Site icon Vistara News

2000 Notes Withdrawan : 10,000 ರೂ. ನೋಟು ಮುದ್ರಣಕ್ಕೆ ರಘುರಾಮ್‌ ರಾಜನ್‌ ನೀಡಿದ್ದ ಸಲಹೆ ಏನಾಯಿತು?

2000 Notes Withdrawal What happened to Raghuram Rajan's suggestion for 10,000 Rs. note printing

ನವ ದೆಹಲಿ: ಆರ್‌ಬಿಐನ ಗವರ್ನರ್‌ ಆಗಿದ್ದ ಕಾಲದಲ್ಲು ರಘುರಾಮ್‌ ರಾಜನ್‌ ( former governer Raghuram Rajan) ಅವರು 10,000 ರೂ. ನೋಟು ಮುದ್ರಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದ ಸಂಗತಿ ಇದೀಗ ಬಯಲಾಗಿದೆ. ಈ ಸ್ವಾರಸ್ಯಕರ ವರದಿ ಇಲ್ಲಿದೆ. ಅಂದ ಹಾಗೆ ಆರ್‌ಬಿಐ ಕಳೆದ ಶುಕ್ರವಾರ 2,000 ರೂ. ನೋಟನ್ನು ಚಲಾವಣೆಯಿಂದ ಹಿಂತೆಗೆದುಕೊಂಡಿದೆ. (2000 Notes Withdrawan) ಇದರ ಪರ-ವಿರೋಧ ಚರ್ಚೆ ನಡೆಯುತ್ತಿದೆ. 2016ರಲ್ಲಿ ನೋಟು ಅಮಾನ್ಯತೆಯ ಸಂದರ್ಭ 500, 1000 ರೂ. ನೋಟುಗಳನ್ನು ಹಿಂತೆಗೆದುಕೊಂಡಾಗ, ಅಷ್ಟು ಮೌಲ್ಯದ ಹಣವನ್ನು ಕ್ಷಿಪ್ರವಾಗಿ ತುಂಬಲು 2,000 ರೂ. ನೋಟನ್ನು ಬಿಡುಗಡೆ ಮಾಡಲಾಯಿತು ಎಂದು ಕೇಂದ್ರ ಸರಕಾರ ತಿಳಿಸಿತ್ತು. ಕಳೆದ ನಾಲ್ಕು ವರ್ಷಗಳಿಂದ 2,000 ರೂ. ನೋಟನ್ನು ಸರ್ಕಾರ ಮುದ್ರಿಸುತ್ತಿಲ್ಲ.

ಹೀಗಿದ್ದರೂ, 2,000 ರೂ. ನೋಟನ್ನು ಬ್ಯಾಂಕ್‌ಗೆ ಜಮೆ ಮಾಡಿ ಬದಲಿಸಿಕೊಳ್ಳಲು ಯಾವುದೇ ಐಡಿ ಪ್ರೂಫ್‌ ಬೇಕಿಲ್ಲ ಎಂದಿದ್ದರೆ, ಕಾಳ ಧನಿಕರು ಸುಲಭವಾಗಿ ವರ್ಗಾಯಿಸಬಹುದಲ್ಲವೇ? ಇದರೊಂದಿಗೆ ಕಪ್ಪುಹಣ ತರುವ ಸರ್ಕಾರದ ಉದ್ದೇಶ ವಿಫಲವಾಗಿದೆ ಎಂದು ಮಾಜಿ ವಿತ್ತ ಸಚಿವ ಹಾಗೂ ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ತರಾಟೆಗೆ ತೆಗೆದುಕೊಂಡಿದ್ದರು. ಜನ ಸಾಮಾನ್ಯರು 2,000 ರೂ. ನೋಟನ್ನು ಹೊಂದಿಲ್ಲ, ಹಾಗಿದ್ದರೆ ಯಾರ ಬಳಿ ಇದೆ? ನಿಮಗೆ ಅದು ಗೊತ್ತಿರಬೇಕು ಎಂದು ಪಿ.ಚಿದಂಬರಂ ಹೇಳಿದ್ದರು.

