ಅಹಮದಾಬಾದ್: ಅದಾನಿ ಎಂಟರ್‌ಪ್ರೈಸಸ್ ಕಳೆದ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ 820 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ವರ್ಷದ ಹಿಂದೆ ಇದೇ ಅವಧಿಯಲ್ಲಿ ( Adani Enterprises) ಕಂಪನಿ 11.63 ಕೋಟಿ ರೂ. ನಷ್ಟಕ್ಕೀಡಾಗಿತ್ತು. ಕಂಪನಿಯ ಆದಾಯದಲ್ಲಿ 42% ಏರಿಕೆಯಾಗಿದ್ದು, 26,612 ಕೋಟಿ ರೂ.ಗೆ ವೃದ್ಧಿಸಿದೆ.
ಈಗಿನ ಮಾರುಕಟ್ಟೆಯಲ್ಲಿನ ಬಿಕ್ಕಟ್ಟು ತಾತ್ಕಾಲಿಕವಾಗಿದ್ದು,ಅದಾನಿ ಎಂಟರ್‌ಪ್ರೈಸಸ್ ವೇಗವಾಗಿ ಬೆಳವಣಿಗೆ ಹೊಂದಲಿದೆ ಎಂದು ಕಂಪನಿಯ ಅಧ್ಯಕ್ಷ ಗೌತಮ್ ಅದಾನಿ ತಿಳಿಸಿದ್ದಾರೆ. ಅದಾನಿ ಎಂಟರ್‌ಪ್ರೈಸಸ್, ಅದಾನಿ ಸಮೂಹದ ಪ್ರವರ್ತಕ ಸಂಸ್ಥೆಯೂ ಆಗಿದೆ. (Holding company) ಮುಖ್ಯವಾಗಿ ಗಣಿಗಾರಿಕೆ, ಕಲ್ಲಿದ್ದಲು ಉತ್ಪಾದನೆಯನ್ನು ಹೊಂದಿದೆ. ಅಧೀನ ಕಂಪನಿಗಳ ಮೂಲಕ ಏರ್‌ಪೋರ್ಟ್ ನಿರ್ವಹಣೆ, ಖಾದ್ಯ ತೈಲ, ರಸ್ತೆ, ರೈಲ್ವೆ, ಜಲ ಸಂಪನ್ಮೂಲ, ಡೇಟಾ ಸೆಂಟರ್, ಇತರ ಮೂಲಸೌಕರ್ಯ ಉದ್ದಿಮೆಗಳಲ್ಲಿ ತೊಡಗಿಸಿಕೊಂಡಿದೆ.
ಅದಾನಿ ಎಂಟರ್‌ಪ್ರಸಸ್ ಅನ್ನು ಗೌತಮ್ ಅದಾನಿಯವರು 1993ರಲ್ಲಿ ಅಹಮದಾಬಾದ್‌ನಲ್ಲಿ ಸ್ಥಾಪಿಸಿದ್ದರು. ರಾಜೇಶ್ ಅದಾನಿ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ. ಅದಾನಿ ಎಂಟರ್‌ಪ್ರೈಸಸ್ ಷೇರು ದರ ಮಂಗಳವಾರ 1.88% ಚೇತರಿಸಿತ್ತು. (1750 ರೂ.)