ಮುಂಬಯಿ: ದೇಶದ ಐದನೇ ಅತಿ ದೊಡ್ಡ ಐಟಿ ಸೇವಾ ರಫ್ತುದಾರ ಟೆಕ್ ಮಹೀಂದ್ರಾ, (Tech Mahindra) ಮುಂದಿನ 5 ವರ್ಷಗಳಲ್ಲಿ 3,000 ಜನರನ್ನು ನೇಮಕ ಮಾಡಿಕೊಳ್ಳುವುದಾಗಿ ತಿಳಿಸಿದೆ. ಕಂಫನಿಯ ಗುಜರಾತ್ ಘಟಕಕ್ಕೆ ನೇಮಕ ನಡೆಯಲಿದೆ.
ಗುಜರಾತ್ನಲ್ಲಿ ಟೆಕ್ ಮಹೀಂದ್ರಾದ ಪ್ರಸಕ್ತ ಸಿಬ್ಬಂದಿ ಬಲ ಎಷ್ಟೆಂಬುದು ಖಚಿತವಾಗಿಲ್ಲ. ಆದರೆ ಗುಜರಾತ್ ಸರ್ಕಾರದ ಜತೆಗೆ ಹಲವು ಐಟಿ ಯೋಜನೆಗಳಿಗೆ ಸಂಬಂಧಿಸಿದ ಒಪ್ಪಂದಗಳಿಗೆ ಕಂಪನಿಯು ಸಹಿ ಹಾಕಿದೆ.
ರಾಜ್ಯದಲ್ಲಿ ಉದ್ದಿಮೆ ವಲಯದ ಅನುಕೂಲಕ್ಕಾಗಿ ಹಲವು ಐಟಿ ಯೋಜನೆಗಳನ್ನು ಕಂಪನಿ ಹಮ್ಮಿಕೊಳ್ಳಲಿದೆ. ಸರ್ಕಾರದ ಸಹಭಾಗಿತ್ವದಲ್ಲಿ ಇದುವರೆಗೆ 15 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ಕಂಪನಿ ತಿಳಿಸಿದೆ.