Site icon Vistara News

9 Years of PM Modi : ಅಮೆರಿಕದ ಕಂಪನಿ ಮೋರ್ಗಾನ್‌ ಸ್ಟಾನ್ಲಿ ಮೋದಿ ಸರ್ಕಾರದ ಬಗ್ಗೆ ಏನು ಹೇಳಿದೆ? ಇಲ್ಲಿದೆ ಪಟ್ಟಿ

morgan stanly

ನವ ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ( 9 Years of PM Modi) ಕಳೆದ ಕೇವಲ 9 ವರ್ಷದಲ್ಲಿ ಭಾರತ ಗಣನೀಯವಾಗಿ ಬದಲಾಗಿದೆ. ಅದು ಈಗ 2013ರಲ್ಲಿ ಇದ್ದಂತೆ ಇಲ್ಲ ಎಂದು ಅಮೆರಿಕ ಮೂಲದ ಬಹುರಾಷ್ಟ್ರೀಯ ಇನ್ವೆಸ್ಟ್‌ಮೆಂಟ್‌ ಬ್ಯಾಂಕ್‌ ಮತ್ತು ಹಣಕಾಸು ಸೇವೆ ವಲಯದ ಕಂಪನಿ ಮೋರ್ಗಾನ್‌ ಸ್ಟಾನ್ಲಿ (Morgan Stanley) ಪ್ರಶಂಸಿಸಿದೆ. 10 ವರ್ಷದೊಳಗೆ ಭಾರತ ವಿಶ್ವದ ಪ್ರಬಲ ರಾಷ್ಟ್ರಗಳ ಸಾಲಿನಲ್ಲಿ ನಿಂತಿದೆ ಎಂದು ಮೋರ್ಗಾನ್‌ ಸ್ಟಾನ್ಲಿ ವರದಿ ಮೆಚ್ಚುಗೆ ವ್ಯಕ್ತಪಡಿಸಿದೆ.

ಮೋರ್ಗಾನ್‌ ಸ್ಟಾನ್ಲಿ ಇವತ್ತಿನ ಭಾರತ (India today) ಎಂಬ ವರದಿಯನ್ನು ಬಿಡುಗಡೆಗೊಳಿಸಿದ್ದು, ಭಾರತ 2013ರಲ್ಲಿ ಇದ್ದ ಸ್ಥಿತಿಗೆ ಹೋಲಿಸಿದರೆ ಈಗ ಬದಲಾಗಿದೆ. ಏಷ್ಯಾ ಮತ್ತು ಜಾಗತಿಕ ಬೆಳವಣಿಗೆಯ ಚಾಲಕ ಶಕ್ತಿಯಾಗುತ್ತಿದೆ ಎಂದಿರುವ ಮೋರ್ಗಾನ್‌ ಸ್ಟಾನ್ಲಿ, ಮೋದಿ ಸರ್ಕಾರದ 10 ಸಾಧನೆಗಳ ಪಟ್ಟಿ ಮಾಡಿದೆ. ಅದು ಹೀಗಿದೆ.

  1. ಪೂರೈಕೆಯ ವಿಭಾಗದಲ್ಲಿ ಸುಧಾರಣೆ( Supply- side Reforms)
  2. ಆರ್ಥಿಕ ವ್ಯವಸ್ಥೆಯನ್ನು ಔಪಚಾರಿಕಗೊಳಿಸಿರುವುದು ( Formalisation)
  3. ರಿಯಲ್‌ ಎಸ್ಟೇಟ್‌ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯಿದೆ
  4. ಸಾಮಾಜಿಕ ಸೌಲಭ್ಯಗಳ ವಿತರಣೆಯ ಡಿಜಿಟಲೀಕರಣ (digitalizing social transfers)
  5. ಕಂಪನಿಗಳ ದಿವಾಳಿತನ ಕಾಯಿದೆ ( Insolvency and bankruptcy code)
  6. ಹಣದುಬ್ಬರ ನಿರ್ವಹಣೆಯಲ್ಲಿ ಹೊಂದಾಣಿಕೆ ( flexible inflation targeting)
  7. ವಿದೇಶಿ ನೇರ ಬಂಡವಾಳ ಹೂಡಿಕೆಗೆ ಆದ್ಯತೆ
  8. ಪಿಂಚಣಿ ಯೋಜನೆಗಳಲ್ಲಿ ಸುಧಾರಣೆ
  9. ಕಾರ್ಪೊರೇಟ್‌ ವಲಯಕ್ಕೆ ನೀಡಿದ ಬೆಂಬಲ
  10. ಎಂಎನ್‌ಸಿಗಳಿಗೆ ಭಾರತದ ಬಗ್ಗೆ ವಿಶ್ವಾಸ ವೃದ್ಧಿಯಾಗಿರುವುದು

