Site icon Vistara News

Adani group : ಅದಾನಿ ಎಂಟರ್‌ಪ್ರೈಸಸ್‌ನ 1.8 ಕೋಟಿ ಷೇರು ಮಾರಿದ ಅದಾನಿ ಕುಟುಂಬ

adani group

ನವ ದೆಹಲಿ: ಅದಾನಿ ಎಂಟರ್‌ಪ್ರೈಸಸ್‌ನ 1.8 ಕೋಟಿ ಷೇರುಗಳನ್ನು ಅದಾನಿ ಕುಟುಂಬ ಮಾರಾಟ ಮಾಡಿದೆ. ಮತ್ತೊಂದು ಡೀಲ್‌ನಲ್ಲಿ ಗೋಲ್ಡ್‌ಮನ್‌ ಸ್ಯಾಕ್ಸ್‌ ಜಿಕ್ಯುಜಿ, ಅದಾನಿ ಗ್ರೀನ್‌ ಎನರ್ಜಿಯಲ್ಲಿನ 119 ಕೋಟಿ ಷೇರುಗಳನ್ನು ಖರೀದಿಸಿದೆ. 4,140 ಕೋಟಿ ರೂ.ಗಳ ಬಲ್ಕ್‌ ಡೀಲ್‌ನಲ್ಲಿ ಎಸ್‌ಬಿ ಅದಾನಿ ಕುಟುಂಬದ ಟ್ರಸ್ಟ್‌ (SB Adani family trust) ಅದಾನಿ ಎಂಟರ್‌ಪ್ರೈಸಸ್‌ನಲ್ಲಿನ 1.8 ಕೋಟಿ ಷೇರುಗಳನ್ನು ಮಾರಾಟ ಮಾಡಿದೆ.

ಜಿಎಸ್‌ ಜಿಕ್ಯುಜಿ ಪಾರ್ಟ್‌ನರ್ಸ್‌ ಇಂಟರ್‌ನ್ಯಾಶನಲ್‌ ಅಪಾರ್ಚುನಿಟೀಸ್‌ ಫಂಡ್‌ (GS GQG Partners International Opportunities Fund) ಅದಾನಿ ಗ್ರೀನ್‌ ಎನರ್ಜಿಯ 1,19,53,804 ಷೇರುಗಳನ್ನು ಖರೀದಿಸಿದೆ. ಜಿಕ್ಯುಜಿ ಮತ್ತು ಇತರ ವಿದೇಶಿ ಹೂಡಿಕೆದಾರರು ಬುಧವಾರ ಅದಾನಿ ಷೇರುಗಳಲ್ಲಿ 100 ಕೋಟಿ ಡಾಲರ್‌ ( 8,200 ಕೋಟಿ ರೂ.) ಹೂಡಿಕೆ ಮಾಡಿದ್ದಾರೆ.

ಇದನ್ನೂ ಓದಿ: Adani Group : 2-3 ವರ್ಷಗಳಲ್ಲಿ 90,000 ಕೋಟಿ ರೂ. ಲಾಭ ಗಳಿಸಲು ಅದಾನಿ ಗ್ರೂಪ್‌ ಗುರಿ, ಇದು ಹೇಗೆ ?

ಈ ಡೀಲ್‌ಗಳ ಹಿನ್ನೆಲೆಯಲ್ಲಿ ಅದಾನಿ ಎಂಟರ್‌ಪ್ರೈಸಸ್‌ ಷೇರು ದರದಲ್ಲಿ 5.34% ಏರಿಕೆ ದಾಖಲಾಯಿತು. ಅಮೆರಿಕ ಮೂಲದ ಜಿಕ್ಯುಜಿ ಪಾರ್ಟ್‌ನರ್ಸ್‌ನ ನೇತೃತ್ವವನ್ನು ಅನಿವಾಸಿ ಭಾರತೀಯ ರಾಜೀವ್‌ ಜೈನ್‌ ವಹಿಸಿದ್ದಾರೆ. ಅದಾನಿ ಗ್ರೂಪ್‌ನಲ್ಲಿ ಮೂರನೇ ಸುತ್ತಿನಲ್ಲಿ ಅವರ ಕಂಪನಿ ಹೂಡಿಕೆ ಮಾಡಿದೆ.

ಕಳೆದ ಮಾರ್ಚ್‌ನಲ್ಲಿ ಹಿಂಡೆನ್‌ ಬರ್ಗ್‌ ವರದಿಯಿಂದ ಅದಾನಿ ಗ್ರೂಪ್‌ ಸ್ಟಾಕ್‌ಗಳ ದರ ಕುಸಿದಿದ್ದಾಗ ಜಿಕ್ಯೂಜಿ ಪಾರ್ಟ್‌ನರ್ಸ್‌ 15,446 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿತ್ತು. ಅದಾನಿ ಸ್ಟಾಕ್‌ಗಳಲ್ಲಿ ಚೇತರಿಕೆ ಕಂಡು ಬಂದಿದ್ದರೂ, ಅದಾನಿ ಕಂಪನಿಗಳ ಒಟ್ಟು ಷೇರು ಮಾರುಕಟ್ಟೆ ಮೌಲ್ಯ 10 ಲಕ್ಷ ಕೋಟಿ ರೂ. ಇದೆ. ಅಂದರೆ ಹಿಂಡೆನ್‌ ಬರ್ಗ್‌ ವರದಿ ಪ್ರಕಟವಾಗುವುದಕ್ಕಿಂತ ಮೊದಲಿನ ಸನ್ನಿವೇಶಕ್ಕೆ ಹೋಲಿಸಿದರೆ ಇನ್ನೂ 48% ಇಳಿಕೆ.

Exit mobile version