ನವ ದೆಹಲಿ: ಭಾರತದ ಮೊಟ್ಟ ಮೊದಲ ೫ಜಿ ಹರಾಜಿನ ಮೊದಲ ದಿನ ಮಂಗಳವಾರ ಮುಕ್ತಾಯವಾಗಿದ್ದು, ೪ ಸುತ್ತುಗಳಲ್ಲಿ ಹರಾಜು ನಡೆಯಿತು. ನಾಳೆ ೫ನೇ ಸುತ್ತಿನಲ್ಲಿ ಮುಂದುವರಿಯಲಿದೆ. ಬೆಳಗ್ಗೆ ೧೦ ಗಂಟೆಗೆ ಆರಂಭವಾದ ಹರಾಜು ಪ್ರಕ್ರಿಯೆ ಸಂಜೆ ೬ಕ್ಕೆ ಮುಗಿಯಿತು.
ರಿಲಯನ್ಸ್ ಜಿಯೊ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಹಾಗೂ ಅದಾನಿ ಡೇಟಾ ನೆಟ್‌ವರ್ಕ್ಸ್ ಕಣದಲ್ಲಿವೆ. ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಹರಾಜಿನಿಂದ ಸರ್ಕಾರದ ಬೊಕ್ಕಸಕ್ಕೆ ೧ ಲಕ್ಷ ಕೋಟಿ ರೂ. ತನಕ ಆದಾಯ ಸಿಗುವ ನಿರೀಕ್ಷೆ ಇದೆ.
೪ಜಿಗಿಂತ ೧೦ ಪಟ್ಟು ಹೆಚ್ಚು ವೇಗವನ್ನು ಹೊಂದಿರುವ ೫ಜಿಯಿಂದ ಟೆಲಿಕಾಂ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗುವ ನಿರೀಕ್ಷೆ ಇದೆ. ಆರ್ಥಿಕ ಅಭಿವೃದ್ಧಿಗೂ ಈ ತಂತ್ರಜ್ಞಾನ ಸಹಕರಿಸುವ ಸಾಧ್ಯತೆ ಇದೆ. ಒಟ್ಟು ೪.೩ ಲಕ್ಷ ಕೋಟಿ ರೂ. ಮೌಲ್ಯದ ಸ್ಪೆಕ್ಟ್ರಮ್ ಅನ್ನು ಹರಾಜಿಗಿಡಲಾಗಿದ್ದು, ಭಾರತದ ಇದುವರೆಗಿನ ಅತಿ ದೊಡ್ಡ ಸ್ಪೆಕ್ಟ್ರಮ್ ಹರಾಜು ಇದಾಗಿದೆ.
ಇದನ್ನೂ ಓದಿ:5G auction| 5G ಸ್ಪೆಕ್ಟ್ರಮ್ ಹರಾಜು ಇಂದಿನಿಂದ, ಶೀಘ್ರ ಸೇವೆ ಆರಂಭ ನಿರೀಕ್ಷೆ