ಮುಂಬಯಿ: ಅಂಬುಜಾ ಸಿಮೆಂಟ್ಸ್ ಲಿಮಿಟೆಡ್‌ನಿಂದ 4.5% ಷೇರುಗಳನ್ನು ಮಾರಾಟ ಮಾಡಲು ಅದಾನಿ ಕುಟುಂಬ ನಿರ್ಧರಿಸಿದೆ. ಅದಾನಿ ಕುಟುಂಬದ ಸ್ಪೆಶಲ್ ಪರ್ಪಸ್ ವೆಹಿಕಲ್ಸ್ ಸಂಭವನೀಯ ಷೇರು ವಿಕ್ರಯಕ್ಕೆ ಬ್ಯಾಂಕ್‌ಗಳ ಅನುಮತಿ ಕೋರಿದೆ ಎಂದು ಮೂಲಗಳು ತಿಳಿಸಿವೆ. ಮುಂದಿನ ವಾರ (Adani stocks) ಈ ಷೇರು ಮಾರಾಟ ನಡೆಯುವ ಸಾಧ್ಯತೆ ಇದೆ. ಇದು ಸೆಕೆಂಡರಿ ಸೇಲ್ ಆಗಿರಲಿದ್ದು, 3,000 ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆ ಇದೆ.
ಬ್ಲಾಕ್ ಡೀಲ್ ಮೂಲಕ ಷೇರು ವಿಕ್ರಯ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ ಅದಾನಿ ಎಂಟರ್‌ಪ್ರೈಸಸ್, ಅದಾನಿ ಪವರ್, ಅದಾನಿ ವಿಲ್ಮರ್ ಷೇರುಗಳನ್ನು ಹೆಚ್ಚುವರಿ ನಿಗಾದಲ್ಲಿ ಇಡಲಾಗಿದೆ ಎಂದು ಎನ್‌ಎಸ್‌ಇ ತಿಳಿಸಿದೆ.