ನವ ದೆಹಲಿ: ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿರುವ ಈ ವರ್ಷದ ಏಷ್ಯಾ ಮೂಲದ ದಾನಿಗಳ ಪಟ್ಟಿಯಲ್ಲಿ ಗೌತಮ್ ಅದಾನಿ, (Gautam Adani) ಶಿವ್ ನಡಾರ್, ಅಶೋಕ್ ಸೂಟಾ ಇದ್ದಾರೆ.
ಅದಾನಿ ಸಮೂಹದ ಸ್ಥಾಪಕ ಗೌತಮ್ ಅದಾನಿ ಅವರು ಈ ವರ್ಷ ಜೂನ್ನಲ್ಲಿ ತಮ್ಮ 60ನೇ ಹುಟ್ಟು ಹಬ್ಬದ ಸಂದರ್ಭ, 60,000 ಕೋಟಿ ರೂ.ಗಳನ್ನು ದಾನವಾಗಿ ನೀಡಿದ್ದರು. ಆರೋಗ್ಯ, ಶಿಕ್ಷಣ, ಕೌಶಲಾಭಿವೃದ್ಧಿಗೆ ಈ ಹಣ ವಿನಿಯೋಗವಾಗಲಿದೆ.
1996ರಲ್ಲಿ ಅದಾನ ಫೌಂಡೇಷನ್ ಅನ್ನು ಸ್ಥಾಪಿಸಲಾಗಿತ್ತು. ಅದರ ಮೂಲಕ ಈ ಹಣ ಸಮಾಜಸೇವೆಗೆ ವಿನಿಯೋಗವಾಗಲಿದೆ. ಈ ಫೌಂಡೇಷನ್ ಪ್ರತಿ ವರ್ಷ ಅಂದಾಜು 37 ಲಕ್ಷ ಜನರಿಗೆ ನೆರವು ನೀಡುತ್ತದೆ. ಶಿವ್ ನಡಾರ್ ಅವರು ಈ ವರ್ಷ 11,600 ಕೋಟಿ ರೂ. ನೆರವು ಘೋಷಿಸಿದ್ದರು. ಅವರು ಎಚ್ಸಿಎಲ್ ಟೆಕ್ನಾಲಜೀಸ್ನ ಸಹ ಸಂಸ್ಥಾಪಕರಾಗಿದ್ದಾರೆ.