Site icon Vistara News

Toy story: ಚೀನಾ ಮೂಲದ ಆಟಿಕೆಗಳ ಆಮದು 70% ಇಳಿಕೆ, ಸ್ಥಳೀಯ ಟಾಯ್ಸ್‌ ರಫ್ತು ಹೆಚ್ಚಳ

ನವ ದೆಹಲಿ: ಭಾರತದಲ್ಲಿ ಚೀನಾ ಮೂಲದ ಆಟಿಕೆಗಳ ಹಾವಳಿ ಕೊನೆಗೂ ಗಣನೀಯ ಇಳಿಕೆಯಾಗಿದೆ.

‌ಕಳೆದ ಮೂರು ವರ್ಷಗಳಲ್ಲಿ ಚೀನಾ ಮೂಲದ ಆಟಿಕೆಗಳ ಆಮದು ೭೦% ಇಳಿಕೆಯಾಗಿದೆ. ಜತೆಗೆ ಸ್ಥಳೀಯವಾಗಿ ಉತ್ಪಾದಿಸಿದ ಆಟಿಕೆಗಳ ರಫ್ತಿನಲ್ಲಿ ೬೧% ಹೆಚ್ಚಳವಾಗಿದೆ ಎಂದು ವಾಣಿಜ್ಯ ಇಲಾಖೆಯ ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ.

ಮಕ್ಕಳು ಆಟವಾಡಲು ಬಳಸುವ ಮೂರು ಚಕ್ರದ ಸೈಕಲ್‌, ಸ್ಕೂಟರ್‌, ಪೆಡಲ್‌ ಕಾರುಗಳು, ವೀಡಿಯೊ ಗೇಮ್ಸ್‌, ಹಬ್ಬ, ಜಾತ್ರೆಗಳಲ್ಲಿ ಮಾರಾಟವಾಗುವ ಆಟಿಕೆಗಳ ಆಮದು ಗಣನೀಯ ಕುಸಿದಿದೆ. ೨೦೧೮-೧೯ ಮತ್ತು ೨೦೨೧-೨೨ರಲ್ಲಿ ಇವುಗಳ ಮೌಲ್ಯ ೩೭೧ ದಶಲಕ್ಷ ಡಾಲರ್‌ಗಳಿಂದ ( ೨,೮೯೩ ಕೋಟಿ ರೂ.) ೧೧೦ ದಶಲಕ್ಷ ಡಾಲರ್‌ಗೆ ( ೮೫೮ ಕೋಟಿ ರೂ.) ಕುಸಿದಿದೆ.

ಪ್ರಧಾನಿ ಮೋದಿಯವರ ಉತ್ತೇಜನ

ಪ್ರಧಾನಿ ನರೇಂದ್ರ ಮೋದಿಯವರು ಮೊದಲಿನಿಂದಲೂ ಆಟಿಕೆಗಳ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಲು ಉತ್ತೇಜನ ನೀಡಿದ್ದಾರೆ. ತಮ್ಮ ಮನ್‌ ಕಿ ಬಾತ್‌ ಬಾನುಲಿ ಕಾರ್ಯಕ್ರಮದಲ್ಲೂ ಸ್ಥಳೀಯವಾಗಿ ಆಟಿಕೆಗಳ ಉತ್ಪಾದನೆಯನ್ನು ಉತ್ತೇಜಿಸಿದ್ದರು. ಚನ್ನಪಟ್ಟಣದ ಗೊಂಬೆಗಳನ್ನೂ ಪ್ರಸ್ತಾಪಿಸಿದ್ದ ಪ್ರಧಾನಿ ಮೋದಿ, ಜಾಗತಿಕ ಮಟ್ಟದಲ್ಲಿ ಇವುಗಳಿಗೆ ಮಾರುಕಟ್ಟೆ ಕಲ್ಪಿಸಲು ಇ-ಕಾಮರ್ಸ್‌ ವ್ಯವಸ್ಥೆಗಳನ್ನು ಬಳಸಬೇಕು ಎಂದು ಹುರಿದುಂಬಿಸಿದ್ದರು.

Exit mobile version