ನವ ದೆಹಲಿ: ಬಹು ನಿರೀಕ್ಷೆಯ ೫ಜಿ ಸ್ಪೆಕ್ಟ್ರಮ್ ಹರಾಜಿಗೆ ಸಂಬಂಧಿಸಿ ರಿಲಯನ್ಸ್ ಜಿಯೊ, ೧೪,೦೦೦ ಕೋಟಿ ರೂ.ಗಳ ಭದ್ರತಾ ಠೇವಣಿಯನ್ನು (ಅರ್ನೆಸ್ಟ್ ಮನಿ ಡೆಪಾಸಿಟ್ – ಇಎಂಡಿ) ಜಮೆ ಮಾಡಿದೆ.
ಭಾರ್ತಿ ಏರ್‌ಟೆಲ್ ೫,೫೦೦ ಕೋಟಿ ರೂ, ಅದಾನಿ ಡೇಟಾ ೧೦೦ ಕೋಟಿ ರೂ, ವೊಡಾಫೋನ್ ೨,೨೦೦ ಕೋಟಿ ರೂ. ಠೇವಣಿಯನ್ನು ಸಲ್ಲಿಸಿವೆ. ಇಎಂಡಿ ಮೊತ್ತವು ಕಂಪನಿಯ ಬಿಡ್ಡಿಂಗ್ ಕಾರ್ಯತಂತ್ರ, ಅರ್ಹತೆ, ಸಾಮರ್ಥ್ಯವನ್ನು ಬಿಂಬಿಸುತ್ತದೆ. ದೂರಸಂಪರ್ಕ ಇಲಾಖೆಯು ಈ ವಿಷಯವನ್ನು ತಿಳಿಸಿದೆ.
ಜುಲೈ ೨೬ರಿಂದ ೫ಜಿ ಸ್ಪೆಕ್ಟ್ರಮ್ ಹರಾಜು ನಡೆಯಲಿದೆ. ಇಎಂಡಿ ಆಧಾರದಲ್ಲಿ ಜಿಯೊ ಅತಿ ಹೆಚ್ಚು ಅರ್ಹತಾ ಅಂಕಗಳನ್ನು (೧೫೯೮೩೦) ಗಳಿಸಿದೆ. ಏರ್‌ಟೆಲ್ ೬೬೩೩೦ ಅಂಕಗಳನ್ನು ಪಡೆದಿದೆ. ವೊಡಾಫೋನ್ ಐಡಿಯಾ ೨೯೩೭೦ ಮತ್ತು ಅದಾನಿ ಗ್ರೂಪ್ ೧೬೫೦ ಅಂಕಗಳನ್ನು ಗಳಿಸಿದೆ.