ನವ ದೆಹಲಿ: ಚಲಾವಣೆಯಿಂದ ಹಿಂತೆಗೆದುಕೊಂಡಿರುವ 2,000 ರೂ. ನೋಟುಗಳನ್ನು (2000 Notes Withdrawn) ಜನತೆ ಬ್ಯಾಂಕ್‌ಗೆ ಹೋಗಿ ಬದಲಾಯಿಸಿಕೊಳ್ಳಲು ಅವಸರ ಮಾಡಬೇಕಿಲ್ಲ. ಸಾವಕಾಶವಾಗಿ ವಿನಿಮಯ ಮಾಡಿಕೊಳ್ಳಬಹುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ ದಾಸ್ ಅವರು (RBI Governor Shakti Kanta Das) ತಿಳಿಸಿದ್ದಾರೆ.
ಜನತೆ ಮೇ 23ರಿಂದ ಆರಂಭಿಸಿ ಸೆಪ್ಟೆಂಬರ್ 30 ರ ತನಕ 2,000 ರೂ. ನೋಟುಗಳನ್ನು ಬ್ಯಾಂಕ್ ಕಚೇರಿಗಳು ಹಾಗೂ ಆರ್‌ಬಿಐನ ಸ್ಥಳೀಯ ಕಚೇರಿಗಳಲ್ಲಿ ವಿನಿಮಯ ಮಾಡಿಕೊಳ್ಳಲು ಗಡುವು ನೀಡಲಾಗಿದೆ. ಸ್ವಚ್ಛ ನೋಟು ಉಪಕ್ರಮದ ಭಾಗವಾಗಿ (clean note policy) ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಸೆಪ್ಟೆಂಬರ್ 30ರ ಬಳಿಕವೂ 2,000 ರೂ. ನೋಟಿಗೆ ಕಾನೂನು ಮಾನ್ಯತೆ ಇರುತ್ತದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
ಇದನ್ನೂ ಓದಿ: 2000 Notes Withdrawn : 2,000 ರೂ. ನೋಟು ವಿನಿಮಯಕ್ಕೆ ಯಾವುದೇ ಐಡಿ ಪ್ರೂಫ್, ಸ್ಲಿಪ್ ಬೇಡ: ಎಸ್‌ಬಿಐ
ಜನತೆ ಗಡುವಿನ ಬಗ್ಗೆ ಆತಂಕಪಟ್ಟು ಅವಸರಪಡಬೇಕಿಲ್ಲ,. ಬ್ಯಾಂಕ್‌ಗಳಿಗೆ ಧಾವಿಸಿ ಬರಬೇಕಿಲ್ಲ. ನಿಮಗೆ ನಾಲ್ಕು ತಿಂಗಳಿನ ಕಾಲಾವಕಾಶ ಇದೆ. ಜನತೆ ಗಂಭೀರವಾಗಿ ಪರಿಗಣಿಸಿ ತಮ್ಮಲ್ಲಿರುವ 2,000 ರೂ. ನೋಟನ್ನು ವಿನಿಮಯ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಗಡುವನ್ನು ನಿಗದಿಪಡಿಸಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
2016ರಲ್ಲಿ ನೋಟು ಅಮಾನ್ಯತೆಯ ವೇಳೆ ಹಿಂತೆಗೆದುಕೊಂಡಿದ್ದ ನೋಟುಗಳನ್ನು ಭರ್ತಿಗೊಳಿಸುವ ಸಲುವಾಗಿ ಮಾತರ 2,000 ರೂ. ನೋಟನ್ನು ಬಿಡುಗಡೆ ಮಾಡಲಾಗಿತ್ತು. ಬ್ಯಾಂಕ್‌ಗಳಲ್ಲಿ ಮೇ 23ರಿಂದ ನೋಟುಗಳ ವಿನಿಮಯಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿದೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: 2000 ರೂ. ನೋಟು ವಾಪಸ್ ಸೂಕ್ತ ನಿರ್ಧಾರ