Site icon Vistara News

Name game | 29 ವಿಮಾನ ನಿಲ್ದಾಣ, ಟರ್ಮಿನಲ್‌ಗಳಿಗೆ ಖ್ಯಾತನಾಮರ ಹೆಸರು ನಾಮಕರಣ

airport

ನವ ದೆಹಲಿ: ದೇಶದಲ್ಲಿ 29 ಏರ್‌ಪೋರ್ಟ್‌ಗಳು ಮತ್ತು ಟರ್ಮಿನಲ್‌ಗಳಿಗೆ ಖ್ಯಾತನಾಮರ ಹೆಸರುಗಳನ್ನು ನಾಮಕರಣ (Name game) ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಒಟ್ಟು 24 ವಿಮಾನ ನಿಲ್ದಾಣಗಳು ಮತ್ತು 5 ಟರ್ಮಿನಲ್‌ಗಳನ್ನು ಹೆಸರಾಂತ ವ್ಯಕ್ತಿಗಳು, ಸಾಧಕರ ಹೆಸರುಗಳನ್ನು ಇಡಲಾಗಿದೆ ಎಂದು ಆರ್‌ಟಿಐ ಅಡಿಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಸರ್ಕಾರ ಉತ್ತರಿಸಿದೆ.

ಕಳೆದ ಸೆಪ್ಟೆಂಬರ್‌ 28ರಂದು ಚಂಡೀಗಢ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಗತ್‌ ಸಿಂಗ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೆಸರಿಡಲಾಗಿತ್ತು. ಭಗತ್‌ ಸಿಂಗ್‌ ಅವರ 115ನೇ ಜನ್ಮ ದಿನಾಚರಣೆಗೆ ಮುನ್ನ ಅವರ ಹೆಸರನ್ನು ಏರ್‌ಪೋರ್ಟ್‌ಗೆ ಇಡಲಾಗಿತ್ತು.

ಪಟ್ಟಿಯ ಪ್ರಕಾರ, ಮೂವರು ಮಾಜಿ ಪ್ರಧಾನಿಗಳ ಹೆಸರುಗಳನ್ನು ಏರ್ ಪೋರ್ಟ್‌ಗೆ ಇಡಲಾಗಿದೆ, ಇಂದಿರಾ ಗಾಂಧಿ ಇಂಟರ್‌ನ್ಯಾಶನಲ್‌ ಏರ್‌ಪೋರ್ಟ್‌ (ದಿಲ್ಲಿ), ರಾಜೀವ್‌ ಗಾಂಧಿ ಇಂಟರ್‌ನ್ಯಾಶನಲ್‌ ಏರ್‌ಪೋರ್ಟ್‌( ಹೈದರಾಬಾದ್)‌, ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಏರ್‌ಪೋರ್ಟ್‌ (ವಾರಾಣಸಿ), ಚೌಧುರಿ ಚರಣ್‌ ಸಿಂಗ್‌ ಏರ್‌ಪೋರ್ಟ್‌ (ಲಖನೌ).

ಒಡಿಶಾದ ಭುವನೇಶ್ವರದಲ್ಲಿ ಮಾಜಿ ಸಿಎಂ, ಸ್ವಾತಂತ್ರ್ಯ ಹೋರಾಟಗಾರ ಬಿಜು ಪಟ್ನಾಯಕ್‌ ಅವರ ಹೆಸರನ್ನು ಏರ್‌ ಪೋರ್ಟ್‌ಗೆ ಇಡಲಾಗಿದೆ. ಅಣ್ಣಾ ಇಂಟರ್‌ನ್ಯಾಶನಕ್‌ ಟರ್ಮಿನಲ್‌, ಕಾಮರಾಜ್‌ ಡೊಮೆಸ್ಟಿಕ್‌ ಟರ್ಮಿನಲ್‌, ಎನ್‌ಟಿ ರಾಮರಾವ್‌ ಟರ್ಮಿನಲ್‌ಗಳು ಇವೆ.

Exit mobile version