ನವ ದೆಹಲಿ: ಟಾಟಾ ಸಮೂಹದ ಟೈಟನ್ ಕಂಪನಿ, ಕಳೆದ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ 857 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಅಂದರೆ ಕಳೆದ ವರ್ಷದ ( Titan ) ಇದೇ ಅವಧಿಗೆ ಹೋಲಿಸಿದರೆ 34% ಹೆಚ್ಚಳವಾಗಿದೆ. ಟೈಟನ್ ತ್ರೈಮಾಸಿಕ ಆದಾಯದಲ್ಲಿ 22% ಹೆಚ್ಚಳವಾಗಿದ್ದು, 8,730 ಕೋಟಿ ರೂ.ಗೆ ಏರಿಕೆಯಾಗಿದೆ.
ಟೈಟನ್‌ನ ಜ್ಯುವೆಲ್ಲರಿ ಬಿಸಿನೆಸ್‌ನಲ್ಲಿ ಆದಾಯ 18% ಏರಿಕೆಯಾಗಿದೆ. (7,203 ಕೋಟಿ ರೂ.) ವಾಚುಗಳ ಮಾರಾಟದಲ್ಲಿ ಆದಾಯ 21% ಏರಿಕೆಯಾಗಿದ್ದು, 829 ಕೋಟಿ ರೂ.ಗೆ ವೃದ್ಧಿಸಿದೆ. ಸೆಪ್ಟೆಂಬರ್ 30ಕ್ಕೆ ಟೈಟನ್ 105 ಮಳಿಗೆಗಳನ್ನು ಒಳಗೊಂಡಿತ್ತು. ಟೈಟನ್ ಕಂಪನಿಯ ಷೇರು ದರ 6.35% ಹೆಚ್ಚಳವಾಗಿದೆ. (2,770 ರೂ.)
2017ರಲ್ಲಿ 786 ರೂ.ನಷ್ಟಿದ್ದ ಟೈಟನ್ ಷೇರು ದರ 2022ರಲ್ಲಿ 2,770 ರೂ.ಗೆ ಏರಿಕೆಯಾಗಿದೆ. 254%ಕ್ಕೂ ಹೆಚ್ಚು ವೃದ್ಧಿಸಿದೆ.