ಬೆಂಗಳೂರು: ಬೆಂಗಳೂರು ಮೂಲದ ಆಹಾರ ಕಂಪನಿ ಐಡಿ ಫ್ರೆಶ್ ಫುಡ್, ಹರಿಯಾಣದಲ್ಲಿ ತನ್ನ ನೂತನ ಉತ್ಪಾದನಾ ಘಟಕವನ್ನು ಆರಂಭಿಸಿದೆ.
ಉತ್ತರ ಭಾರತದಲ್ಲಿನ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಯನ್ನು ಪೂರೈಸುವ ಸಲುವಾಗಿ ಕಂಪನಿಯು ಹರಿಯಾಣದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಿದೆ. ಮುಖ್ಯವಾಗಿ ದಿಲ್ಲಿ-ಎನ್‌ಸಿಆರ್ ವ್ಯಾಪ್ತಿಯ ಗ್ರಾಹಕರಿಗೆ ಉತ್ಪನ್ನಗಳ ಮಾರಾಟಕ್ಕೆ ಅನುಕೂಲವಾಗಲಿದೆ.
ಇದು ಕಂಪನಿಯ ನಾಲ್ಕನೇ ಘಟಕವಾಗಿದೆ. ಇಡ್ಲಿ, ದೋಸೆಗೆ ಕಂಪನಿ ಹೆಸರುವಾಸಿಯಾಗಿದೆ. ಪರೋಟಾವನ್ನೂ ಮಾರಾಟ ಮಾಡುತ್ತಿದೆ. 20 ಕೋಟಿ ರೂ. ವೆಚ್ಚದಲ್ಲಿ ಹೊಸ ಘಟಕ ಸ್ಥಾಪಿಸಿದೆ. 2022-23ರಲ್ಲಿ 50 ಕೋಟಿ ರೂ. ಆದಾಯ ಗಳಿಸುವ ನಿರೀಕ್ಷೆ ಇದೆ. ಹರಿಯಾಣದ ಪಾಲ್ವಾಲ್ ಎಂಬಲ್ಲಿ 15,000 ಚದರ ಅಡಿ ಪ್ರದೇಶದಲ್ಲಿ ಘಟಕ ಹರಡಿದೆ.