ನವ ದೆಹಲಿ: ಭಾರತದ ಮಿಲಿಟರಿ ರಫ್ತು ಕಳೆದ 9 ವರ್ಷಗಳಲ್ಲಿ 23 ಪಟ್ಟು (9 years of PM Modi) ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಆಮದು ಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ. ಭಾರತ ಕಳೆದ ಮೇ 19ರಂದು ಮಾಡಿದ ಘೋಷಣೆಯ ಪ್ರಕಾರ ದೇಶದಲ್ಲಿ ರಕ್ಷಣಾ ಉತ್ಪಾದನೆ ಮೊದಲ ಬಾರಿಗೆ 1 ಲಕ್ಷ ಕೋಟಿ ರೂ. ದಾಟಿದೆ. 2013-24 ಮತ್ತು 2022-23ರ ಅವಧಿಯಲ್ಲಿ ದೇಶದ ರಕ್ಷಣಾ ರಫ್ತು ಭಾರಿ ಪ್ರಮಾಣದಲ್ಲಿ ವೃದ್ಧಿಸಿತ್ತು.
ಭಾರತದ ರಕ್ಷಣಾ ರಫ್ತು (Indiás defence exports) 2013-14ರಲ್ಲಿ ಸುಮಾರು 686 ಕೋಟಿ ರೂ. ಇತ್ತು. ಇದು 2022-23ರ ವೇಳೆಗೆ 16,000 ಕೋಟಿ ರೂ.ಗೆ ವೃದ್ಧಿಸಿತ್ತು. ಜಾಗತಿಕ ರಕ್ಷಣಾ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಭಾರತ ದಾಪುಗಾಲಿಡುತ್ತಿರುವುದು ಹಾಗೂ ರಕ್ಷಣಾ ವಲಯದ ಸುಧಾರಣೆ ಇದಕ್ಕೆ ಕಾರಣವಾಗಿದೆ. ಭಾರತ 2021-22ರ್ಲಿ 95,000 ಕೋಟಿ ರೂ. ಮತ್ತು 2022-23ರಲ್ಲಿ 1,06,800 ಕೋಟಿ ರೂ. ಮೌಲ್ಯದ ರಕ್ಷಣಾ ಉತ್ಪಾದನೆ ನಡೆಸಿತ್ತು. ಐದು ವರ್ಷದ ಹಿಂದೆ ಇದು 54,951 ಕೋಟಿ ರೂ. ಇತ್ತು.
Today, as we complete 9 years in service to the nation, I am filled with humility and gratitude. Every decision made, every action taken, has been guided by the desire to improve the lives of people. We will keep working even harder to build a developed India. #9YearsOfSeva
— Narendra Modi (@narendramodi) May 30, 2023
ಭಾರತವು ತೇಜಸ್ ಲಘು ಯುದ್ಧ ವಿಮಾನ (Tejas light combat aircraft) ಸೇರಿದಂತೆ ನಾನಾ ವಿಧದ ರಕ್ಷಣಾ ಸಾಧನಗಳನ್ನು ತಯಾರಿಸುತ್ತಿದೆ. ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗುವುದು ಇದರ ಉದ್ದೇಶ. ಹಲವು ಶಸ್ತ್ರಾಸ್ತ್ರಗಳ ಆಮದನ್ನೂ ಸರ್ಕಾರ ಈ ನಿಟ್ಟಿನಲ್ಲಿ ನಿಷೇಧಿಸಿತ್ತು. ಸ್ಥಳೀಯವಾಗಿ ತಯಾರಾಗುವ ಶಸ್ತ್ರಾಸ್ತ್ರಗಳಿಗೆ ಪ್ರತ್ಯೇಕ ಬಜೆಟ್ ನೆರವನ್ನೂ ನೀಡಲಾಗಿದೆ. ರಕ್ಷಣಾ ಉತ್ಪಾದನೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಮಿತಿಯನ್ನು 49% ರಿಂದ 74%ಕ್ಕೆ ಏರಿಸಲಾಗಿದೆ.
