ನವ ದೆಹಲಿ: ಭಾರತದಲ್ಲಿ 82 ಸ್ಟಾರ್ಟಪ್‌ಗಳಿಂದ 23,000 ಉದ್ಯೋಗಗಳನ್ನು ಕಡಿತಗೊಳಿಸಲಾಗಿದೆ. (tech layoffs) ಆರ್ಥಿಕ ಹಿಂಜರಿತದ ಭೀತಿ ಕಾರ್ಪೊರೇಟ್ ವಲಯವನ್ನು ಕಾಡುತ್ತಿದೆ. ಹೀಗಾಗಿ ಉದ್ಯೋಗ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.
Inc42 ಸಂಸ್ಥೆಯ ವರದಿಯ ಪ್ರಕಾರ 19 ಎಜುಟೆಕ್ ಸ್ಟಾರ್ಟಪ್‌ಗಳು ಇದುವರೆಗೆ 8460 ಉದ್ಯೋಗಿಗಳನ್ನು ವಜಾಗೊಳಿಸಿವೆ. ಬೈಜೂಸ್, ಓಲಾ, ಮೀಶೂ, ಎಂಪಿಎಲ್, ಉಡಾನ್, ಅನ್ ಅಕಾಡೆಮಿ, ವೇದಾಂತು ಮೊದಲಾದ ಕಂಪನಿಗಳಲ್ಲಿ ಉದ್ಯೋಗ ಕಡಿತ ಸಂಭವಿಸಿದೆ.
ಮನೆಯ ಒಳಾಂಗಣ ವಿನ್ಯಾಸ ವಲಯದ ಲಿವ್ ಸ್ಪೇಸ್ ಈ ವಾರ 100 ಸಿಬ್ಬಂದಿಯನ್ನು ವಜಾಗೊಳಿಸಿದೆ. ಕಳೆದ ವಾರ ಸಾಸ್ ಪ್ಲಾಟ್‌ಫಾರ್ಮ್ 60 ಸಿಬ್ಬಂದಿಗೆ ಗೇಟ್ ಪಾಸ್ ನೀಡಿತ್ತು. ಹೆಲ್ತ್‌ಕೇರ್ ಯುನಿಕಾರ್ನ್ ಪ್ರಿಸ್ಟಿನ್ ಕೇರ್, 350 ಸಿಬ್ಬಂದಿಯನ್ನು ವಜಾಗೊಳಿಸಿತ್ತು. ಸಾಮಾಜಿಕ ಜಾಲತಾಣ ಕಂಪನಿ ಶೇರ್‌ಚಾಟ್ ತನ್ನ ಸಿಬ್ಬಂದಿ ಬಲದಲ್ಲಿ 20% ಕಡಿತಗೊಳಿಸುವುದಾಗಿ ತಿಳಿಸಿದೆ. ಅಂದರೆ 500 ಮಂದಿ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ.