Site icon Vistara News

ವಿಸ್ತಾರ Money Guide | Penny Stocks | ಹೂಡಿಕೆದಾರರಿಗೆ ಅಲ್ಪಾವಧಿಯಲ್ಲೇ ಹೆಚ್ಚು ಲಾಭ ನೀಡಿದ 5 ಪೆನ್ನಿ ಸ್ಟಾಕ್ಸ್

penny stocks

ಏನಿದು ಪೆನ್ನಿ ಸ್ಟಾಕ್ಸ್?

ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ಮಾಡುವವರಿಗೆ ಪೆನ್ನಿ ಸ್ಟಾಕ್‌ಗಳು ಅಂದರೆ ಪರಿಚಿತವಾಗಿರುತ್ತವೆ. ಅತಿ ಕಡಿಮೆ ಬೆಲೆಗೆ ಸಿಗುವ ಷೇರುಗಳಿವು. ಈ ಕಂಪನಿಗಳ ಷೇರು ಮಾರುಕಟ್ಟೆ ಬಂಡವಾಳ ಮೌಲ್ಯ, ಬಿಸಿನೆಸ್‌ ಮಾದರಿಗಳು ಕೂಡ ದುರ್ಬಲವಾಗಿರುತ್ತವೆ. ಹೀಗಿದ್ದರೂ, ಕೆಲವು ಪೆನ್ನಿ ಸ್ಟಾಕ್‌ಗಳು ಹೂಡಿಕೆದಾರರಿಗೆ ಕ್ಷಿಪ್ರವಾಗಿ ಭರ್ಜರಿ ಆದಾಯ ತಂದುಕೊಡಬಲ್ಲುದು. ಹೂಡಿಕೆದಾರರಿಗೆ ಅವರ ಹೂಡಿಕೆಯ ಹಲವಾರು ಪಟ್ಟು ಲಾಭ ಕೊಡುವ ಷೇರುಗಳನ್ನು ಮಲ್ಟಿಬ್ಯಾಗರ್‌ ಸ್ಟಾಕ್ಸ್‌ ಎನ್ನುತ್ತಾರೆ. ಈ ವರ್ಷ ಅತ್ಯಲ್ಪ ಅವಧಿಯಲ್ಲಿ ಮಲ್ಟಿ ಬ್ಯಾಗರ್‌ ಸ್ಟಾಕ್ಸ್‌ಗಳಾದ ಪೆನ್ನಿ ಸ್ಟಾಕ್ಸ್‌ಗಳ ಬಗ್ಗೆ ತಿಳಿದುಕೊಳ್ಳೋಣ.

ಹೇಮಾಂಗ್‌ ರಿಸೋರ್ಸ್‌ ಲಿಮಿಟೆಡ್‌ (Hemang Resources Ltd) ಕಲ್ಲಿದ್ದಲು ವ್ಯಾಪಾರ ಹಾಗೂ ನಿರ್ಮಾಣ ವಲಯದ ಕಂಪನಿ. ಈ ಕಂಪನಿಯ ಷೇರು ದರ 2022ರಲ್ಲಿ 20 ಪಟ್ಟು ವೃದ್ಧಿಸಿದೆ. ಈ ವರ್ಷದ ಆರಂಭದಲ್ಲಿ 3 ರೂ.ಗಳಿದ್ದ ಷೇರು ದರ ಈಗ 70 ರೂ.ಗೆ ಏರಿಕೆಯಾಗಿದೆ. ಕಂಪನಿಯು ಆಮದು ಮಾಡಿದ ಹಾಗೂ ಇಲ್ಲಿಯೇ ತೆಗೆದ ಕಲ್ಲಿದ್ದಲನ್ನು ಮಾರಾಟ ಮಾಡುತ್ತದೆ. ನಿರ್ಮಾಣ, ಲಾಜಿಸ್ಟಿಕ್ಸ್‌ ವಲಯದಲ್ಲೂ ತೊಡಗಿಸಿಕೊಂಡಿದೆ.‌

ಕೈಸರ್‌ ಕಾರ್ಪೊರೇಷನ್:‌ (Kaiser Corporation) ಕೈಸರ್‌ ಕಾರ್ಪೊರೇಷನ್‌ ಪ್ರಿಂಟಿಂಗ್‌ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಸಣ್ಣ ಮತ್ತು ಮಧ್ಯಮ ಕಾರ್ಪೊರೇಟ್‌ ಲೇಬಲ್ಸ್‌ ಮತ್ತು ಕಾರ್ಟೂನ್‌ ಮುದ್ರಣದಲ್ಲಿ ತೊಡಗಿಸಿಕೊಂಡಿದೆ. 2022ರ ಜನವರಿಯಲ್ಲಿ 3 ರೂ. ಆಸುಪಾಸಿನಲ್ಲಿದ್ದ ಷೇರು ದರ ಈಗ 52 ರೂ. ಆಸುಪಾಸಿನಲ್ಲಿದೆ.

ಅಲೈಯನ್ಸ್‌ ಇಂಟಿಗ್ರೇಟೆಡ್‌ ಮೆಟಾಲಿಕ್ಸ್‌ (Alliance Integrated Metaliks) ಈ ಕಂಪನಿಯ ಷೇರು ದರ ಜನವರಿ 3ರಂದು 2 ರೂ. ಇತ್ತು. ಈಗ ೪೨ ರೂ.ಗೆ ಏರಿದೆ.

ಸೋನಾಲ್‌ ಅಡೇಸಿವ್ ಲಿಮಿಟೆಡ್‌ (Sonal Adhesives ltd) ಈ ಕಂಪನಿ ನಾನಾ ವಿಧದ ಅಡೇಸಿವ್‌ ಟೇಪ್‌ಗಳನ್ನು ಉತ್ಪಾದಿಸುತ್ತದೆ. ಈ ವರ್ಷ ಆರಂಭದಲ್ಲಿ 10 ರೂ.ಗಳಲ್ಲಿದ್ದ ಕಂಪನಿಯ ಷೇರು ದರ ಈಗ 102 ರೂ.ಗೆ ಏರಿದೆ.

ಕೆಬಿಎಸ್‌ ಇಂಡಿಯಾ ಲಿಮಿಟೆಡ್‌ (KBS India Ltd) ಈ ಕಂಪನಿಯ ಷೇರು ದರ 2022ರ ಆರಂಭದಲ್ಲಿ 10 ರೂ. ಇತ್ತು. ಈಗ ೧೦೬ ರೂ.ಗೆ ಏರಿಕೆಯಾಗಿದೆ.

ಷೇರುಜನವರಿ 2022ರಲ್ಲಿ ದರ2022ರ ಡಿಸೆಂಬರ್‌ನಲ್ಲಿ ದರ
ಕೈಸರ್‌ ಕಾರ್ಪೊರೇಷನ್3 ರೂ.52 ರೂ.
ಅಲೈಯನ್ಸ್‌ ಇಂಟಿಗ್ರೇಟೆಡ್‌ ಮೆಟಾಲಿಕ್ಸ್2 ರೂ.42 ರೂ.
ಹೇಮಾಂಗ್‌ ರಿಸೋರ್ಸಸ್3 ರೂ.70 ರೂ.
ಸೋನಾಲ್‌ ಅಡೇಸಿವ್10 ರೂ.102 ರೂ.
ಕೆಬಿಎಸ್‌ ಇಂಡಿಯಾ10 ರೂ.106 ರೂ.
Exit mobile version