Site icon Vistara News

Aadhaar Update| 6 ಲಕ್ಷ ನಕಲಿ ಆಧಾರ್‌ ಕಾರ್ಡ್ ರದ್ದು, ನಕಲಿ-ಅಸಲಿ ಪತ್ತೆ ಮಾಡುವುದು ಹೇಗೆ?

aadhaar card

ನವ ದೆಹಲಿ: ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಯುಐಡಿಎಐ, ೬ ಲಕ್ಷ ನಕಲಿ ಆಧಾರ್‌ ಕಾರ್ಡ್‌ಗಳನ್ನು ರದ್ದುಪಡಿಸಿದೆ ಎಂದು ಕೇಂದ್ರ ಸಚಿವ ರಾಜೀವ್‌ ಚಂದ್ರ ಶೇಖರ್‌ ಅವರು ಸಂಸತ್ತಿನಲ್ಲಿ ತಿಳಿಸಿದ್ದಾರೆ.

ನಕಲಿ ಆಧಾರ್‌ ಕಾರ್ಡ್‌ಗಳನ್ನು ಗಂಭೀರ ಸ್ವರೂಪದ ಅಪರಾಧ ಕೃತ್ಯಗಳಿಗೆ ಕೂಡ ಬಳಸುತ್ತಿರುವುದರಿಂದ ಸರ್ಕಾರ, ಇವುಗಳನ್ನು ರದ್ದುಪಡಿಸಲು ಕ್ರಮ ಕೈಗೊಳ್ಳುತ್ತಿದೆ. ಲೋಕಸಭೆಯಲ್ಲಿ ಈ ಬಗ್ಗೆ ವಿವರ ನೀಡಿದ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಸಹಾಯಕ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು, ನಕಲಿ ಆಧಾರ್‌ ಕಾರ್ಡ್‌ಗಳನ್ನು ನಿರ್ಮೂಲನೆ ಮಾಡಲು ಯುಐಡಿಎಐ ಅಧಿಕಾರಿಗಳು ನಿಯಮಿತವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಾರೆ. ಆಧಾರ್‌ ದೃಢೀಕರಣ ವಿಚಾರದಲ್ಲಿ ಹೆಚ್ಚುವರಿ ಅಂಶವನ್ನು ಸೇರಿಸಲಾಗಿದೆ. ಹೀಗಾಗಿ ೬ ಲಕ್ಷ ನಕಲಿ ಆಧಾರ್‌ ಕಾರ್ಡ್‌ಗಳನ್ನು ನಿರ್ಮೂಲನೆ ಮಾಡಲಾಗಿದೆ ಎಂದು ತಿಳಿಸಿದರು.

ಅಸಲಿ-ನಕಲಿ ಆಧಾರ್‌ ಕಾರ್ಡ್‌ ಪರಿಶೀಲಿಸುವುದು ಹೇಗೆ?

೧. ನಿಮ್ಮ ಆಧಾರ್‌ ಸಂಖ್ಯೆ ಅಸಲಿ ಅಥವಾ ನಕಲಿಯೇ ಎಂಬುದನ್ನು ನೀವು ಆನ್‌ಲೈನ್‌ ಮೂಲಕ ಪತ್ತೆ ಹಚ್ಚಬಹುದು. ಇದಕ್ಕಾಗಿ ಯುಐಡಿಎಐಯ ಅಧಿಕೃತ ವೆಬ್‌ ಸೈಟ್‌ https://resident.uidai.gov.in/offlineaadhaar ಬಳಸಬಹುದು.

2. ಬಳಿಕ Aadhaar Verify ಅನ್ನು ಆಯ್ಕೆ ಮಾಡಿ. ಆಗ ನೀವು ನೇರವಾಗಿ https://myaadhaar.uidai.gov.in/verifyAadhaar ಸೆಕ್ಷನ್‌ಗೆ ಹೋಗುತ್ತೀರಿ. ಅಲ್ಲಿ ಆಧಾರ್‌ ದೃಢೀಕರಣ ಮಾಡಬಹುದು.

೩. ಬಳಿಕ ೧೨ ಅಂಕಿಗಳ ಆಧಾರ್‌ ನಂಬರ್‌ ಅಥವಾ ೧೬ ಅಂಕಿಗಳ ವರ್ಚುವಲ್‌ ಐಡಿ ಬಳಸಿ.

೪. ಸ್ಕ್ರೀನ್‌ನಲ್ಲಿ ಕಾಣಿಸುವ ಸೆಕ್ಯುರಿಟಿ ಕೋಡ್‌ ಅನ್ನು ಟೈಪಿಸಿ. ಒಟಿಪಿ ಅಥವಾ ಟಿಒಟಿಪಿ ಪ್ರಕ್ರಿಯೆ ಪೂರ್ಣಗೊಳಿಸಿ.

೫. ನೋಂದಾಯಿತ ಮೊಬೈಲ್‌ಗೆ ಒಟಿಪಿ ಬರುತ್ತದೆ. ಅದನ್ನು ವೆಬ್‌ಸೈಟ್‌ನಲ್ಲಿ ಟೈಪಿಸಿ.

೬. ಇದರಿಂದ ಹೊಸ ಪೇಜ್‌ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ‌ ಆಧಾರ್‌ ಸಂಖ್ಯೆಗೆ ಮಾನ್ಯತೆ ಇದೆಯೇ, ಇಲ್ಲವೇ ಎಂಬ ಸಂದೇಶ ಸಿಗುತ್ತದೆ.

Exit mobile version