Site icon Vistara News

Flipkart | ಪ್ಲಿಪ್‌ಕಾರ್ಟ್‌ಗೆ 2021-22ರಲ್ಲಿ 50,000 ಕೋಟಿ ರೂ. ಆದಾಯ, 3,404 ಕೋಟಿ ರೂ. ನಷ್ಟ

flipkart

ಬೆಂಗಳೂರು: ವಾಲ್‌ ಮಾರ್ಟ್‌ ಒಡೆತನದ ಇ-ಕಾಮರ್ಸ್‌ ದಿಗ್ಗಜ ಫ್ಲಿಪ್‌ಕಾರ್ಟ್‌ ಇಂಡಿಯಾ, (Flipkart) 2021-22ರಲ್ಲಿ ತನ್ನ ಆದಾಯದಲ್ಲಿ 34.5% ಏರಿಕೆ ದಾಖಲಿಸಿದ್ದು, 50,992 ಕೋಟಿ ರೂ.ಗೆ ವೃದ್ಧಿಸಿದೆ. ನಷ್ಟ 3,404 ಕೋಟಿ ರೂ.ಗೆ ಏರಿಕೆಯಾಗಿದೆ.

ಕಂಪನಿಯ ಆದಾಯದಲ್ಲಿ 19% ಹೆಚ್ಚಳವಾಗಿದ್ದರೆ, ನಷ್ಟದಲ್ಲಿ 39% ಏರಿಕೆಯಾಗಿದೆ. 2020ರಲ್ಲಿ ಫ್ಲಿಪ್‌ಕಾರ್ಟ್‌ನ ಬಿ2ಬಿ ಮಾರುಕಟ್ಟೆ ವಹಿವಾಟನ್ನು ಆರಂಭಿಸಿತ್ತು.

ದಾಸ್ತಾನುಗಳ ನಿರ್ವಹಣೆ, ಉದ್ಯೋಗಿಗಳ ವೇತನ, ಹಣಕಾಸು ವೆಚ್ಚದಲ್ಲಿ ಗಣನೀಯ ಏರಿಕೆ ದಾಖಲಾಗಿದೆ. ಫ್ಲಿಪ್‌ ಕಾರ್ಟ್‌ ಇಂಟರ್‌ನೆಟ್‌ನ ಆದಾಯದಲ್ಲಿ ಕೂಡ 33% ಹೆಚ್ಚಳ ದಾಖಲಾಗಿದೆ. ಫ್ಲಿಪ್‌ಕಾರ್ಟ್‌ ಒಡೆತನದ ಫ್ಯಾಷನ್‌ ಸಂಸ್ಥೆ ಮೈಂತ್ರಾ 2021-22ರಲ್ಲಿ 3,501 ಕೋಟಿ ರೂ. ಆದಾಯ ಗಳಿಸಿದೆ. 597 ಕೋಟಿ ರೂ. ನಷ್ಟಕ್ಕೀಡಾಗಿದೆ. 2020-21ರಲ್ಲಿ 429 ಕೋಟಿ ರೂ. ನಷ್ಟಕ್ಕೀಡಾಗಿತ್ತು.

Exit mobile version