ಮುಂಬಯಿ: ಅದಾನಿ ಗ್ರೂಪ್‌ನ (Adani FPO) ಅಧೀನ ಸಂಸ್ಥೆಯಾಗಿರುವ ಅದಾನಿ ಎಂಟರ್‌ಪ್ರೈಸಸ್‌ನ ಹೆಚ್ಚುವರಿ ಷೇರುಗಳ ಎಫ್ ಪಿಒ ಮಂಗಳವಾರ ಮುಕ್ತಾಯವಾಗಿದ್ದು, ಬಿಡುಗಡೆಗೊಳಿಸಿದ್ದ ಎಲ್ಲ 20,000 ಕೋಟಿ ರೂ. ಮೌಲ್ಯದ ಷೇರುಗಳೂ ಮಾರಾಟವಾಗಿದೆ. 4.62 ಕೋಟಿ ಷೇರುಗಳಿಗೆ 4.55 ಕೋಟಿ ರೂ. ಬಿಡ್ ಸಲ್ಲಿಕೆಯಾಗಿತ್ತು.
ಸಾಂಸ್ಥಿಕೇತರ ಹೂಡಿಕೆದಾರರು ತಮಗೆ ಮೀಸಲಾಗಿದ್ದ 96.16 ಲಕ್ಷ ಷೇರುಗಳಿಗೆ ಮೂರು ಪಟ್ಟು ಹೆಚ್ಚಿನ ಬಿಡ್ ಸಲ್ಲಿಸಿದ್ದರು. ಸಾಂಸ್ಥಿಕ ಹೂಡಿಕೆದಾರರು ಕೂಡ ಪೂರ್ಣವಾಗಿ ಖರೀದಿಸಿದ್ದಾರೆ.
ಹಿಂಡೆನ್ ಬರ್ಗ್ ಸ್ಫೋಟಕ ವರದಿಯ ಬೆನ್ನಲ್ಲೇ ಸೆಕೆಂಡರಿ ಮಾರುಕಟ್ಟೆಯಲ್ಲಿ ಅದಾನಿ ಷೇರುಗಳ ತೀವ್ರ ದರ ಕುಸಿತದ ಪರಿಣಾಮ ಎಫ್‌ಪಿಒ ವಿಫಲವಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ನಿರೀಕ್ಷೆ ಮೀರಿ ಮೂರನೇ ಹಾಗೂ ಕೊನೆಯ ದಿನ ಷೇರುಗಳಿಗೆ ಬಿಡ್ ಸಲ್ಲಿಕೆಯಾಗಿತ್ತು. ಅದಾನಿ ಷೇರುಗಳು ಮಂಗಳವಾರ ಚೇತರಿಕೆ ದಾಖಲಿಸಿತ್ತು.