ಇದನ್ನೂ ಓದಿ: 2000 Notes Withdrawn : ಹೊರಬಿದ್ದ 2,000 ರೂ. ನೋಟು, ಚಲಾವಣೆಯಾಗುತ್ತಿರುವುದು ಎಲ್ಲಿ?!

10,000 ರೂ. ನೋಟು ಮುದ್ರಣಕ್ಕೆ ಸಲಹೆ ನೀಡಿದ್ದ ರಾಜನ್:

2016ರ ನೋಟು ಅಮಾನ್ಯತೆಗೂ ಮುನ್ನ 2,000 ರೂ, ಬಿಡಿ, ಬರೋಬ್ಬರಿ 10,000 ರೂ. ನೋಟನ್ನು ಬಿಡುಗಡೆ ಮಾಡಲು ಆರ್‌ಬಿಐನಲ್ಲಿ ಗವರ್ನರ್‌ ಆಗಿದ್ದ ರಘುರಾಮ್‌ ರಾಜನ್‌ ಸಲಹೆ ನೀಡಿದ್ದರು. ಆರ್‌ಬಿಐ ಸಾರ್ವಜನಿಕ ಲೆಕ್ಕ ಸಮಿತಿಗೆ ಸಲ್ಲಿಸಿದ್ದ ವಿವರಣೆಯಲ್ಲಿ ಈ ವಿಷಯ ತಿಳಿಸಿದೆ. 2014ರ ಅಕ್ಟೋಬರ್‌ನಲ್ಲಿ ರಘುರಾಮ್‌ ರಾಜನ್‌ ಅವರು ಈ ಸಲಹೆ ಮಾಡಿದ್ದರು. ಹಣದುಬ್ಬರದ ಪರಿಣಾಮ 1,000 ರೂ. ನೋಟಿನ ಕಿಮ್ಮತ್ತು ಕಡಿಮೆಯಾಗಿದ್ದರಿಂದ 10,000 ರೂ. ನೋಟು ಮುದ್ರಿಸಲು ರಾಜನ್‌ ಸಲಹೆ ನೀಡಿದ್ದರು.

ಆದರೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ 10,000 ರೂ. ನೋಟು ಮುದ್ರಿಸಲು ಒಪ್ಪಿರಲಿಲ್ಲ. ಬಳಿಕ ರಾಜನ್‌ ಅವರು, 2015ರ ಸೆಪ್ಟೆಂಬರ್‌ನಲ್ಲಿ ನಕಲಿ ನೋಟುಗಳು ಹೆಚ್ಚುವ ಸಾಧ್ಯತೆ ಇರುವುದರಿಂದ ದೊಡ್ಡ ಮೌಲ್ಯದ ನೋಟು ಬಿಡುಗಡೆ ಅಸಾಧ್ಯ ಎಂದು ಹೇಳಿದ್ದರು. ಆ ವೇಳೆಗೆ ಬಹುಶಃ ಸರ್ಕಾರ ಅವರ 10,000 ರೂ. ನೋಟು ಮುದ್ರಣದ ಪ್ರಸ್ತಾಪವನ್ನು ತಿರಸ್ಕರಿಸಿತ್ತು ಎಂದು ವರದಿಯಾಗಿದೆ.

ಭಾರತದಲ್ಲಿ ಈ ಹಿಂದೆ 10,000 ರೂ. ನೋಟು ಇತ್ತೇ?

ಭಾರತದಲ್ಲಿ 1938ರಲ್ಲಿ 10,000 ರೂ. ಕರೆನ್ಸಿ ನೋಟು ಇತ್ತು. 1946ರಲ್ಲಿ ಅದನ್ನು ಅಮಾನ್ಯಗೊಳಿಸಲಾಗಿತ್ತು. 1954ರಲ್ಲಿ ಮತ್ತೆ ಪರಿಚಯಿಸಲಾಗಿತ್ತು. 1978ರಲ್ಲಿ ಮತ್ತೆ ಅಮಾನ್ಯಗೊಳಿಸಲಾಯಿತು.

Exit mobile version