Site icon Vistara News

Agriculture budget : 9 ವರ್ಷಗಳಲ್ಲಿ ಕೃಷಿ ಬಜೆಟ್‌ 5 ಪಟ್ಟು ಹೆಚ್ಚಳ, 1.25 ಲಕ್ಷ ಕೋಟಿ ರೂ.ಗೆ ಏರಿಕೆ: ಪ್ರಧಾನಿ ಮೋದಿ

budget

ನವ ದೆಹಲಿ: ಕಳೆದ 8-9 ವರ್ಷಗಳಲ್ಲಿ ಕೃಷಿ ವಲಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ಕೃಷಿ ಬಜೆಟ್‌ 5 ಪಟ್ಟು ವೃದ್ಧಿಸಿದ್ದು, (agriculture budget) 1.25 ಲಕ್ಷ ಕೋಟಿ ರೂ.ಗೆ ವೃದ್ಧಿಸಿದೆ. ತೈಲಬೀಜಗಳು ಮತ್ತು ಖಾದ್ಯ ತೈಲಕ್ಕೆ ಆಮದು ಅವಲಂಬನೆ ಕಡಿಮೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ. ಕೃಷಿ ಮತ್ತು ಸಹಕಾರ ವಲಯದ ಪ್ರಮುಖರೊಡನೆ ಬಜೆಟ್‌ ಕುರಿತ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಾವು 2014ರಲ್ಲಿ ಅಧಿಕಾರಕ್ಕೆ ಬರುವುದಕ್ಕೆ ಮೊದಲು ಕೃಷಿ ಬಜೆಟ್‌ 25,000 ಕೋಟಿ ರೂ.ಗಿಂತಲೂ ಕಡಿಮೆ ಇತ್ತು. ಈಗ 1.25 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದರು. ಧವಸ ಧಾನ್ಯಗಳ ಉತ್ಪಾದನೆ ಹೆಚ್ಚಿಸಲು ಸರ್ಕಾರ ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಂಡಿದೆ. ಭಾರತ ಅಡುಗೆ ಎಣ್ಣೆಯನ್ನು ಆಮದು ಮಾಡಿಕೊಳ್ಳಲು 1.5 ಲಕ್ಷ ಕೋಟಿ ರೂ. ಖರ್ಚು ಮಾಡುತ್ತಿದೆ. ಹೀಗಾಗಿ ದೇಶದಲ್ಲಿಯೇ ತೈಲ ಬೀಜಗಳ ಉತ್ಪಾದನೆಗೆ ಹೆಚ್ಚಿನ ಅವಕಾಶ ಇದೆ. ಬಜೆಟ್‌ ಕೃಷಿ ಸ್ಟಾರ್ಟಪ್‌ಗಳ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಈಗ ಕೃಷಿ ಸ್ಟಾರ್ಟಪ್‌ಗಳ ಸಂಖ್ಯೆ 3,000ಕ್ಕೆ ಏರಿಕೆಯಾಗಿದೆ ಎಂದರು.

ಸಹಕಾರ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸಂಭವಿಸುತ್ತಿದೆ. ಈ ಹಿಂದೆ ಕೆಲ ರಾಜ್ಯಗಳಿಗೆ ಸೀಮಿತವಾಗಿತ್ತು. ಈಗ ದೇಶವಿಡೀ ವ್ಯಾಪಿಸುತ್ತಿದೆ ಎಂದರು. ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಫೆಬ್ರವರಿ 1ರಂದು ಮುಂಗಡಪತ್ರವನ್ನು ಮಂಡಿಸಿದ್ದರು.

Exit mobile version