ವಾಣಿಜ್ಯ
Adani Group : 2-3 ವರ್ಷಗಳಲ್ಲಿ 90,000 ಕೋಟಿ ರೂ. ಲಾಭ ಗಳಿಸಲು ಅದಾನಿ ಗ್ರೂಪ್ ಗುರಿ, ಇದು ಹೇಗೆ ?
Adani Group ಮುಂದಿನ 2-3 ವರ್ಷಗಳಲ್ಲಿ ಅದಾನಿ ಗ್ರೂಪ್ 90,000 ಕೋಟಿ ರೂ. ತೆರಿಗೆ ಪೂರ್ವ ಲಾಭ ಗಳಿಸುವ ನಿರೀಕ್ಷೆ ಇದೆ ಎಂದು ಕಂಪನಿ ಹೇಳಿದೆ. ವಿವರ ಇಲ್ಲಿದೆ.
ಅಹಮದಾಬಾದ್: ಮುಂದಿನ 2-3 ವರ್ಷಗಳಲ್ಲಿ 90,000 ಕೋಟಿ ರೂ. ತೆರಿಗೆ ಪೂರ್ವ ಲಾಭ ಗಳಿಸುವ ಗುರಿಯನ್ನು ಅದಾನಿ ಗ್ರೂಪ್ ಹೊಂದಿದೆ ಎಂದು ಕಂಪನಿ ಹೇಳಿಕೆ ನೀಡಿದೆ. ( Adani Group) ಏರ್‌ಪೋರ್ಟ್ಸ್, ಎನರ್ಜಿ, ಸಿಮೆಂಟ್, ನವೀಕರಿಸಬಹುದಾದ ಇಂಧನ, ಸಾರಿಗೆ, ಲಾಜಿಸ್ಟಿಕ್ಸ್, ವಿದ್ಯುತ್, ವಿದ್ಯುತ್ ವಿತರಣೆ ಉದ್ದಿಮೆ ವಲಯದಲ್ಲಿ ಲಾಭ ಗಳಿಕೆ ಸಾಧ್ಯವಾಗಲಿದೆ ಎಂದು ಅದಾನಿ ಗ್ರೂಪ್ ತಿಳಿಸಿದೆ.
ಅದಾನಿ ಸಮೂಹವು ಇತ್ತೀಚೆಗೆ 2.65 ಶತಕೋಟಿ ಡಾಲರ್ ಸಾಲವನ್ನು (ಅಂದಾಜು 21,730 ಕೋಟಿ ರೂ.) ಮರು ಪಾವತಿಸಿದೆ. ಇದು ಹಿಂಡೆನ್ ಬರ್ಗ್‌ನ ವರದಿಯ ಬಳಿಕ ಉಂಟಾಗಿರುವ ಷೇರು ಹೂಡಿಕೆದಾರರ ವಿಶ್ವಾಸನಷ್ಟವನ್ನು ಭರಿಸಲು ಸಹಕಾರಿಯಾಗುವ ನಿರೀಕ್ಷೆ ಇದೆ.
ನವೀಕರಿಸಬಹುದಾದ ಇಂಧನ, ಸಾರಿಗೆ ಮತ್ತು ಬಂದರುಗಳು ಅದಾನಿ ಗ್ರೂಪ್‌ನ ಆದಾಯ ವೃದ್ಧಿಗೆ ಸಹಕರಿಸಲಿದೆ. ಮೂಲಸೌಕರ್ಯ ಉದ್ದಿಮೆಯು ಸಮೂಹದ ಪ್ರಮುಖ ಬಿಸಿನೆಸ್ ಆಗಿದೆ. ಇಂಧನ, ಸಾರಿಗೆ, ಲಾಜಿಸ್ಟಿಕ್ಸ್ ಇದರಲ್ಲಿದ್ದು, ಅದಾನಿ ಗ್ರೂಪ್ ಮುನ್ನಡೆಸುತ್ತಿದೆ. ಕಂಪನಿಗೆ ಕ್ಯಾಶ್ ಫ್ಲೋ ಆಗಲು ಇದು ಸಹಕರಿಸಿದೆ. ಸಾಲ ಮರು ಪಾವತಿಯ ವಿಚಾರದಲ್ಲಿ ಯಾವುದೇ ಸಮಸ್ಯೆ ಸದ್ಯಕ್ಕಿಲ್ಲ. ರಿಫೈನಾನ್ಸ್ ರಿಸ್ಕ್ ಕೂಡ ಇಲ್ಲ.
