ನವ ದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (UIDAI) ಗುರುವಾರ ರಾಜ್ಯ ಸರ್ಕಾರಗಳು ಮತ್ತು ಸಂಸ್ಥೆಗಳಿಗೆ ನೀಡಿರುವ ನಿರ್ದೇಶನದಲ್ಲಿ, ಭೌತಿಕ ಅಥವಾ ಎಲೆಕ್ಟ್ರಾನಿಕ್ ಸ್ವರೂಪದಲ್ಲಿ ಆಧಾರ್ ಕಾರ್ಡ್ ( Aadhaar card) ಸ್ವೀಕರಿಸುವ ಸಂದರ್ಭ ದೃಢೀಕರಿಸಿಕೊಳ್ಳಬೇಕು ಎಂದು ತಿಳಿಸಿದೆ.
ಸಮಾಜ ವಿದ್ರೋಹಿ ಶಕ್ತಿಗಳು ಆಧಾರ್ ಅನ್ನು ದುರ್ಬಳಕೆ ಮಾಡದಂತೆ ತಡೆಯುವ ನಿಟ್ಟಿನಲ್ಲಿ ಯುಐಡಿಎಐ, ಈ ನಿರ್ದೇಶನವನ್ನು ನೀಡಿದೆ.
ಆಧಾರ್ ಕಾರ್ಡ್ ಅನ್ನು ನಾನಾ ಉದ್ದೇಶಗಳಿಗೆ ದೃಢೀಕರಣಕ್ಕಾಗಿ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಬಳಸಲಾಗುತ್ತಿದೆ. ಆಧಾರ್ ಕಾರ್ಡ್, ಇ-ಆಧಾರ್, ಆಧಾರ್ ಪಿವಿಸಿ ಕಾರ್ಡ್ ಮತ್ತು ಎಂ-ಆಧಾರ್ ಅನ್ನು ಸಾರ್ವಜನಿಕರು ಗುರುತಿನ ದೃಢೀಕರಣದ ದಾಖಲೆಯಾಗಿ ಪ್ರಸ್ತುತಪಡಿಸುತ್ತಾರೆ. ಹೀಗಾಗಿ ಮಹತ್ವದ ದಾಖಲೆಗಳಲ್ಲೊಂದಾಗಿದೆ.
ಆಧಾರ್ ದಾಖಲೆಗಳನ್ನು ಸಮಾಜ ಘಾತುಕರು ತಿರುಚುವ ಮತ್ತು ದರ್ಬಳಕೆ ಮಾಡುವುದನ್ನು ತಡೆಯದಂತೆ, ಆಫ್‌ಲೈನ್ ವೆರಿಫಿಕೇಶನ್ ಮಾಡಬಹುದು. ಒಂದು ವೇಳೆ ದಾಖಲೆಯನ್ನು ತಿರುಚಿದರೆ ಶಿಕ್ಷಾರ್ಹ ಅಪರಾಧವೆನಿಸುತ್ತದೆ. ಎಂಆಧಾರ್ ಆ್ಯಪ್ ಮೂಲಕ ಕ್ಯೂಆರ್ ಕೋಡ್ ಬಳಸಿ ಆಧಾರ್‌ನ ಎಲ್ಲ ಮಾದರಿಗಳನ್ನು ದೃಢೀಕರಿಸಬಹುದು ಎಂದು ಯುಐಡಿಎಐ ತಿಳಿಸಿದೆ.