ನವ ದೆಹಲಿ: ಐಟಿ ದಿಗ್ಗಜ ವಿಪ್ರೊ ಕಳೆದ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ 3,053 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 2.8% ಹೆಚ್ಚಳವಾಗಿದೆ. (Wipro) ನಿರೀಕ್ಷೆಗೂ ಮೀರಿ ಕಂಪನಿ ಲಾಭ ಗಳಿಸಿದೆ.
ಕಂಪನಿಯ ಆದಾಯದಲ್ಲಿ 14.3% ಏರಿಕೆಯಾಗಿದೆ. 23,229 ಕೋಟಿ ರೂ.ಗೆ ವೃದ್ಧಿಸಿದೆ. ವಿಪ್ರೊ ಕಂಪನಿಯು ಪ್ರತಿ ಷೇರಿಗೆ 1 ರೂ. ಮಧ್ಯಂತರ ಡಿವಿಡೆಂಡ್ ಅನ್ನು ಪ್ರಕಟಿಸಿದೆ. ಫೆಬ್ರವರಿ 10 ಅಥವಾ ಅದಕ್ಕೂ ಮೊದಲು ಡಿವಿಡೆಂಡ್ ವಿತರಣೆಯಾಗಲಿದೆ ಎಂದು ಕಂಪನಿ ತಿಳಿಸಿದೆ.
ವಿಪ್ರೊ ಷೇರು ದರ ಕಳೆದೊಂದು ವರ್ಷದಲ್ಲಿ 40% ಇಳಿಕೆ ದಾಖಲಿಸಿತ್ತು. ಆದರೆ ಕಳೆದ ಮೂರು ವರ್ಷದಲ್ಲಿ 55% ಆದಾಯವನ್ನು ಕೊಟ್ಟಿತ್ತು. ಪ್ರಸ್ತುತ ಷೇರು ದರ 393 ರೂ.ಗಳಾಗಿದೆ.