ಅದಾನಿ ಗ್ರೂಪ್‌ನ ನಿವ್ವಳ ಆಸ್ತಿ ಮೌಲ್ಯ 3,91,000 ಕೋಟಿ ರೂ.ಗಳಾಗಿದೆ. ಅದಾನಿ ಗ್ರೂಪ್ ತನ್ನ ಲಾಂಗ್ ಟರ್ಮ್ ಡೆಟ್ ಪೋರ್ಟ್‌ಫೋಲಿಯೊವನ್ನು ವೈವಿಧ್ಯಮಯಗೊಳಿಸಿದೆ. ಬ್ಯಾಂಕ್‌ಗಳಿಗೆ ತನ್ನ ಎಕ್ಸ್‌ಪೋಶರ್ ಅನ್ನು ಕಡಿಮೆ ಮಾಡಿದೆ. ಅದಾನಿ ಸಮೂಹದ ಬಹುತೇಕ ಸಾಲಗಳು ಬಾಂಡ್‌ಗಳು ಮತ್ತು ಅಂತಾರಾಷ್ಟ್ರೀಯ ಬ್ಯಾಂಕ್‌ಗಳಿಂದ ಪಡೆದಿರುವ ಸಾಲಗಳಾಗಿವೆ.
ಇದನ್ನೂ ಓದಿ: Adani stocks : ಅದಾನಿ ಷೇರುದಾರರಿಗೆ ದಿಢೀರ್ 50,000 ಕೋಟಿ ರೂ. ನಷ್ಟ, ಕಾರಣವೇನು?
ಅದಾನಿ ಗ್ರೂಪ್ ಪಡೆದಿರುವ ಸಾಲಗಳಲ್ಲಿ ಭಾರತೀಯ ಸಾರ್ವಜನಿಕ ಬ್ಯಾಂಕ್‌ಗಳಿಂದ ಪಡೆದಿರುವ ಸಾಲದ ಪ್ರಮಾಣ ಸೀಮಿತ ಮಟ್ಟದಲ್ಲಿದೆ. ಅದಾನಿ ಸಮೂಹದ ನಿವ್ವಳ ಸಾಲ ಅನುಪಾತ ಕೂಡ ಇಳಿಕೆಯಾಗಿದೆ. ಅದಾನಿ ಗ್ರೂಪ್ ಪಡೆದಿರುವ ಒಟ್ಟು ಸಾಲದಲ್ಲಿ ಬಾಂಡ್‌ಗಳ ಪಾಲು 39% ಆಗಿದೆ. ವಿದೇಶಿ ಬ್ಯಾಂಕ್‌ಗಳ ಪಾಲು 29% ಆಗಿದೆ. ಪಿಎಸ್‌ಯು ಮತ್ತು ಖಾಸಗಿ ಬ್ಯಾಂಕ್‌ಗಳಿಂದ ಮತ್ತು ಎನ್‌ಬಿಎಫ್‌ಸಿ ಪಾಲು 32% ಆಗಿದೆ.
ಪ್ರಮುಖ ಸುದ್ದಿ
Happiest Employees: ಅಮೆರಿಕದ ಹ್ಯಾಪಿಯೆಸ್ಟ್ ಕಂಪನಿಗಳ ಟಾಪ್ 20 ಪಟ್ಟಿಯಲ್ಲಿ ಭಾರತದ 3 ಕಂಪನಿ!
