ನವ ದೆಹಲಿ: ಬಹು ನಿರೀಕ್ಷಿತ ೫ಜಿ ಸ್ಪೆಕ್ಟ್ರಮ್ ಹರಾಜಿನಲ್ಲಿ ಮೂರನೇ ದಿನವಾದ ಗುರುವಾರದ ವೇಳೆಗೆ ಒಟ್ಟು ೧,೪೯,೬೨೩ ಕೋಟಿ ರೂ. ಮೌಲ್ಯದ ಬಿಡ್ ಸಲ್ಲಿಕೆಯಾಗಿದೆ. ಹರಾಜು ನಾಲ್ಕನೇ ದಿನವಾದ ಶುಕ್ರವಾರ ಮುಂದುವರಿಯಲಿದೆ ಎಂದು ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಮೊದಲ ಮೂರು ದಿನಗಳಲ್ಲಿ ೧೯ ಸುತ್ತಿನ ಹರಾಜು ನಡೆದಿದೆ. ಬುಧವಾರದ ವೇಳೆಗೆ ೧,೪೯,೪೫೪ ಕೋಟಿ ರೂ. ಬಿಡ್ ಸಲ್ಲಿಕೆಯಾಗಿತ್ತು. ೨೦೨೧ರಲ್ಲಿ ನಡೆದ ೪ಜಿ ಸ್ಪೆಕ್ಟ್ರಮ್ ಹರಾಜಿನಲ್ಲಿ ೭೧,೬೩೯ ಕೋಟಿ ರೂ.ಗಳ ಬಿಡ್ ಸಲ್ಲಿಕೆಯಾಗಿತ್ತು.
ಮುಕೇಶ್ ಅಂಬಾನಿಯವರ ರಿಲಯನ್ಸ್ ಜಿಯೊ, ಸುನಿಲ್ ಭಾರ್ತಿ ಮಿತ್ತಲ್ ಅವರ ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ, ಗೌತಮ್ ಅದಾನಿಯವರ ಅದಾನಿ ಡೇಟಾ ನೆಟ್‌ವರ್ಕ್ಸ್ 5ಜಿ ಸ್ಪೆಕ್ಟ್ರಮ್ ಹರಾಜಿನ ಕಣದಲ್ಲಿವೆ. ಆಗಸ್ಟ್ ಮಧ್ಯಭಾಗದ ವೇಳೆಗೆ ೫ಜಿ ಸ್ಪೆಕ್ಟ್ರಮ್ ಮಂಜೂರಾತಿಗೆ ಟೆಲಿಕಾಂ ಇಲಾಖೆ ನಿರ್ಧರಿಸಿದೆ. ೨೦೨೨ರ ಸೆಪ್ಟೆಂಬರ್ -ಅಕ್ಟೋಬರ್ ವೇಳೆಗೆ ೫ಜಿ ಸೇವೆ ಆರಂಭವಾಗುವ ನಿರೀಕ್ಷೆ ಇದೆ.
ಹರಾಜಿನಲ್ಲಿ ರಿಲಯನ್ಸ್ ಜಿಯೊ ೫ಜಿ ಸ್ಪೆಕ್ಟ್ರಮ್ ಖರೀದಿಗೆ ೮೪,೦೦೦ ಕೋಟಿ ರೂ. ವೆಚ್ಚ ಮಾಡಿದೆ. ೪ಜಿಗೆ ಹೋಲಿಸಿದರೆ ೫ಜಿ ೧೦ ಪಟ್ಟು ಹೆಚ್ಚು ಸ್ಪೀಡ್ ಅನ್ನು ಹೊಂದಿರಲಿದೆ.
೫ಜಿ ಹರಾಜಿನ ಸ್ಥಿತಿಗತಿ
ಮೊದಲ ದಿನದ ಬಿಡ್ | 1,45,000 ಕೋಟಿ ರೂ. |
ಎರಡನೇ ದಿನದ ಅಂತ್ಯಕ್ಕೆ | 1,49,454 ಕೋಟಿ ರೂ. |
ಮೂರನೇ ದಿನ ಮುಕ್ತಾಯಕ್ಕೆ | 1,49,623 ಕೋಟಿ ರೂ. |
ಇದನ್ನೂ ಓದಿ: ವಿಸ್ತಾರ Explainer | 5G ತಂತ್ರಜ್ಞಾನದಿಂದ ಅನುಕೂಲ ಅಪಾರ, ಅನನುಕೂಲ ಅತ್ಯಲ್ಪ