Site icon Vistara News

GST Council Meet : ಆನ್‌ಲೈನ್‌ ಗೇಮಿಂಗ್‌, ಕುದುರೆ ರೇಸ್‌,‌ ಕ್ಯಾಸಿನೊಗೆ 28% ಜಿಎಸ್‌ಟಿ ಜಾರಿ

GST Collection

#image_title

ನವ ದೆಹಲಿ: ಆನ್‌ಲೈನ್ ಗೇಮಿಂಗ್‌, ಕುದುರೆ ರೇಸ್‌, ಕ್ಯಾಸಿನೊಗೆ 28% ಜಿಎಸ್‌ಟಿ ದರವನ್ನು ಜಿಎಸ್‌ಟಿ ಕೌನ್ಸಿಲ್‌ನ 50ನೇ ಸಭೆಯಲ್ಲಿ ಮಂಗಳವಾರ ವಿಧಿಸಲಾಗಿದೆ. (GST Council Meeting) ಜಿಎಸ್‌ಟಿ ಮಂಡಳಿಯು ಆನ್‌ಲೈನ್‌ ಗೇಮಿಂಗ್‌ ಅನ್ನು ಆಟದ ಕೌಶಲ ಎಂದು ಪರಿಗಣಿಸಬೇಕೆಂಬ ಬೇಡಿಕೆಯನ್ನು ನಿರಾಕರಿಸಿದ್ದು, ಅಂಥ ವ್ಯತ್ಯಾಸವನ್ನು ಮಾಡದಿರಲು ನಿರ್ಧರಿಸಿದೆ.

ಜಿಎಸ್‌ಟಿಯು ಆನ್‌ಲೈನ್‌ ಗೇಮಿಂಗ್‌, ಕುದುರೆ ರೇಸ್‌,‌ (horse racing) ಕ್ಯಾಸಿನೊಗಳಲ್ಲಿ (casino service) ನಡೆಯುವ ಬೆಟ್ಟಿಂಗ್‌ನ ಸಂಪೂರ್ಣ ಮೌಲ್ಯಕ್ಕೆ ಅನ್ವಯವಾಗಲಿದೆ. ಈ ಸಂಬಂಧ ಜಿಎಸ್‌ಟಿ ಕಾನೂನು ಬದಲಾವಣೆಯಾಗಲಿದೆ. ಜಿಎಸ್‌ಟಿ ಕಾನೂನಿಗೆ ತಿದ್ದುಪಡಿ ತಂದ ಬಳಿಕ ಜಿಎಸ್‌ಟಿ ಅನ್ವಯಿಸಲಿದೆ.

ಇದನ್ನೂ ಓದಿ: GST Collection: ಜೂನ್‌ನಲ್ಲಿ 1.61 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ; ಕರ್ನಾಟಕದ ಕೊಡುಗೆಯೂ ಏರಿಕೆ

ಕ್ಯಾನ್ಸರ್‌ ಔಷಧಗಳ ಆಮದಿಗೆ ವಿನಾಯಿತಿ: ಕ್ಯಾನ್ಸರ್‌ ಶಮನದ ಚಿಕಿತ್ಸೆಯಲ್ಲಿ ಬಳಸುವ ಡಿನುಟುಕ್ಸಿಮಾಬ್‌ (Dinutuximab) ಸೇರಿದಂತೆ ಕೆಲ ಪ್ರಮುಖ ಔಷಧಗಳ ಆಮದಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ.

ದಿಲ್ಲಿಯಲ್ಲಿ ನಡೆದ ಸಭೆಯಲ್ಲಿ ಆನ್‌ಲೈನ್‌ ಗೇಮ್‌ಗಳನ್ನು ಕೌಶಲದ ಆಟ ಎಂದು ಪರಿಗಣಿಸಲು ಸಾಧ್ಯ ಇಲ್ಲ ಎಂದು ತೀರ್ಮಾನಿಸಲಾಗಿದೆ. ಇದರಿಂದ ಆನ್‌ಲೈನ್‌ ಗೇಮಿಂಗ್‌ ಕಂಪನಿಗಳಿಗೆ ಭಾರಿ ಹಿನ್ನಡೆಯಾಗುವ ನಿರೀಕ್ಷೆ ಇದೆ. ಅವುಗಳ ಲಾಭಾಂಶ ಕಡಿಮೆಯಾಗಲಿದೆ. ಆನ್‌ಲೈನ್‌ ಗೇಮಿಂಗ್‌ ಕಂಪನಿಗಳು 28% ಜಿಎಸ್‌ಟಿ ಹಾಕದಿರುವಂತೆ ಈ ಹಿಂದೆ ಒತ್ತಾಯಿಸಿದ್ದವು. ಇಂಥ ತೆರಿಗೆ ಇದ್ದಲ್ಲಿ ಇಂಡಸ್ಟ್ರಿ ಉಳಿಯದು ಎಂದು ಗೇಮಿಂಗ್‌ ಕಂಪನಿಗಳ ವಲಯ ಆತಂಕ ವ್ಯಕ್ತಪಡಿಸಿತ್ತು.

ಯಾವುದು ಅಗ್ಗ? ಸಿನಿಮಾ ಮಂದಿರಗಳಲ್ಲಿ ಪಾಪ್‌ ಕಾರ್ನ್‌, ಕೋಲ್ಡ್‌ ಡ್ರಿಂಕ್ಸ್‌ ಪೂರೈಕೆಗೆ ಟ್ಯಾಕ್ಸ್:‌ ಸಿನಿಮಾ ಮಂದಿರಗಳಲ್ಲಿ ಸಿನಿಮಾ ಟಿಕೆಟ್‌, ವೀಕ್ಷಕರಿಗೆ ಪಾಪ್‌ ಕಾರ್ನ್‌ ಮತ್ತಿತರ ಸ್ನ್ಯಾಕ್ಸ್‌, ಕೋಲ್ಡ್‌ ಡ್ರಿಂಕ್ಸ್‌ ಪೂರೈಕೆಯ ಮೇಲೆ ಜಿಎಸ್‌ಟಿ ಅನ್ವಯವಾಗಲಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿನ ರೆಸ್ಟೊರೆಂಟ್‌ಗಳ ಮೇಲಿನ ಜಿಎಸ್‌ಟಿಯನ್ನು 18%ರಿಂದ 5%ಕ್ಕೆ ಇಳಿಸಲಾಗಿದೆ. ಈಗ 100 ರೂ.ಗಿಂತ ಕಡಿಮೆ ಬೆಲೆಯ ಸಿನಿ ಟಿಕೆಟ್‌ ಮೇಲೆ 12% ಜಿಎಸ್‌ಟಿ ಇದೆ. ಅದಕ್ಕೂ ಹೆಚ್ಚಿನ ದರದ ಟಿಕೆಟ್‌ ಮೇಲೆ 18% ಜಿಎಸ್‌ಟಿ ಇದೆ. ಬೇಯಿಸದ ಫುಡ್‌, ಮೀನು, ಫುಡ್‌ ಪೇಸ್ಟ್‌ ಮೇಲಿನ ಜಿಎಸ್‌ಟಿ 18%ರಿಂದ 5%ಕ್ಕೆ ಇಳಿಕೆಯಾಗಲಿದೆ.

Exit mobile version