Happiest Employees: ಇನ್‌ಡೀಡ್ ಜಾಬ್ ಸೈಟ್ ನಡೆಸಿದ ಸಮೀಕ್ಷೆಯಲ್ಲಿ ಅಮೆರಿಕ ಟಾಪ್ 20 ಸಂತೋಷದಾಯಕ ಕಂಪನಿಗಳ ಪಟ್ಟಿಯಲ್ಲಿ ಟಿಸಿಎಸ್, ವಿಪ್ರೋ ಮತ್ತು ಇನ್ಫೋಸಿಸ್ ಸ್ಥಾನಪಡೆದುಕೊಂಡಿವೆ.
ನವದೆಹಲಿ: ಉದ್ಯೋಗ ಹುಡುಕಲು ನೆರವು ನೀಡುವ ಜಾಲತಾಣ ಇನ್‌ಡೀಡ್ (Indeed Survey) ನಡೆಸಿದ ಉದ್ಯೋಗಿಗಳು ಯೋಗಕ್ಷೇಮ ಸಮೀಕ್ಷೆಯಲ್ಲಿ ಭಾರತೀಯ ಮೂಲದ ಮೂರು ಕಂಪನಿಗಳು ಸ್ಥಾನ ಪಡೆದುಕೊಂಡಿವೆ(Indian Company). ಅಮೆರಿಕದ ಉದ್ಯೋಗಿಗಳ ಯೋಗಕ್ಷೇಮ ಕೈಗೊಳ್ಳುವ ಕಂಪನಿಗಳ ಪಟ್ಟಿಯಲ್ಲಿ ಲವ್ಸ್ ಟ್ರಾವೆಲ್ ಸ್ಟಾಪ್ಸ್ ಆ್ಯಂಡ್ ಸ್ಟೋರ್ಸ್(Love’s Travel Stops & County Stores) ಮೊದಲ ಸ್ಥಾನದಲ್ಲಿದೆ. ಅತ್ಯಂತ ಸಂತೋಷದಾಯಕ ಉದ್ಯೋಗಿಗಳನ್ನು ಹೊಂದಿರುವ ಈ ಪಟ್ಟಿಯಲ್ಲಿ ಟೆಕ್ ದೈತ್ಯ ಕಂಪನಿಗಳಾದ ಟಿಸಿಎಸ್(TCS), ಇನ್ಫೋಸಿಸ್ (Infosys) ಮತ್ತು ವಿಪ್ರೋ (Wipro) ಕ್ರಮವಾಗಿ, 4, 8 ಮತ್ತು 9 ಸ್ಥಾನವನ್ನು ಪಡೆದುಕೊಂಡಿವೆ.
ಪ್ರಥಮ ಸ್ಥಾನದಲ್ಲಿರುವ ಲವ್ಸ್ ಟ್ರಾವೆಲ್ ಸ್ಟಾಪ್ಸ್ ಆ್ಯಂಡ್ ಕಂಟ್ರಿ ಸ್ಟೋರ್, 100 ಅಂಕಗಳ ಪೈಕಿ 83 ಅಂಕವನ್ನು ಸಂಪಾದಿಸಿದೆ. ಸಾವಿರಾರು ಅನಾಮಧೇಯ ಉದ್ಯೋಗಿಗಳ ವಿಮರ್ಶೆ, ಸಂತೋಷ, ಒತ್ತಡದ ಹಂತಗಳು, ಉದ್ಯೋಗ ಸಂತೃಪ್ತಿ ಮತ್ತು ಉದ್ದೇಶ ಸೇರಿ ಅನೇಕ ಸಂಗತಿಗಳ ಆಧಾರದ ಮೇಲೆ ಜಪಾನ್ ಮೂಲದ ಇನ್‌ಡೀಡ್ ಜಾಬ್ ಸೈಟ್ ಸಮೀಕ್ಷೆಯನ್ನು ಪೂರ್ತಿಗೊಳಿಸಿದೆ.
