ನವದೆಹಲಿ: 2000 ನೋಟುಗಳನ್ನು (2000 Notes) ಹಿಂದಿರುಗಿಸಲು ಇದ್ದ ವಿಸ್ತರಿತ ಗಡುವು ಕೂಡ ಅಕ್ಟೋಬರ್ 7ಕ್ಕೆ ಮುಕ್ತಾಯವಾಗಿದೆ. ಹಾಗಾಗಿ, ಬ್ಯಾಂಕುಗಳಲ್ಲಿ (Banks) 2000 ನೋಟುಗಳನ್ನು ಬದಲಿಸಿಕೊಳ್ಳಲು ಆಗುವುದಿಲ್ಲ. ಹೀಗಿದ್ದೂ, ನೀವು 2000 ನೋಟುಗಳನ್ನು ಬದಲಿಸಿಕೊಳ್ಳಲು ಸಾಧ್ಯವಿದೆ. ಇದಕ್ಕಾಗಿ ನೀವು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಕಚೇರಿಗಳಿಗೆ ಹೋಗಿ ಎಕ್ಸ್‌ಚೇಂಜ್ (Exchange Notes) ಮಾಡಿಕೊಳ್ಳಬಹುದು.
ಭಾರತೀಯ ರಿಸರ್ವ್ ಬ್ಯಾಂಕ್ 2000 ಮುಖ ಬೆಲೆ ನೋಟುಗಳನ್ನು ವಾಪಸ್ ಪಡೆದುಕೊಳ್ಳಲು ನಿರ್ಧರಿಸಿ, ನೋಟ್ ಎಕ್ಸ್‌ಚೇಂಜ್‌ಗೆ ಸೆಪ್ಟೆಂಬರ್ 30 ಗಡುವು ವಿಧಿಸಿತ್ತು. ಬಳಿಕ ಈ ದಿನಾಂಕವನ್ನು ಅಕ್ಟೋಬರ್ 7ಕ್ಕೆ ವಿಸ್ತರಣೆ ಮಾಡಿತ್ತು. ಈಗ ಈ ಗಡುವು ಕೂಡ ಮುಕ್ತಾಯವಾಗಿದೆ. ಹಾಗಾಗಿ, 2000 ನೋಟು ಇನ್ನು ಮುಂದೆ ಚಲಾವಣೆಯಲ್ಲಿ ಇರುವುದಿಲ್ಲ.
ಈ ಸುದ್ದಿಯನ್ನೂ ಓದಿ: 200 ಕೋಟಿ ರೂ. ಅದ್ಧೂರಿ ಮದ್ವೆ, ಎಲ್ಲ ನಗದು ರೂಪದಲ್ಲೇ ಪಾವತಿ! ಬೆಟ್ಟಿಂಗ್ ಆ್ಯಪ್ ಮಾಲೀಕನ ದಿಢೀರ್ ಶ್ರೀಮಂತಿಕೆ
ಗಡುವು ಮುಕ್ತಾಯಗೊಂಡ ಬಳಿಕವು ನಿಮ್ಮ ಬಳಿ 2000 ನೋಟುಗಳಿದ್ದರೆ ಆರ್‌ಬಿಐ ಕಚೇರಿಗಳಿ ಹೋಗಿ ಬದಲಿಸಿಕೊಳ್ಳಬಹುದು. ಈ ಕುರಿತು ಕೆಲವು ಸಂಗತಿಗಳನ್ನು ನೀವು ತಿಳಿದುಕೊಳ್ಳಬಹುದು.
-ಬ್ಯಾಂಕುಗಳಲ್ಲಿ 2000 ನೋಟ್ ಠೇವಣಿ ಅಥವಾ ಎಕ್ಸ್‌ಚೇಂಜ್ ಸಂಪೂರ್ಣವಾಗಿ ಸ್ಥಗಿತವಾಗಿದೆ.
-ಆದರೂ, ಜನರು/ಸಂಸ್ಥೆಗಳು ತಮ್ಮ ಬಳಿ ಇರುವ 2000 ನೋಟುಗಳನ್ನು ಆರ್‌ಬಿಐ ಸೂಚಿಸಿದ 19 ಕಚೇರಿಗಳಲ್ಲಿ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದಾಗಿದೆ.
-ದೇಶದ ಯಾವುದೇ ಭಾಗದ ಬ್ಯಾಂಕುಗಳ ಖಾತೆ ಹೊಂದಿದ್ದರೂ ಜನರು ಮತ್ತು ಸಂಸ್ಥೆಗಳು 2000 ನೋಟುಗಳನ್ನು ಆರ್‌ಬಿಐನ 19 ಕಚೇರಿಗಳಲ್ಲಿ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದು.
-ಭಾರತದಲ್ಲಿರುವ ತಮ್ಮ ಖಾತೆಗಳಲ್ಲಿ ಹಣವನ್ನು ಠೇವಣಿ ಮಾಡಲು ಜನರು/ಸಂಸ್ಥೆಗಳು ಭಾರತೀಯ ಅಂಚೆ ಕಚೇರಿ ಮೂಲಕವು 2000 ನೋಟುಗಳನ್ನು ಕಳುಹಿಸಬಹುದಾಗಿದೆ.
-ಅಂತಹ ವಿನಿಮಯ ಅಥವಾ ಕ್ರೆಡಿಟ್ ಸಂಬಂಧಿತ ಆರ್‌ಬಿಐ/ಸರ್ಕಾರದ ನಿಯಮಗಳು, ಮಾನ್ಯ ಗುರುತಿನ ದಾಖಲೆಗಳ ಸಲ್ಲಿಕೆ ಮತ್ತು ಆರ್‌ಬಿಐ ಸೂಕ್ತವೆಂದು ಪರಿಗಣಿಸಿದಂತೆ ನಿಯಮಗಳಿಗೆ ಒಳಪಟ್ಟಿರುತ್ತದೆ.
-ನ್ಯಾಯಾಲಯಗಳು, ಕಾನೂನು ಜಾರಿ ಸಂಸ್ಥೆಗಳು, ಸರ್ಕಾರಿ ಇಲಾಖೆಗಳು ಅಥವಾ ತನಿಖಾ ಪ್ರಕ್ರಿಯೆಗಳು ಅಥವಾ ಜಾರಿಯಲ್ಲಿ ತೊಡಗಿರುವ ಯಾವುದೇ ಇತರ ಸಾರ್ವಜನಿಕ ಪ್ರಾಧಿಕಾರಗಳು, ಅಗತ್ಯವಿದ್ದಾಗ, ಯಾವುದೇ ಮಿತಿಯಿಲ್ಲದೆ ಯಾವುದೇ ಆರ್‌ಬಿಐನ 19 ಕಚೇರಿಗಳಲ್ಲಿ 2000 ರೂ. ಬ್ಯಾಂಕ್‌ನೋಟುಗಳನ್ನು ಠೇವಣಿ ಮಾಡಬಹುದು/ಬದಲಾಯಿಸಬಹುದು.