Site icon Vistara News

Aadhaar Rules | 10 ವರ್ಷಕ್ಕೊಮ್ಮೆ ಆಧಾರ್‌ ಕಾರ್ಡ್‌ ಪರಿಷ್ಕರಣೆ ಕಡ್ಡಾಯ, ಆನ್‌ಲೈನ್‌ನಲ್ಲಿ ಹೇಗೆ?

Adhaar Card

ನವ ದೆಹಲಿ: ಪ್ರತಿ 10 ವರ್ಷಕ್ಕೊಮ್ಮೆ ಆಧಾರ್‌ ಕಾರ್ಡ್‌ ಅನ್ನು ಕನಿಷ್ಠ ಒಂದು ಸಲ ಪರಿಷ್ಕರಣೆ ಮಾಡಬೇಕು ಎಂದು ಕೇಂದ್ರ ಸರ್ಕಾರ, ನಿಯಮಾವಳಿಗೆ ತಿದ್ದುಪಡಿ ತಂದಿದ್ದು, (Aadhaar Rules) ಈ ಸಂಬಂಧ ಅಧಿಸೂಚನೆಯನ್ನು ಹೊರಡಿಸಿದೆ.

ಆಧಾರ್‌ಗೆ ಪೂರಕವಾಗಿರುವ ದಾಖಲೆಗಳನ್ನು ಪರಿಷ್ಕರಣೆ ಮಾಡಬೇಕಾದ ಅಗತ್ಯ ಇದೆ. ಹತ್ತು ವರ್ಷಕ್ಕೆ ಕನಿಷ್ಠ ಒಂದು ಸಲ ಪರಿಷ್ಕರಣೆ ಮಾಡುವುದರಿಂದ ಸೆಂಟ್ರಲ್‌ ಐಡೆಂಟಿಟೀಸ್‌ ಡೇಟಾ ರೆಪೊಸಿಟರಿಯಲ್ಲಿ (CIDR) ಆಧಾರ್‌ ಸಂಬಂಧಿತ ಮಾಹಿತಿಗಳು ನಿಖರವಾಗಿ ಇರುತ್ತವೆ ಎಂದು ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ ಸಚಿವಾಲಯದ ಗೆಜೆಟ್‌ ಅಧಿಸೂಚನೆ ತಿಳಿಸಿದೆ.

ಆಧಾರ್‌ ಕಾರ್ಡ್‌ದಾರರು ತಮ್ಮ ಗುರುತಿನ ಚೀಟಿ (Proof of Identity) ಮತ್ತು ವಿಳಾಸದ ದೃಢೀಕರಣ (Proof of Address) ಕುರಿತ ದಾಖಲಾತಿಗಳನ್ನು ಸಲ್ಲಿಸಬೇಕಾಗುತ್ತದೆ ಎಂದು ಅಧಿಸೂಚನೆ ತಿಳಿಸಿದೆ.

ಆಧಾರ್‌ ಪ್ರಾಧಿಕಾರವು ಕಳೆದ ತಿಂಗಳು ಜನತೆಗೆ ಆಧಾರ್‌ ಕಾರ್ಡ್‌ ಪಡೆದು 10 ವರ್ಷ ಆಗಿದ್ದರೆ, ಗುರುತು ಮತ್ತು ವಿಳಾಸದ ದಾಖಲಾತಿಗಳನ್ನು ಪರಿಷ್ಕರಣೆ ಮಾಡುವಂತೆ ತಿಳಿಸಿತ್ತು.

ಆನ್‌ಲೈನ್‌ ಮೂಲಕ ಪರಿಷ್ಕರಣೆ ಸಾಧ್ಯ: ಅಧಿಸೂಚನೆಯ ಪ್ರಕಾರ ಆಧಾರ್‌ ಕಾರ್ಡ್‌ ಪರಿಷ್ಕರಣೆಯನ್ನು ಆನ್‌ಲೈನ್‌ ಮೂಲಕ ಮಾಡಿಕೊಳ್ಳಬಹುದು. ಇದಕ್ಕಾಗಿ ಯುಐಡಿಎಐ ಹೊಸ ಫೀಚರ್‌ ಅನ್ನು ( Update document) ಅಭಿವೃದ್ಧಿಪಡಿಸಿದೆ. myAadhaar portal ಮತ್ತು myAadhaar app ಮೂಲಕ ಆನ್‌ಲೈನ್‌ನಲ್ಲಿ ಪರಿಷ್ಕರಣೆ ಮಾಡಬಹುದು. ಯಾವುದೇ ಆಧಾರ್‌ ಎನ್‌ರೋಲ್‌ಮೆಂಟ್‌ ಸೆಂಟರ್‌ನಲ್ಲಿಯೂ ಪರಿಷ್ಕರಣೆ ಸಾಧ್ಯವಿದೆ.

ಹೊಸ ಫೀಚರ್‌ನಲ್ಲಿ ಆಧಾರ್‌ ಕಾರ್ಡ್‌ದಾರರು ತಮ್ಮ ಹೆಸರು, ಭಾವಚಿತ್ರವನ್ನು ಒಳಗೊಂಡಿರುವ (Proof of Personal Identity- POI) ಮತ್ತು ಹೆಸರು ಹಾಗೂ ವಿಳಾಸವನ್ನು ಒಳಗೊಂಡಿರುವ (Proof of Identification- POA) ದಾಖಲಾತಿಗಳನ್ನು ಪರಿಷ್ಕರಣೆ ಮಾಡಬಹುದು. ಇದುವರೆಗೆ 134 ಕೋಟಿ ಆಧಾರ್‌ ಕಾರ್ಡ್‌ ವಿತರಣೆಯಾಗಿದೆ. ಕಳೆದ ವರ್ಷ 16 ಕೋಟಿ ಕಾರ್ಡ್‌ಗಳು ಪರಿಷ್ಕರಣೆಯಾಗಿತ್ತು.

Exit mobile version