ಭಾರತವು ಕಾರ್ಪೊರೇಟ್‌ ತೆರಿಗೆಯನ್ನು ಇಳಿಸಿರುವುದು ಹಾಗೂ ವಿಶ್ವದರ್ಜೆಯ ಮಟ್ಟಕ್ಕೆ ತಂದಿದೆ. ಮೂಕಲಸೌಕರ್ಯ ವಲಯದಲ್ಲಿ ಗಣನೀಯ ಹೂಡಿಕೆಯಾಗಿದೆ. ಇದು ಪೂರೈಕೆ ವಿಭಾಗದಲ್ಲಿನ ದೊಡ್ಡ ಬದಲಾವಣೆಯಾಗಿದೆ ಎಂದು ಮೋರ್ಗಾನ್‌ ಸ್ಟಾನ್ಲಿ ಹೇಳಿದೆ.

ಹಲವಾರು ತೆರಿಗೆಗಳನ್ನು ತೆರವುಗೊಳಿಸಿ ಏಕರೂಪದ ಜಿಎಸ್‌ಟಿಯನ್ನು ಜಾರಿಗೊಳಿಸಿರುವುದು, ಡಿಜಿಟಲ್‌ ವರ್ಗಾವಣೆಗಳನ್ನು ಹೆಚ್ಚಿಸಿರುವುದರಿಂದ ಆರ್ಥಿಕತೆ ಔಪಚಾರಿಕವಾಗುತ್ತಿದೆ (formalisation of the economy) ಎಂದು ಮೋರ್ಗಾನ್‌ ಸ್ಟಾನ್ಲಿ ತಿಳಿಸಿದೆ.

ಸಬ್ಸಿಡಿಗಳನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾಯಿಸಿರುವುದು, ಕಂಪನಿಗಳ ದಿವಾಳಿ ಕುರಿತ ಕಾನೂನು ಸುಧಾರಣೆ, ಎಫ್‌ಡಿಐಗೆ ಫೋಕಸ್‌ ನೀಡಿರುವುದು ಸಕಾರಾತ್ಮಕವಾಗಿದೆ ಎಂದು ಮೋರ್ಗಾನ್‌ ಸ್ಟಾನ್ಲಿ ತಿಳಿಸಿದೆ.

ಭಾರತಕ್ಕೆ ಸವಾಲೇನು?

ಜಾಗತಿಕ ಆರ್ಥಿಕ ಹಿಂಜರಿತ ಆದರೆ ಭಾರತಕ್ಕೆ ಸವಾಲಾದೀತು. ಒಂದು ವೇಳೆ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದರೂ ಕಷ್ಟವಾದೀತು. ಜಾಗತಿಕ ಮಟ್ಟದಲ್ಲಿ ಕಚ್ಚಾ ವಸ್ತುಗಳ ಬೆಲೆ ಏರಿಕೆ, ಕೌಶಲಯುಕ್ತ ಕಾರ್ಮಿಕರ ಕೊರತೆ ಭಾರತದ ಬೆಳವಣಿಗೆಗೆ ಸವಾಲಾಗಿ ಪರಿಣಮಿಸಬಹುದು ಎಂದು ಮೋರ್ಗಾನ್‌ ಸ್ಟಾನ್ಲಿ ವರದಿ ತಿಳಿಸಿದೆ.

ಭಾರತ 2027ರ ವೇಳೆಗೆ 5 ಟ್ರಿಲಿಯನ್‌ ಡಾಲರ್‌ ಎಕಾನಮಿ ಆಗುವ ನಿರೀಕ್ಷೆ ಇದೆ ಎಂದು ಭಾರ್ತಿ ಎಂಟರ್‌ ಪ್ರೈಸಸ್‌ನ ಚೇರ್ಮನ್‌ ಸುನಿಲ್‌ ಮಿತ್ತಲ್‌ ತಿಳಿಸಿದ್ದಾರೆ.

ಇದನ್ನೂ ಓದಿ: 9 years of PM Modi : 9 ವರ್ಷಗಳಲ್ಲಿ ಮಿಲಿಟರಿ ರಫ್ತು 23 ಪಟ್ಟು ಹೆಚ್ಚಳ, ಇದು ಸಾಧ್ಯವಾಗಿದ್ದು ಹೇಗೆ?

Exit mobile version