ಸಾವಿರಕ್ಕಿಂತಲೂ ಹೆಚ್ಚು ಉದ್ಯೋಗಿಗಳು ಇರುವ ಕಂಪನಿಗಳನ್ನು ಸಮೀಕ್ಷೆಗೆ ಪರಿಗಣಿಸಲಾಗಿದೆ. ಏರ್‌ಲೈನ್ಸ್‌ನಿಂದ ಕನ್ಸಲ್ಟನ್ಸೀಸ್, ಫಾಸ್ಟ್ ಫುಡ್ ಚೈನ್ ಕಂಪನಿಗಳವರೆಗೆ ಹಲವು ವಿಧದ ಕಂಪನಿಗಳನ್ನು ಸಮೀಕ್ಷೆಗೆ ಪರಿಗಣಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Best Company of 2023: ‘ಟೈಮ್’ 100 ಬೆಸ್ಟ್ ಕಂಪನಿಗಳ ಲಿಸ್ಟ್‌ನಲ್ಲಿ ಭಾರತದ ಏಕೈಕ ಬೆಂಗಳೂರಿನ ಕಂಪನಿ!
ಆ 20 ಕಂಪನಿಗಳು ಯಾವವು?
ಲವ್ಸ್ ಟ್ರಾವೆಲ್ ಸ್ಟಾಪ್ಸ್ ಆ್ಯಂಡ್ ಕಂಟ್ರಿ ಸ್ಟೋರ್ಸ್, ಎಚ್ ಆ್ಯಂಡ್ ಆರ್ ಬ್ಲಾಕ್, ಡೆಲ್ಟಾ ಏರ್ ಲೈನ್ಸ್, ಟಾಟಾ ಕನ್ಸಲ್ಟನ್ಸಿ ಸರ್ವೀಸಸ್, ಅಕ್ಸೆಂಚರ್, ಐಬಿಎಂ, ಎಲ್3ಹ್ಯಾರಿಸ್, ವಿಪ್ರೋ, ಇನ್ಫೋಸಿಸ್, ನೈಕ್, ವ್ಯಾನ್ಸ್, ಇನ್-ಎನ್-ಔಟ್ ಬರ್ಗರ್, ಕಾಗ್ನಿಜಂಟ್ ಟೆಕ್ನಾಲಜಿ ಸಲೂಷನ್ಸ್, ಹಾಲ್ಮಾರ್ಕ್, ಮೈಕ್ರೋಸಾಫ್ಟ್, ನಾರ್ತ್‌ರಾಪ್ ಗ್ರುಮ್ಮನ್, ಫೆಡ್‌ಎಕ್ಸ್ ಫ್ರೈಟ್, ಡಚ್ ಬ್ರದರ್ಸ್ ಕಾಫಿ, ಆ್ಯಪಲ್.
ದೇಶ
Money Guide: ಅತ್ಯುತ್ತಮ ನಿವೃತ್ತ ಜೀವನಕ್ಕಾಗಿ ಟಾಪ್ 10 ಹಣ ಉಳಿತಾಯದ ಟಿಪ್ಸ್!
Money Guide: ನಿಮ್ಮ ನಿವೃತ್ತಿಯ ದಿನಗಳು ಅತ್ಯುತ್ತಮ ಆಗಿರಬೇಕು ಎಂದಾದರೆ, ವೃತ್ತಿಯ ಆರಂಭದಿಂದಲೇ ಉಳಿತಾಯವನ್ನು ಆರಂಭಿಸಿ.
