ಬೆಂಗಳೂರು: ರಾಜ್ಯದ ಎಲೆಕ್ಟ್ರಾನಿಕ್ಸ್ ವಿನ್ಯಾಸ ಮತ್ತು ಉತ್ಪಾದನೆ ವಲಯದಲ್ಲಿ ಏಳು ಕಂಪನಿಗಳು ಒಟ್ಟು 47,000 ಕೋಟಿ ರೂ. ಬಂಡವಾಳ ಹೂಡಿಕೆ ಮಾಡುವ ಪ್ರಸ್ತಾಪವನ್ನು (Invest Karnataka 2022 ) ಮುಂದಿಟ್ಟಿದ್ದು, ಎಂಒಯುಗೆ ಸಹಿ ಹಾಕಿವೆ.
ಸೆಮಿಕಂಡಕ್ಟರ್ ಫ್ಯಾಬ್ ವಲಯದಲ್ಲಿ ಐಎಸ್‌ಎಂಸಿ ಅನಾಲಾಗ್ ಫ್ಯಾಬ್ ಕಂಪನಿಯು 22,900 ಕೋಟಿ ರೂ. ಹೂಡಿಕೆ ಮಾಡಲಿದೆ. ಎಪಿಸಿಲೋನ್ ಲಿಥಿಯಂ ಇಯಾನ್ ಸೆಲ್ ಬಿಡಿಭಾಗ ಉತ್ಪಾದನೆಗೆ 9,000 ಕೋಟಿ ರೂ. ಹೂಡಿಕೆ ಮಾಡಲಿದೆ. ಎಕ್ಸೈಡ್ ಎನರ್ಜಿ ಸಲ್ಯೂಷನ್ಸ್ 6,002 ಕೋಟಿ ರೂ. ಹೂಡಿಕೆ ಮಾಡಲಿದೆ. ಸನ್ ಕ್ಯಾಚರ್ 4,500 ಕೋಟಿ ರೂ. ಹೂಡಿಕೆ ಮಾಡಲು ಉದ್ದೇಶಿಸಿದೆ.
ಇ-ಮೊಬಿಲಿಟಿ, ಡೇಟಾ ಸೆಂಟರ್: ಇ-ಮೊಬಿಲಿಟಿ, ಏರೊಸ್ಪೇಸ್ ಮತ್ತು ಡಿಫೆನ್ಸ್, ಡೇಟಾ ಸೆಂಟರ್ ವಲಯದಲ್ಲಿ 9 ಕಂಪನಿಗಳು 22,000 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲು ಎಂಒಯುಗೆ ಸಹಿ ಹಾಕಿವೆ.