ನವ ದೆಹಲಿ: ಬಿಎಸ್ಸೆನ್ನೆಲ್ 2024ಕ್ಕೆ 5 ಜಿ ಸೇವೆಗೆ ಚಾಲನೆ ನೀಡಲಿದೆ ಎಂದು ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ (BSNL 5G service) ತಿಳಿಸಿದ್ದಾರೆ.
ಬಿಎಸ್ಸೆನ್ನೆಲ್ ತನ್ನ 4ಜಿ ನೆಟ್‌ವರ್ಕ್ ಅನುಷ್ಠಾನಕ್ಕಾಗಿ ಟಿಸಿಎಸ್ ಮತ್ತು ಸಿ-ಡಾಟ್ ನೇತೃತ್ವದ ಒಕ್ಕೂಟವನ್ನು ನಿಯೋಜಿಸಿದೆ. ಇದುವೇ 5ಜಿಗೆ ಮೇಲ್ದರ್ಜೆಗೆ ಏರಿಸಲಿದೆ ಎಂದು ಕೇಂದ್ರ ಟೆಲಿಕಾಂ ಸಚಿವರು ಗುರುವಾರ ತಿಳಿಸಿದ್ದಾರೆ.
ಒಡಿಶಾದಲ್ಲಿ ಏರ್‌ಟೆಲ್ ಮತ್ತು ಜಿಯೊದ 5ಜಿ ಸೇವೆಗೆ ಚಾಲನೆ ನೀಡಿದ ಸಂದರ್ಭ ಮಾತನಾಡಿದ ಅವರು ಈ ವಿಷಯ ತಿಳಿಸಿದರು. ಇನ್ನೆರಡು ವರ್ಷದಲ್ಲಿ ಇಡೀ ಒಡಿಶಾಗೆ 5ಜಿ ನೆಟ್ ವರ್ಕ್ ಸಿಗಲಿದೆ ಎಂದರು.