ಹಣವನ್ನು ಉಳಿತಾಯ (Money Saving) ಮಾಡುವುದೂ ಒಂದು ಕಲೆ. ದುಡಿಮೆಯ ದಿನಗಳಲ್ಲಿ ಒಂದಿಷ್ಟು ಹಣವನ್ನು ಉಳಿತಾಯದ ಮಾಡಿದರೆ, ನಿವೃತ್ತಿಯ ದಿನಗಳನ್ನು (Retirement Life) ನೆಮ್ಮದಿಯಾಗಿ ಕಳೆಯಬಹುದು. ಇಲ್ಲದಿದ್ದರೆ, ದುಡಿಯುವ ಕಸುವು ಇಲ್ಲದ ಸಮಯದಲ್ಲಿ ಹಣಕ್ಕಾಗಿ ಪರದಾಡಬೇಕಾಗುತ್ತದೆ. ಹಾಗಾಗಿ, ನಿಮ್ಮ ವೃತ್ತಿಯ ಆರಂಭದ ದಿನಗಳಿಂದಲೇ ನಿವೃತ್ತಿಯ ಬಗ್ಗೆ ಪ್ಲ್ಯಾನ್ ಮಾಡಿ(Plan for Retirement life), ಹಣವನ್ನು ಉಳಿತಾಯ ಮಾಡಬೇಕು. ನಿವೃತ್ತಿಯ ಅಂಚಿಗೆ ಬರುವಷ್ಟರಲ್ಲಿ ದೊಡ್ಡ ಮೊತ್ತದ ಉಳಿತಾಯ ನಿಮಗಾಗಿ ಕಾಯುತ್ತಿರುತ್ತದೆ. ಹಾಗಾಗಿ, ಈಗನಿಂದಲೇ ನೀವು ಉಳಿತಾಯ ಮತ್ತು ನಿವೃತ್ತಿಯ ದಿನಗಳಿಗಾಗಿ ಹೂಡಿಕೆಯ ಪ್ಲ್ಯಾನ್ ಮಾಡುವುದು ಶುರು ಮಾಡಿ(Money Guide).
ನಿವೃತ್ತಿಗಾಗಿ ಹಣ ಉಳಿಸುವ ಮಾರ್ಗಗಳು….
1.ಉಳಿತಾಯ ಬೇಗ ಆರಂಭಿಸಿ
ಉತ್ತಮ ನಿವೃತ್ತಿ ಜೀವನಕ್ಕಾಗಿ ವೃತ್ತಿ ಆರಂಭದ ದಿನಗಳಿಂದಲೇ ಉಳಿತಾಯವನ್ನು ಆರಂಭಿಸಬೇಕು. ಚಿಕ್ಕ ಮೊತ್ತದ ಸೇವಿಂಗ್ ಕೂಡ ನಿವೃತ್ತಿ ಹೊತ್ತಿಗೆ ಬಹುದೊಡ್ಡ ಮೊತ್ತವಾಗಿ ಬದಲಾಗಿರುತ್ತದೆ.
2.ಟಾರ್ಗೆಟ್ ಸೆಟ್ ಮಾಡಿಕೊಳ್ಳಿ
ನಿಮ್ಮ ನಿರೀಕ್ಷಿತ ವೆಚ್ಚಗಳು ಮತ್ತು ಜೀವನಶೈಲಿಯ ಆಧಾರದ ಮೇಲೆ ನಿವೃತ್ತಿಗಾಗಿ ನಿಮಗೆ ಎಷ್ಟು ಹಣ ಬೇಕು ಎಂದು ನಿರ್ಧರಿಸಿ. ಹಣದುಬ್ಬರ ಮತ್ತು ಆರೋಗ್ಯ ವೆಚ್ಚಗಳಂತಹ ಅಂಶಗಳನ್ನು ಪರಿಗಣಿಸಿ ಸೇವಿಂಗ್ ಆರಂಭಿಸಿ. ಸ್ಪಷ್ಟವಾದ ನಿವೃತ್ತಿ ಗುರಿಯನ್ನು ಹಾಕಿಕೊಳ್ಳುವುದರಿಂದ ಹಣ ಉಳಿಕೆಯಲ್ಲಿ ಸ್ಪಷ್ಟತೆ ದೊರೆಯುತ್ತದೆ.
