ನವ ದೆಹಲಿ: ವಿದ್ಯುತ್, ರಸಗೊಬ್ಬರ ತಯಾರಿಕೆ, ವಾಹನಗಳಲ್ಲಿ ಬಳಸುವ ಸಿಎನ್‌ಜಿ ಉತ್ಪಾದನೆಗೆ ಬಳಸುವ ನೈಸರ್ಗಿಕ ಅನಿಲದ ದರದಲ್ಲಿ ಶುಕ್ರವಾರ ದಾಖಲೆಯ 40% ಹೆಚ್ಚಳವಾಗಿದೆ. ( Natural Gas price hike) ಜಾಗತಿಕ ಮಟ್ಟದಲ್ಲಿ ಇಂಧನ ದರ ಸತತವಾಗಿ ಏರಿಕೆಯಾಗುತ್ತಿರುವುದು ಇದಕ್ಕೆ ಕಾರಣ.
ನೈಸರ್ಗಿಕ ಅನಿಲವನ್ನು ರಸಗೊಬ್ಬರ ತಯಾರಿಕೆಯಲ್ಲಿ ಕೂಡ ಬಳಸುತ್ತಾರೆ. ವಿದ್ಯುತ್ ಉತ್ಪಾದನೆಗೂ ಬಳಸುತ್ತಾರೆ. ಇದನ್ನು ಸಿಎನ್‌ಜಿಯಾಗಿ ಪರಿವರ್ತಿಸಬಹುದು. ಅಡುಗೆ ಮನೆಗೆ ಅನಿಲವಾಗಿ ಪೂರೈಸಬಹುದು. ಆದರೆ ಕಳೆದೊಂದು ವರ್ಷದಲ್ಲಿ ನೈಸರ್ಗಿಕ ಅನಿಲ ದರದಲ್ಲಿ 70% ದರ ಹೆಚ್ಚಳ ಸಂಭವಿಸಿದೆ.
ಸರ್ಕಾರ ಪ್ರತಿ 6 ತಿಂಗಳಿಗೊಮ್ಮೆ ನೈಸರ್ಗಿಕ ಅನಿಲದ ದರವನ್ನು ಪರಿಷ್ಕರಿಸುತ್ತದೆ. ಅಮೆರಿಕ, ಕೆನಡಾ, ರಷ್ಯಾದಲ್ಲಿನ ನೈಸರ್ಗಿಕ ಅನಿಲ ದರವನ್ನು ಪರಿಗಣಿಸಿ ಸ್ಥಳೀಯ ನೈಸರ್ಗಿಕ ಅನಿಲದ ದರವನ್ನು ನಿಗದಿಪಡಿಸಲಾಗುತ್ತದೆ. ಅನಿಲ ದರ ಹೆಚ್ಚಳದ ಪರಿಣಾಮ ಹಣದುಬ್ಬರ ಹೆಚ್ಚುವ ಸಾಧ್ಯತೆ ಇದೆ.