Site icon Vistara News

Essar | ಎಸ್ಸಾರ್‌ ಗ್ರೂಪ್‌ನ 19,000 ಕೋಟಿ ರೂ. ಆಸ್ತಿ, ಅರ್ಸೆಲರ್‌ ಮಿತ್ತಲ್‌ಗೆ ಮಾರಾಟ

essar

ಮುಂಬಯಿ: ಎಸ್ಸಾರ್‌ ಗ್ರೂಪ್‌ ತನ್ನ ೧೯,೦೦೦ ಕೋಟಿ ರೂ. ಮೌಲ್ಯದ ಬಂದರು, ವಿದ್ಯುತ್‌ ಮೂಲಸೌಕರ್ಯ ಯೋಜನೆಗಳನ್ನು ಅರ್ಸೆಲರ್‌ ಮಿತ್ತಲ್‌ ನಿಪ್ಪೋನ್‌ ಮಿತ್ತಲ್ ಕಂಪನಿಗೆ ಮಾರಾಟ ಮಾಡಲು ಒಪ್ಪಂದಕ್ಕೆ ಸಹಿ ಹಾಕಿದೆ.‌

ಗುಜರಾತ್‌ನ ಹಝಿರಾ ಸ್ಟೀಲ್‌ ಘಟಕಕ್ಕೆ ಸಂಬಂಧಿಸಿದ ಆಸ್ತಿಗಳು ಮಾರಾಟವಾಗಲಿದೆ. ಗುಜರಾತ್‌ನ ಹಝಿರಾದಲ್ಲಿ ೪ ಎಂಟಿಪಿಎ ಎಲ್‌ಎನ್‌ಜಿ ಟರ್ಮಿನಲ್‌ ನಿರ್ಮಾಣಕ್ಕೆ ೫೦-೫೦ ಜಂಟಿ ಸಹಭಾಗಿತ್ವಕ್ಕೆ ಕೂಡ ಎಸ್ಸಾರ್‌ ಮತ್ತು ಅರ್ಸೆಲರ್‌ ಮಿತ್ತಲ್‌ ನಡುವೆ ಒಪ್ಪಂದ ಆಗಿದೆ.

ಇದರೊಂದಿಗೆ ಎಸ್ಸಾರ್‌ ಗ್ರೂಪ್‌ ತನ್ನ ವ್ಯವಸ್ಥಿತ ಆಸ್ತಿ ನಗದೀಕರಣ ಯೋಜನೆಯನ್ನು ಪೂರ್ಣಗೊಳಿಸಿದೆ. ೨ ಲಕ್ಷ ಕೋಟಿ ರೂ. ಸಾಲ ಮರು ಪಾವತಿಯನ್ನು ಮಾಡಿದೆ. ಭಾರತೀಯ ಬ್ಯಾಂಕ್‌ಗಳಿಗೆ ಕೊಡಬೇಕಿರುವ ಬಹುತೇಕ ಸಾಲಗಳನ್ನು ತೀರಿಸಿದೆ. ಎಸ್ಸಾರ್‌ ಗ್ರೂಪ್‌ ಇಂಧನ, ಮೂಲಸೌಕರ್ಯ, ಲೋಹ, ಗಣಿಗಾರಿಕೆ, ತಂತ್ರಜ್ಞಾನ ಮತ್ತು ಸೇವಾ ವಲಯದಲ್ಲಿ ಗಣನೀಯ ಹೂಡಿಕೆಗೆ ನಿರ್ಧರಿಸಿದೆ.

Exit mobile version