ನವ ದೆಹಲಿ: ಈ ಸಲ ಹಬ್ಬದ ಅವಧಿಯ ಧನ್ ತೇರಾಸ್‌ಗೆ ( ಅಕ್ಟೋಬರ್ 22,23) ಒಟ್ಟು 19,500 ಕೋಟಿ ರೂ. ಮೌಲ್ಯದ 39 ಟನ್ ಬಂಗಾರ (Gold sale) ಮಾರಾಟವಾಗಿದೆ.
ಕಳೆದ ಶನಿವಾರ ಮತ್ತು ಭಾನುವಾರ ಜನತೆ ಧನ್ ತೇರಾಸ್ ಪ್ರಯುಕ್ತ ಜ್ಯುವೆಲ್ಲರಿ ಮಳಿಗೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳಿದ್ದಾರೆ. ಚಿನ್ನಾಭರಣಗಳ ಖರೀದಿ ಭರಾಟೆ ನಡೆದಿದೆ ಎಂದು ಜ್ಯುವೆಲರ್ಸ್ ಅಸೋಸಿಯೇಶನ್‌ನ ವರದಿ ತಿಳಿಸಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಧನ್ ತೇರಾಸ್‌ಗೆ ಚಿನ್ನದ ಖರೀದಿಯಲ್ಲಿ 30% ಹೆಚ್ಚಳವಾಗಿದೆ. ಆಗ 30 ಟನ್ ಚಿನ್ನ ವಿಕ್ರಯವಾಗಿತ್ತು. ಈ ಸಲ ಧನ್ ತೇರಾಸ್ ಅವಧಿಯಲ್ಲಿ 10 ಗ್ರಾಮ್ ಬಂಗಾರದ ದರ ಎರಡೂ ದಿನಗಳಲ್ಲಿ 50,139 ರೂ. ಇತ್ತು. ಕಳೆದ ವರ್ಷ 47,644 ರೂ. ಇತ್ತು.
ಧನ್ ತೇರಾಸ್‌ನ ಎರಡನೇ ದಿನ ಭಾರತ-ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಇದ್ದಿತಾದರೂ, ಜ್ಯುವೆಲ್ಲರಿ ಖರೀದಿ ಭರಾಟೆ ನಡೆಯಿತು. ನಮ್ಮ ಮಳಿಗೆಗಳಲ್ಲಿ ವ್ಯಾಪಾರ 35% ಏರಿಕೆ ಆಗಿತ್ತು ಎಂದು ಜಾಯ್ ಆಲುಕ್ಕಾಸ್ ಸರಣಿ ಮಳಿಗೆಗಳ ಅಧ್ಯಕ್ಷ ಜಾಯ್ ಆಲುಕ್ಕಾಸ್ ತಿಳಿಸಿದ್ದಾರೆ.