ನವ ದೆಹಲಿ: ಭಾರತೀಯ ಜೀವ ವಿಮಾ ನಿಗಮವು (LIC) ಕಳೆದ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ 20,000 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದೆ.
ಭಾರತೀಯ ಷೇರು ಮಾರುಕಟ್ಟೆಯಲ್ಲಿ ಅತಿ ದೊಡ್ಡ ಸಾಂಸ್ಥಿಕ ಹೂಡಿಕೆದಾರನಾಗಿ ಎಲ್‌ಐಸಿ ಹೊರಹೊಮ್ಮಿದೆ. ಇದು ಕಳೆದ ಜುಲೈ-ಸೆಪ್ಟೆಂಬರ್ ನಲ್ಲಿ 105 ಷೇರುಗಳಲ್ಲಿ ತನ್ನ ಹೂಡಿಕೆಯನ್ನು ಕಡಿಮೆ ಮಾಡಿದೆ. ಮಾರುತಿ ಸುಜುಕಿ ಸೇರಿದಂತೆ 10 ಪ್ರಮುಖ ಷೇರುಗಳಿಂದ 20 ಸಾವಿರ ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದೆ.
ಮಾರುತಿ ಸುಜುಕಿ ಷೇರುಗಳನ್ನು ಮಾರಿದ ಎಲ್‌ಐಸಿ: ಭಾರತೀಯ ಜೀವ ವಿಮಾ ನಿಗಮವು ಮಾರುತಿ ಸುಜುಕಿಯಲ್ಲಿನ 43.2 ಲಕ್ಷ ಷೇರುಗಳನ್ನು ಮಾರಾಟ ಮಾಡಿದೆ. ಇದರಿಂದ ಮಾರುತಿ ಸುಜುಕಿಯಲ್ಲಿ ಎಲ್‌ಐಸಿ ಷೇರುಗಳ ಪಾಲು ಶೇ.4.86%ರಿಂದ ಶೇ.3.43%ಕ್ಕೆ ತಗ್ಗಿದೆ. ಮಾರಾಟ ಮಾಡಿರುವ ಷೇರುಗಳ ಮೌಲ್ಯ 3,814 ಕೋಟಿ ರೂ.ಗಳಾಗಿದೆ.
ಎಲ್‌ಐಸಿಯು ಪವರ್ ಗ್ರಿಡ್ ಕಂಪನಿಯಿಂದ ತನ್ನ 2,452 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದೆ. ಸನ್ ಫರ್ಮಾ (2,356 ಕೋಟಿ ರೂ.), ಎನ್‌ಟಿಪಿಸಿ (2,066 ಕೋಟಿ ರೂ.), ಎಚ್‌ಯುಎಲ್ ( 2,033 ಕೋಟಿ ರೂ.), ಎಚ್‌ಎಎಲ್ ( ೧,೯೪೦ ಕೋಟಿ ರೂ.), ಅಲ್ಟ್ರಾ ಟೆಕ್ ಸಿಮೆಂಟ್ (1,482 ಕೋಟಿ ರೂ.), ಸಿಮನ್ಸ್ (1,435 ಕೋಟಿ ರೂ.), ಬ್ರಿಟಾನಿಯಾ (1,235 ಕೋಟಿ ರೂ.), ಬಜಾಜ್ ಆಟೊ (1,005 ಕೋಟಿ ರೂ.)