3.ರಿಟೈರ್‌ಮೆಂಟ್ ಬಜೆಟ್ ತಯಾರಿಸಿ
ನಿಮ್ಮ ಸದ್ಯದ ಆದಾಯ ಮತ್ತು ವೆಚ್ಚದ ಅನುಸಾರ ನಿಮ್ಮ ನಿವೃತ್ತಿಯ ಬಜೆಟ್ ತಯಾರಿಸಿ. ಅನವಶ್ಯವಾಗಿ ಎಲ್ಲೆಲ್ಲಿ ಹಣ ಪೋಲಾಗುತ್ತಿದೆ ಎಂದು ಗುರುತಿಸಿಕೊಳ್ಳಿ ಮತ್ತು ಅಂಥ ಹಣವನ್ನು ಉಳಿಕೆಯ ಪಟ್ಟಿಗೆ ಸೇರಿಸಿ. ಈ ಮೂಲಕ ರಿಟೈರ್ ಫಂಡ್ ಕ್ರೋಡೀಕರಿಸಬಹುದು.
4.ರಿಟೈರ್‌ಮೆಂಟ್ ಅಕೌಂಟ್!
ಭಾರತದಲ್ಲಿ ನಾನಾ ಅಕೌಂಟ್‌ಗಳು ಚಾಲ್ತಿಯಲ್ಲಿವೆ. ಅವುಗಳ ಮೂಲಕ ರಿಟೈರ್ಮೆಂಟ್ ಪ್ಲ್ಯಾನ್ ಮಾಡಬಹುದು. ಇಪಿಎಫ್, ಪಿಪಿಎಫ್, ಎನ್‌ಪಿಎಸ್, ಎಫ್‌ಡಿ ಇತ್ಯಾದಿ ಖಾತೆಗಳ ಮೂಲಕ ಸೇವಿಂಗ್ ಹೆಚ್ಚಿಸುತ್ತಾ ಹೋದಂತೆ ನಿವೃತ್ತಿ ಸಮಯದಯಲ್ಲಿ ತುಂಬಾ ಸಹಕಾರಿಯಾಗುತ್ತದೆ.
5.ಹೂಡಿಕೆ ಮಾಡಿ
ಷೇರುಗಳು, ನಿರ್ದಿಷ್ಟ ಆದಾಯ ತರುವ ಹೂಡಿಕೆಗಳು, ರಿಯಲ್ ಎಸ್ಟೇಟ್ ಸೇರಿದಂತೆ ಇನ್ನಿತರ ಹೂಡಿಕೆಗಳನ್ನು ಆಯ್ದುಕೊಳ್ಳಬಹುದು. ನೀವು ಯಾವುದೇ ರೀತಿಯ ಹೂಡಿಕೆಯ ಸಾಧನವನ್ನು ಆಯ್ಕೆ ಮಾಡಿಕೊಳ್ಳಿ. ಆದರೆ, ಅದಕ್ಕಿಂತ ಮುಂಚೆ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಮುಂದುವರಿಯರಿ.
6.ಅನವಶ್ಯ ವೆಚ್ಚ ಬೇಡ
ನಿಮ್ಮ ನಿವೃತ್ತಿಯ ದಿನಗಳು ಅತ್ಯುತ್ತಮವಾಗಿರಬೇಕು ಎಂದಾದರೆ, ಈಗಿನಿಂದಲೂ ಅನವಶ್ಯ ವೆಚ್ಚಗಳನ್ನು ದೂರ ಮಾಡಿ. ನಿಮ್ಮ ರಿಟೈರ್ಮೆಂಟ್ ಖಾತೆಗಳಿಗೆ ಆಟೋಮೆಟಿಕ್ ಆಗಿ ದುಡ್ಡು ಪೇ ಆಗುವ ಹಾಗೆ ಮಾಡಿ. ನಿಮ್ಮ ಸಂಬಳದಲ್ಲಿ ಇನ್‌ಕ್ರಿಮೆಂಟ್ ಆದಾಗಲೆಲ್ಲ. ಈ ರೀತಿಯ ಪರಿಹಾರವನ್ನು ಕಂಡುಕೊಳ್ಳಬಹುದು.
