Site icon Vistara News

2000 Notes Withdrawn : 2,000 ರೂ. ನೋಟು ಹಿಂತೆಗೆತ ತುಘಲಕ್‌ ದರ್ಬಾರ್‌ ಎಂದ ಪ್ರತಿಪಕ್ಷಗಳು!

2000 Notes Withdrawn Opposition condemns withdrawal of 2,000 notes

#image_title

ನವ ದೆಹಲಿ: ಕೇಂದ್ರ ಸರ್ಕಾರ 2,000 ರೂ. ನೋಟನ್ನು ಚಲಾವಣೆಯಿಂದ (2000 Notes Withdrawn) ಹಿಂತೆಗೆದುಕೊಂಡಿರುವ ನಿರ್ಧಾರವನ್ನು ಪ್ರತಿಪಕ್ಷಗಳು ಖಂಡಿಸಿವೆ. ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, ಟ್ವೀಟ್‌ ಮಾಡಿದ್ದು, ಖಂಡಿಸಿದ್ದಾರೆ.

ಇದು ಟಿಪಿಕಲ್‌ ಸ್ವಘೋಷಿತ ವಿಶ್ವಗುರು ಸ್ಟೈಲ್‌ನ ಕೆಲಸವಾಗಿದೆ. ಮೊದಲು ಏನಾದರೂ ಮಾಡುವುದು, ಬಳಿಕ ಆಲೋಚಿಸುವುದು. 2016ರ ನವೆಂಬರ್‌ 8ರಂದು ತುಘಲಕ್‌ ದರ್ಬಾರ್‌ ಮಾದರಿಯಲ್ಲಿ ನೋಟು ಅಮಾನ್ಯತೆ ಘೋಷಿಸಲಾಯಿತು. ಈಗ 2,000 ನೋಟನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: 2000 Notes Withdrawan : 2,000 ರೂ. ನೋಟು ಚಲಾವಣೆಯಿಂದ ಹಿಂತೆಗೆತ: ಆರ್‌ಬಿಐ ಘೋಷಣೆ

2016ರ ನವೆಂಬರ್‌ 8ರ ಭೂತ ಮತ್ತೆ ಬಂದಿದೆ. ಅದು ದೇಶದ ಆರ್ಥಿಕತೆಗೆ ದೊಡ್ಡ ಹೊಡೆತವಾಗಿತ್ತು. ಹೊಸ ನೋಟುಗಳ ಮುದ್ರಣದ ಪ್ರಯೋಜನಗಳ ಬಗ್ಗೆ ಪ್ರಧಾನಿ ಹೇಳಿದ್ದರು. ಈಗ ಆ ಭರವಸೆ ಏನಾಯಿತು? ಎಂದು ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಚೇರ್ಮನ್‌ ಪವನ್‌ ಖೇರಾ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ:2000 Notes Withdrawn: 2 ಸಾವಿರ ರೂ. ನೋಟು ವಾಪಸ್‌ ನಂತರ ಮುಂದೇನು? ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ನೋಟುಗಳನ್ನು ಚಲಾವಣೆಗೆ ತರುವುದು, ಬಳಿಕ ಬ್ಯಾನ್‌ ಮಾಡುವುದು ಹಾಗೂ ಗೊಂದಲ ಸೃಷ್ಟಿಸುವ ಪ್ರವೃತ್ತಿಯನ್ನು ಆರಂಭಿಸಿದ್ದು ಪ್ರಧಾನಿ ನರೇಂದ್ರ ಮೋದಿ. ಈ ಸಲವಾದರೂ ತಜ್ಞರ ಸಲಹೆ ಪಡೆದು ಮಾಡಿರಬಹುದು ಎಂದು ಅಂದುಕೊಳ್ಳುತ್ತೇವೆ ಎಂದು ಆಮ್‌ ಆದ್ಮಿ ನಾಯಕ ಸೌರಭ್‌ ಭಾರದ್ವಾಜ್‌ ಟೀಕಿಸಿದ್ದಾರೆ.

ಆರ್‌ ಬಿಐ ವೆಬ್‌ಸೈಟ್‌ ಕ್ರ್ಯಾಶ್:

ಆರ್‌ಬಿಐ 2000 ರೂ. ನೋಟುಗಳ ಹಿಂತೆಗೆತದ ಘೋಷಣೆ ಹೊರಡಿಸಿದ ಬಳಿಕ ಅದರ ವೆಬ್‌ಸೈಟ್‌ ಕ್ರ್ಯಾಶ್‌ ಆಗಿದೆ. ಜನತೆ ಆರ್‌ ಬಿಐ ವೆಬ್‌ ಸೈಟ್‌ ಮೂಲಕ ವಿಚಾರ ತಿಳಿಯಲು ಒಟ್ಟಿಗೆ ಯತ್ನಿಸಿದ್ದರಿಂದ ವೆಬ್‌ ಸೈಟ್‌ ಕ್ರ್ಯಾಶ ಆಯಿತು.

Exit mobile version