಕಡಿತಗೊಳಿಸಿದೆ. ಮುಂಬಯಿ, ದೆಹಲಿಗಳಲ್ಲಿ 19 ಕೆಜಿ ಸಿಲಿಂಡರ್ ಬೆಲೆ 115.50 ರೂ. ಕಡಿಮೆಯಾಗಿದ್ದು, ಕೋಲ್ಕತ್ತದಲ್ಲಿ 113 ರೂ. ಮತ್ತು ಚೆನ್ನೈನಲ್ಲಿ 116.5 ರೂ.ಕಡಿತಗೊಂಡಿದೆ.
ದೆಹಲಿಯಲ್ಲಿ ಇಷ್ಟುದಿನ ಒಂದು ಸಿಲಿಂಡರ್ ಬೆಲೆ 1,859.50 ರೂ. ಇತ್ತು. ಈಗ 115.5 ರೂ. ಕಡಿಮೆಯಾಗುತ್ತಿದ್ದಂತೆ ಇಂದಿನಿಂದ ಬೆಲೆ 1,744 ರೂಪಾಯಿ ಆಗಲಿದೆ. ಹಾಗೇ, ಮುಂಬಯಿಯಲ್ಲಿ 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 1,696ರೂ., ಕೋಲ್ಕತ್ತದಲ್ಲಿ 1,846 ರೂಪಾಯಿ ಮತ್ತು ಚೆನ್ನೈನಲ್ಲಿ 1,893 ರೂಪಾಯಿ ಆಗಿದೆ. ಇಂದು ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 1650 ರೂ.ಇದೆ.
ಈ ಹಿಂದೆ ಒಂದೇ ಸಮ ಏರಿಕೆಯಾಗುತ್ತಿದ್ದ ಎಲ್‌ಪಿಜಿ ಸಿಲಿಂಡರ್ ಬೆಲೆ ಜೂನ್ ತಿಂಗಳಿಂದಲೂ ಇಳಿಕೆಯಾಗುತ್ತಿದೆ. ಜೂನ್ನಲ್ಲಿ 135 ರೂಪಾಯಿ ಇಳಿಕೆಯಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ 19 ಕೆಜಿ ವಾಣಿಜ್ಯ ಬಳಕೆ ಅಡುಗೆ ಸಿಲಿಂಡರ್ ಬೆಲೆ ಒಟ್ಟಾರೆ 610 ರೂಪಾಯಿ ಕಡಿಮೆಯಾಗಿದೆ. ಅಕ್ಟೋಬರ್ 1ರಂದು 25.50 ರೂ.ಇಳಿಕೆಯಾಗಿತ್ತು.
ಇನ್ನು ಗೃಹ ಬಳಕೆ ಅಂದರೆ 14 ಕೆಜಿ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಇಳಿಕೆಯಾಗುತ್ತಿಲ್ಲ. ತೈಲ ಮಾರುಕಟ್ಟೆ ಕಂಪನಿಗಳು ಜುಲೈ 6ರಂದು ಒಂದು ಯೂನಿಟ್ಗೆ 50 ರೂಪಾಯಿ ಹೆಚ್ಚಿಸಿವೆ. 14 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 1053 ರೂ., ಕೋಲ್ಕತ್ತದಲ್ಲಿ 1079 ರೂ., ಮುಂಬಯಿಯಲ್ಲಿ 1052.50 ರೂ. ಮತ್ತು ಚೆನ್ನೈನಲ್ಲಿ 1068.5 ರೂ. ಇದೆ. ಹಾಗೇ ಬೆಂಗಳೂರಿನಲ್ಲಿ 1055. 50 ರೂಪಾಯಿ ಇದೆ.
ಇದನ್ನೂ ಓದಿ: LPG: ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ 135 ರೂ. ಇಳಿಕೆ