ನವ ದೆಹಲಿ: ಯಸ್ ಬ್ಯಾಂಕ್ ತನ್ನ ನಿಶ್ಚಿತ ಅವಧಿಯ ಠೇವಣಿಗಳ ಬಡ್ಡಿ ದರಗಳನ್ನು ಏರಿಸಿದ್ದು, (FD Interest rate hike) 0.25% ರಿಂದ 0.50% ತನಕ ಏರಿಸಿದೆ. 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಠೇವಣಿಗಳಿಗೆ ಪರಿಷ್ಕೃತ ಬಡ್ಡಿ ದರಗಳು ಅನ್ವಯವಾಗಲಿದೆ. ಫೆಬ್ರವರಿ 21ರಿಂದ ಪರಿಷ್ಕೃತ ಬಡ್ಡಿ ದರಗಳು ಜಾರಿಯಾಗಲಿದೆ.
ಸಾಮಾನ್ಯ ನಾಗರಿಕರಿಗೆ 15 ತಿಂಗಳಿನಿಂದ ೩೫ ತಿಂಗಳಿನ ಅವಧಿಯ ಠೇವಣಿಗೆ 7.50% ಬಡ್ಡಿ ದರ ಸಿಗಲಿದೆ. ಹಿರಿಯ ನಾಗರಿಕರಿಗೆ 8.00% ಬಡ್ಡಿ ದೊರೆಯಲಿದೆ.
ಸಾಮಾನ್ಯ ನಾಗರಿಕರಿಗೆ ೨೭೨ ದಿನಗಳಿಂದ 1 ವರ್ಷ ಅವಧಿಯ ಠೇವಣಿಗೆ 6.25% ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ 6.75% ಬಡ್ಡಿ ದೊರೆಯುತ್ತದೆ.
ಎಡಿಲ್‌ವೈಸ್ ಮ್ಯೂಚುವಲ್ ಫಂಡ್‌ನಿಂದ ಹೂಡಿಕೆ: ಯಸ್ ಬ್ಯಾಂಕ್ ಷೇರುಗಳ ದರ 2022ರ ಡಿಸೆಂಬರ್‌ನಲ್ಲಿ 24.75ರೂ.ಗೆ ಏರಿತ್ತು. ಈಗ 16.10 ರೂ.ಗೆ ತಗ್ಗಿದೆ. ಈ ನಡುವೆ ಜನವರಿಯಿಂದ ಯಸ್ ಬ್ಯಾಂಕ್‌ನಲ್ಲಿ ತನ್ನ ಷೇರು ಹೂಡಿಕೆಯನ್ನು ಹೆಚ್ಚಿಸಿದೆ. ಎಡಿಲ್‌ವೈಸ್ 2022ರ ಡಿಸೆಂಬರ್‌ನಲ್ಲಿ ಬ್ಯಾಂಕ್‌ನ 4,65,671 ಷೇರುಗಳನ್ನು ಹೊಂದಿತ್ತು. ಜನವರಿಯಲ್ಲಿ 4,84,135ಕ್ಕೆ ಏರಿಕೆಯಾಗಿದೆ.