ನವ ದೆಹಲಿ: ಆರ್‌ಬಿಐ ಕಳೆದ ಶುಕ್ರವಾರ 2,000 ರೂ. ನೋಟನ್ನು ಚಲಾವಣೆಯಿಂದ ಹಿಂತೆಗೆದುಕೊಂಡಿದೆ. ಬ್ಯಾಂಕ್‌ಗಳಲ್ಲಿ ಮೇ 23ರಿಂದ ಇದನ್ನು ವಿನಿಮಯ ಮಾಡಿಕೊಳ್ಳಬಹುದು. ಆದರೆ ಜನ ತಮ್ಮಲ್ಲಿರುವ 2,000 ರೂ. ನೋಟನ್ನು ಬದಲಿಸಿಕೊಳ್ಳಲು ನಾನಾ ಮಾರ್ಗಗಳನ್ನು ಕಂಡುಕೊಂಡಿದ್ದಾರೆ! ಉದಾಹರಣೆಗೆ ಜೊಮ್ಯಾಟೊದಲ್ಲಿ ಕಳೆದ ಶುಕ್ರವಾರದಿಂದ (ಮೇ 19) 2,000 ರೂ. ನೋಟುಗಳ ಮೂಲಕ ಕ್ಯಾಶ್ ಆನ್ ಡೆಲಿವರಿ (cash on delivery) 72% ರಷ್ಟು ಹೆಚ್ಚಳವಾಗಿದೆ.
ಆರ್‌ಬಿಐ 2,000 ರೂ. ನೋಟನ್ನು ಚಲಾವಣೆಯಿಂದ ಹಿಂತೆಗೆದುಕೊಂಡ ಬಳಿಕ ಜೊಮ್ಯಾಟೊದ ಕೆಲ ಟ್ವೀಟ್‌ಗಳೂ ಜಾಲತಾಣಗಳಲ್ಲಿ ಗಮನ ಸೆಳೆದಿವೆ. ಅದರಲ್ಲೊಂದು ಹೀಗಿದೆ.
ಮಕ್ಕಳು: ಬ್ಯಾಂಕ್‌ನಲ್ಲಿ 2,000 ರೂ. ನೋಟನ್ನು ವಿನಿಮಯ ಮಾಡಬಹುದು.
ವಯಸ್ಕರು: ಕ್ಯಾಶ್ ಆನ್ ಡೆಲಿವರಿ ಆರ್ಡರ್ ಮಾಡುವುದು ಮತ್ತು 2,000 ರೂ. ನೋಟು ಕೊಡುವುದು ಸೂಕ್ತ
ಲೆಜೆಂಡ್ಸ್ : 2,000 ರೂ. ನೋಟುಗಳಿಲ್ಲ
ಪೆಟ್ರೋಲ್ ಬಂಕ್‌ಗಳಲ್ಲಿ 2,000 ರೂ. ನೋಟುಗಳ ಚಲಾವಣೆ ಹೆಚ್ಚಳ:
ಪೆಟ್ರೋಲ್ ಬಂಕ್‌ಗಳಲ್ಲಿ 2,000 ರೂ. ನೋಟುಗಳನ್ನು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ನೀಡುತ್ತಿದ್ದಾರೆ. ಇದರಿಂದಾಗಿ ಗ್ರಾಹಕರಿಗೆ ಚಿಲ್ಲರೆ ಕೊಡುವುದು ಕಷ್ಟಕರವಾಗಿದೆ ಎಂದು ನವ ದೆಹಲಿಯಲ್ಲಿ ಪೆಟ್ರೋಲ್ ಬಂಕ್ ಮಾಲೀಕರು ಹೇಳಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ಎಲ್ಲ ಬ್ಯಾಂಕ್‌ಗಳಿಗೆ ನೀಡಿರುವ ಸೂಚನೆಯೊಂದರಲ್ಲಿ, 2,000 ರೂ. ನೋಟು ಬದಲಿಸಲು ಶಾಖೆಗಳಿಗೆ (2000 Notes Withdrawn) ಬರುವವರಿಗೆ ನೀರು-ನೆರಳಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದೆ. 2016ರಲ್ಲಿ ನೋಟು ಬ್ಯಾನ್ ಆಗಿದ್ದಾಗ ಬ್ಯಾಂಕ್ ಶಾಖೆಗಳಲ್ಲಿ ಉದ್ದನೆಯ ಕ್ಯೂ ಉಂಟಾಗಿತ್ತು. ಹಲವು ಮಂದಿ ಸರದಿಯಲ್ಲಿ ನಿಂತು ಬಳಲಿ ನಿತ್ರಾಣರಾಗಿದ್ದರು. ಕೆಲವರು ಮೃತಪಟ್ಟಿದ್ದಾರೆ ಎಂದೂ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಆರ್‌ಬಿಐ ಮುತುವರ್ಜಿ ವಹಿಸಿದೆ. ಹಾಗೂ ಬ್ಯಾಂಕ್‌ಗಳಿಗೆ ಸೂಚಿಸಿದೆ.
ಇದನ್ನೂ ಓದಿ: 2000 Notes Withdrawn : ಮೋದಿ 2,000 ರೂ. ನೋಟು ಬಯಸಿರಲಿಲ್ಲ: ಮಾಜಿ ಕಾರ್ಯದರ್ಶಿ ಹೇಳಿದ್ದೇನು?