ಭಾರತವು 2024-25ರ ವೇಳೆಗೆ ರಕ್ಷಣಾ ಉತ್ಪಾದನೆಯನ್ನು 1,75,000 ಕೋಟಿ ರೂ.ಗೆ ವೃದ್ಧಿಸುವ ಗುರಿಯನ್ನು ಹೊಂದಿದೆ. ಒಂದು ಕಡೆ ರಫ್ತನ್ನು ಹೆಚ್ಚಿಸುವುದು, ಮತ್ತೊಂದು ಕಡೆ ಆಮದನ್ನು ತಗ್ಗಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಇದನ್ನೂ ಓದಿ:9 years of PM Modi: ಈ 9 ವರ್ಷದಲ್ಲಿ ಜನರ ಬದುಕು ಹಸನಾಗಿಸುವ ಕೆಲಸ ಮಾಡಿದ್ದೇವೆ; ಪ್ರಧಾನಿ ಮೋದಿ ಟ್ವೀಟ್
ಭಾರತ 85 ದೇಶಗಳಿಗೆ ರಕ್ಷಣಾ ರಫ್ತನ್ನು ನಡೆಸುತ್ತಿದೆ. 100 ಕಂಪನಿಗಳು ಇದರಲ್ಲಿ ಕಾರ್ಯನಿರ್ವಹಿಸುತ್ತಿವೆ. ಕ್ಷಿಪಣಿ, ಅತ್ಯಾಧುನಿಕ ಬಂದೂಕುಗಳು, ರಾಕೆಟ್‌ಗಳು, ಸಶಸ್ತ್ರ ಸಜ್ಜಿತ ವಾಹನಗಳು, ಗಸ್ತು ಉದ್ದೇಶಕ್ಕೆ ಬಳಸುವ ವಾಹನ, ರಾಡಾರ್‌ಗಳ ಮಾರಾಟ ಇದರಲ್ಲಿ ಸೇರಿದೆ. 2024-25ರಲ್ಲಿ 35,000 ಕೋಟಿ ರಕ್ಷಣಾ ರಫ್ತು ಉದ್ದೇಶವನ್ನು ಸರ್ಕಾರ ಹೊಂದಿದೆ. ರಕ್ಷಣಾ ರಫ್ತು ಹೆಚ್ಚಳಕ್ಕೆ ಸರ್ಕಾರ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ರಫ್ತು ಪ್ರಕ್ರಿಯೆಗಳನ್ನು ಸರಳಗೊಳಿಸಲಾಗಿದೆ. ಉದ್ಯಮಸ್ನೇಹಿಯನ್ನಾಗಿಸಲಾಗಿದೆ. ರಫ್ತು ವಿಳಂಬ ಆಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.
ಹೆಚ್ಚು ರಫ್ತಾಗುವ ಸಲಕರಣೆಗಳು ಇಂತಿವೆ: ವೆಪ್ಪನ್ ಸಿಮ್ಯುಲೇಟ, ಟಿಯರ್ ಗ್ಯಾಸ್ ಲಾಂಚರ್, ಟೋರ್ಪೆಡೊ ಲೋಡಿಂಗ್ ಮೆಕಾನಿಸಮ್, ಅಲಾರ್ಮ್ ಮಾನಿಟರಿಂಗ್ &ಕಂಟ್ರೋಲ್, ನೈಟ್ ವಿಶನ್ ಮೋನೋಕ್ಯುಲರ್& ಬೈನಾಕ್ಯುಲರ್, ಲೈಟ್ ವೇಯ್ಟ್ ಟೋರ್ಪೆಡೊ& ಫೈರ್ ಕಂಟ್ರೋಲ್ ಸಿಸ್ಟಮ್ಸ್, ಆರ್ಮ್ಡ್ ಪ್ರೊಟೆಕ್ಷನ್ ವೆಹಿಕಲ್, ವೆಪ್ಪನ್ಸ್ ಲೊಕೇಟಿಂಗ್ ರಾಡಾರ್, ಎಚ್‌ಎಫ್ ರೇಡಿಯೊ, ಕೋಸ್ಟಲ್ ಸರ್ವೈವಲೆನ್ಸ್ ರಾಡಾರ್.
ಇದನ್ನೂ ಓದಿ: ದೇಶಿಯವಾಗಿ ಎಲೆಕ್ಟ್ರಿಕ್ ಕಾರ್ ಮಾರಾಟ, ರಫ್ತಿಗಾಗಿ ಭಾರತದಲ್ಲೇ ಘಟಕ ತೆರೆಯಲು ಮುಂದಾದ ಟೆಸ್ಲಾ?