ನವ ದೆಹಲಿ: ಐಟಿ ದಿಗ್ಗಜ ಇನ್ಫೋಸಿಸ್ ( Infosys) ಗುರುವಾರ ತನ್ನ ಜುಲೈ-ಸೆಪ್ಟೆಂಬರ್ ಅವಧಿಯ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದ್ದು, 6,021 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಲಾಭಾಂಶದಲ್ಲಿ 11% ಹೆಚ್ಚಳವಾಗಿದೆ. ಈ ಅವಧಿಯಲ್ಲಿ 36,538 ಕೋಟಿ ರೂ. ಆದಾಯ ದಾಖಲಿಸಿದೆ.
ಇನ್ಫೋಸಿಸ್ ಆಡಳಿತ ಮಂಡಳಿಯು ಪ್ರತಿ ಷೇರಿಗೆ 1,850 ರೂ.ಗಳಂತೆ ಒಟ್ಟು 9,300 ಕೋಟಿ ರೂ.ಗಳ ಷೇರು ಮರು ಖರೀದಿಗೆ ಒಪ್ಪಿಗೆ ನೀಡಿದೆ. ಪ್ರತಿ ಷೇರಿಗೆ 16.50 ರೂ.ಗಳ ಮಧ್ಯಂತರ ಡಿವಿಡೆಂಡ್ ಅನ್ನೂ ಘೋಷಿಸಿದೆ.
ಎಚ್‌ಸಿಎಲ್ ಟೆಕ್ನಾಲಜೀಸ್ ಮಾದರಿಯಲ್ಲಿ ಇನ್ಫೋಸಿಸ್ ಕೂಡ ನಿರೀಕ್ಷೆಗೂ ಮೀರಿ ಲಾಭ ಮತ್ತು ಆದಾಯ ಗಳಿಸಿ ಅಚ್ಚರಿ ಮೂಡಿಸಿದೆ.
ಮೈಂಡ್‌ಟ್ರೀ ಕಂಪನಿಯ ಜುಲೈ-ಸೆಪ್ಟೆಂಬರ್‌ನಲ್ಲಿ ನಿವ್ವಳ ಲಾಭದಲ್ಲಿ 27% ಹೆಚ್ಚಳವಾಗಿದ್ದು, 509 ಕೋಟಿ ರೂ.ಗೆ ಏರಿಕೆಯಾಗಿದೆ. ಕಂಪನಿ 3,400 ಕೋಟಿ ರೂ. ಆದಾಯ ಗಳಿಸಿತ್ತು.