7.ಪರ್ಯಾಯ ಉಳಿತಾಯ
ಮ್ಯೂಚವಲ್ ಫಂಡ್ಸ್, ಷೇರುಗಳು, ಬಾಂಡ್‌ಗಳಂಥ ಪರ್ಯಾಯ ಉಳಿತಾಯದ ಮಾರ್ಗಗಳನ್ನು ಹುಡುಕಿಕೊಳ್ಳಬಹುದು. ಕೇವಲ ಹಣವನ್ನು ಫಿಕ್ಸೆಡ್ ಡಿಪಾಸೆಟ್ ಮಾಡುವುದು ಮಾತ್ರವೇ ಉಳಿತಾಯದ ಮಾರ್ಗವಲ್ಲ. ಉಳಿತಾಯದ ಜತೆಗೆ ಹಣ ಹೆಚ್ಚಾಗುವ ಮಾರ್ಗಗಳಿವೆ. ಅವುಗಳನ್ನು ಶೋಧಿಸಬಹುದು. ಆದರೆ, ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ.
8.ತೆರಿಗೆ ಮಾಹಿತಿ ಇರಲಿ
ತೆರಿಗೆ ಕಾನೂನುಗಳು, ಹೂಡಿಕೆ ಆಯ್ಕೆಗಳು ಮತ್ತು ನಿವೃತ್ತಿ ಯೋಜನೆ ತಂತ್ರಗಳಲ್ಲಿನ ಬದಲಾವಣೆಗಳ ಬಗ್ಗೆ ನಿಮಗೆ ಅಪ್‌ಡೇಟೆಡ್ ಮಾಹಿತಿ ಇರುವುದು ಉತ್ತಮ. ತಿಳುವಳಿಕೆಯುಳ್ಳ ಹಣಕಾಸಿನ ನಿರ್ಧಾರಗಳನ್ನು ಮಾಡಲು ಈ ರೀತಿಯ ಅಪ್‌ಡೇಟೆಡ್ ಮಾಹಿತಿ ಇದ್ದರೆ ಬೆಸ್ಟ್ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ.
9.ರಿಟೈರ್ಮೆಂಟ್ ಫಂಡ್ ಮುಟ್ಟಬೇಡಿ
ಯಾವುದೇ ಕಾರಣಕ್ಕೂ ನಿಮ್ಮ ನಿವೃತ್ತಿ ಉಳಿತಾಯವನ್ನು ಇತರ ವೆಚ್ಚಗಳಿಗಾಗಿ ಬಳಸಲು ಹೋಗಲೇಡಿ. ಉಳಿತಾಯದ ಹಣವನ್ನು ಬಳಸಲಾರಂಭಿಸಿದರೆ, ನಿವೃತ್ತಿಯ ಸಮಯದಲ್ಲಿ ಮತ್ತೆ ನೀವು ಹಣವಿಲ್ಲದೇ ಪರದಾಡಬೇಕಾಗುತ್ತದೆ. ಹಾಗಾಗಿ, ಎಂಥದ್ದೇ ಸಂದರ್ಭದಲ್ಲಿ ನಿವೃತ್ತಿಗಾಗಿ ತೆಗೆದಿಟ್ಟ ಅಥವಾ ಸೇವಿಂಗ್ ಮಾಡಿದ ಹಣವನ್ನು ಸದ್ಯದ ವೆಚ್ಚಕ್ಕೆ ಬಳಸಲು ಮುಂದಾಗಬೇಡಿ.
