Site icon Vistara News

Special trains : ರೈಲ್ವೆಯಿಂದ ಈ ಸಲದ ಬೇಸಿಗೆ ಅವಧಿಯಲ್ಲಿ 217 ವಿಶೇಷ ರೈಲು ಸಂಚಾರ

Union Budget 2023, grant allocation for new railway line, electrification in Karnataka

railway

ನವ ದೆಹಲಿ: ರೈಲ್ವೆ ಇಲಾಖೆಯಿಂದ ಈ ಸಲದ ಬೇಸಿಗೆ ಅವಧಿಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ 217 ವಿಶೇಷ ರೈಲುಗಳನ್ನು (Special trains) ದೇಶಾದ್ಯಂತ ಬಿಡಲಾಗುತ್ತಿದೆ. 4,010 ಟ್ರಿಪ್‌ಗಳನ್ನು ಈ ರೈಲುಗಳು ನಿರ್ವಹಿಸಲಿವೆ ಎಂದು ರೈಲ್ವೆಯ ಪ್ರಕಟಣೆ ತಿಳಿಸಿದೆ. ಬೇಸಿಗೆಯ ಕಾಲದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇರುವುದರಿಂದ ಪ್ರವಾಸಾದ ಸಲುವಾಗಿ ಪ್ರಯಾಣದ ದಟ್ಟಣೆ ಹೆಚ್ಚು ಇರುವುದು ಸಾಮಾನ್ಯ. ಆದ್ದರಿಂದ ಇಲಾಖೆ ಹೆಚ್ಚುವರಿ ರೈಲುಗಳನ್ನು ಬಿಡುತ್ತಿದೆ.

ನೈಋತ್ಯ ರೈಲ್ವೆ, ಸೌತ್‌ ಸೆಂಟ್ರಲ್‌ ರೈಲ್ವೆಯಲ್ಲಿ ಅನುಕ್ರಮವಾಗಿ 69 ಮತ್ತು 48 ವಿಶೇಷ ರೈಲುಗಳನ್ನು ಬಿಡುಗಡೆ ಮಾಡಲಾಗಿದೆ. ಪಶ್ಚಿಮ ರೈಲ್ವೆ ಮತ್ತು ದಕ್ಷಿಣ ರೈಲ್ವೆಯಲ್ಲಿ ಅನುಕ್ರಮವಾಗಿ 40 ಮತ್ತು 20 ರೈಲುಗಳನ್ನು ಬಿಡಲಾಗುತ್ತಿದೆ. ಈಸ್ಟ್‌ ಸೆಂಟ್ರಲ್‌ ಮತ್ತು ಸೆಂಟ್ರಲ್‌ ರೈಲ್ವೆ ವಲಯದಲ್ಲಿ ತಲಾ 10 ಮತ್ತು ನಾರ್ತ್‌ ವೆಸ್ಟರ್ನ್‌ ರೈಲ್ವೆಯಲ್ಲಿ 16 ರೈಲುಗಳನ್ನು ಬಿಡಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.

ನಾನಾ ವಲಯಗಳಲ್ಲಿ ಪ್ರಯಾಣಿಕರ ಸೌಕರ್ಯಕ್ಕಾಗಿ May I help You ಬೂತ್‌ಗಳನ್ನು ಸ್ಥಾಪಿಸಲಾಗುತ್ತಿದೆ.

ಭಾರತೀಯ ರೈಲ್ವೆ 2022-23ರಲ್ಲಿ ಮೊದಲ 10 ತಿಂಗಳುಗಳಲ್ಲಿ ಸರಕು ಸಾಗಣೆಯಿಂದ 1.30 ಲಕ್ಷ ಕೋಟಿ ರೂ. ಆದಾಯವನ್ನು ಗಳಿಸಿದೆ ಎಂದು ಇಲಾಖೆ ತಿಳಿಸಿದೆ. 2021-22ರ ಇದೇ ಅವಧಿಯ (Railways income) ಆದಾಯ ಗಳಿಕೆಯನ್ನು ಮೀರಿದೆ. 16% ಹೆಚ್ಚಳ ದಾಖಲಿಸಿದೆ. ೨೦೨೨ ಏಪ್ರಿಲ್‌ನಿಂದ 2023 ಜನವರಿ ನಡುವೆ 124 ಕೋಟಿ ಟನ್‌ ಸರಕು ಸಾಗಣೆಯಾಗಿದೆ. ರೈಲ್ವೆ 135,387 ಕೋಟಿ ರೂ. ಆದಾಯವನ್ನು ಗಳಿಸಿದೆ. ಇದಕ್ಕೂ ಹಿಂದಿನ ಸಾಲಿನ ಇದೇ ಅವಧಿಯಲ್ಲಿ 117212 ಕೋಟಿ ರೂ. ಆದಾಯ ಗಳಿಸಿತ್ತು ಎಂದು ರೈಲ್ವೆ ಇಲಾಖೆಯ ಅಂಕಿ ಅಂಶಗಳು ತಿಳಿಸಿವೆ.

ರೈಲ್ವೆ ಕಳೆದ 2022 ಏಪ್ರಿಲ್-ಡಿಸೆಂಬರ್‌ ಅವಧಿಯಲ್ಲಿ ಅನ್‌ ರಿಸರ್ವಡ್‌ ಪ್ಯಾಸೆಂಜರ್‌ ವಿಭಾಗದಲ್ಲಿ 10430 ಕೋಟಿ ರೂ. ಆದಾಯ ಗಳಿಸಿತ್ತು. 2021ರ ಇದೇ ಅವಧಿಗೆ ಹೋಲಿಸಿದರೆ 381% ಹೆಚ್ಚು. ಆಗ 2169 ಕೋಟಿ ರೂ. ಆದಾಯ ಗಳಿಸಿತ್ತು.

೨೦೨೩-೨೪ರ ಬಜೆಟ್‌ ನಲ್ಲಿ ರೈಲ್ವೆ ಬಜೆಟ್‌ಗೆ 2.4 ಲಕ್ಷ ಕೋಟಿ ರೂ.ಗಳನ್ನು ನೀಡಲಾಗಿದೆ. ಇದು ಇದುವರೆಗಿನ ಗರಿಷ್ಠ ಪ್ರಮಾಣವಾಗಿದೆ. ರೈಲ್ವೆಗೆ ಸರ್ಕಾರದ ಬಂಡವಾಳ ವೆಚ್ಚ ಗಣನೀಯ ಏರಿಕೆಯಾಗಿರುವುದನ್ನು ಇದು ಬಿಂಬಿಸಿದೆ. ದೇಶದ ಸಾರಿಗೆ ವ್ಯವಸ್ಥೆಯಲ್ಲಿ ರೈಲ್ವೆ ಗಣನೀಯ ಪಾತ್ರ ವಹಿಸುತ್ತದೆ.

Exit mobile version