ಈ ಸುದ್ದಿಯನ್ನೂ ಓದಿ: Money Guide: ಪಿಪಿಎಫ್, ಎನ್‌ಎಸ್‌ಸಿ, ಎಸ್‌ಸಿಎಸ್‌ಎಸ್ ಖಾತೆ ಸ್ಥಗಿತವಾಗದಂತೆ ನೋಡಿಕೊಳ್ಳಿ
10.ತುರ್ತು ನಿಧಿ ಇರಲಿ
ಅನಿರೀಕ್ಷಿತ ವೆಚ್ಚಗಳಿಗಾಗಿ ತುರ್ತು ನಿಧಿಯನ್ನು ನಿರ್ವಹಣೆ ಮಾಡುವುದು ಉತ್ತಮ. ಯಾಕೆಂದರೆ, ತುರ್ತು ನಿಧಿ ನಿಮ್ಮ ಬಳಿ ಇದ್ದರೆ ನೀವು ನಿಮ್ಮ ಸೇವಿಂಗ್ಸ್ ಅನ್ನು ವೆಚ್ಚಗಳಿಗೆ ಬಳಸಲು ಮುಂದಾಗುವುದಿಲ್ಲ. ಇಲ್ಲದಿದ್ದರೆ, ಉಳಿತಾಯದ ಹಣವನ್ನೇ ನೀವು ತುರ್ತು ಅಗತ್ಯಗಳಿಗೆ ಬಳಸುತ್ತೀರಿ. ಆಗ ನಿಮ್ಮ ನಿವೃತ್ತಿಯ ಎಲ್ಲ ಪ್ಲ್ಯಾನ್ ಹಾಳಾಗುತ್ತದೆ.
ಗ್ಯಾಜೆಟ್ಸ್
Reliance Jio: ಅಬ್ಬಬ್ಬಾ ಲಾಟರಿ..! ಐಫೋನ್ 15 ಖರೀದಿಸಿದರೆ 6 ತಿಂಗಳು ರಿಲಯನ್ಸ್ ಜಿಯೋ ಫ್ರೀ ಪ್ಲಾನ್
Reliance Jio: ಹೊಸದಾಗಿ ಲಾಂಚ್ ಆಗಿರುವ ಆ್ಯಪಲ್ ಐಫೋನ್ 15 ಖರೀದಿಯ ಮೇಲೆ ರಿಲಯನ್ಸ್ ಜಿಯೋ ಬಂಪರ್ ಆಫರ್ ಘೋಷಣೆ ಮಾಡಿದೆ.
ಮುಂಬೈ, ಮಹಾರಾಷ್ಟ್ರ: ರಿಲಯನ್ಸ್ ರಿಟೇಲ್ ಸ್ಟೋರ್‌ಗಳು (Reliance Retail), ರಿಲಯನ್ಸ್ ಡಿಜಿಟಲ್ ಆನ್‌ಲೈನ್ (Reliance Digital Online) ಅಥವಾ ಜಿಯೋಮಾರ್ಟ್‌ನಲ್ಲಿ (Jio Mart) ಜಿಯೋ ಐಫೋನ್ 15 (iPhone 15) ಖರೀದಿ ಮಾಡಿದರೆ 2,394 ರೂ. ಮೌಲ್ಯದ ಆರು ತಿಂಗಳ ಪ್ಲಾನ್ (Reliance Jio) ಅನ್ನು ಉಚಿತವಾಗಿ ಬಳಕೆದಾರರಿಗೆ ನೀಡಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬಳಕೆದಾರರ ನಾಡಿ ಮಿಡಿತವನ್ನು ಅರಿತು ಕೊಂಡಿರುವ ರಿಲಯನ್ಸ್ ಜಿಯೋ, ಆಪಲ್ ಐಫೋನ್ 15 ಖರೀದಿಸುವವರಿಗೆ 399 ರೂ. ಪ್ಲಾನ್ ಅನ್ನು ಆರು ತಿಂಗಳುಗಳ ವರೆಗೆ ಉಚಿತವಾಗಿ ನೀಡಲಿದೆ. ಇದರ ಒಟ್ಟು ಮೌಲ್ಯ 2,394 ರೂ.ಗಳಾಗಲಿದ್ದು, ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ.
ರಿಲಯನ್ಸ್ ಜಿಯೋ, ಆಪಲ್ ಐಫೋನ್ 15 ಖರೀದಿಸುವವರಿಗೆ ನೀಡುತ್ತಿರುವ ರೂ. 399 ಪ್ಲಾನ್ ನಲ್ಲಿ ಬಳಕೆದಾರರಿಗೆ ಪ್ರತಿ ನಿತ್ಯ 3 ಜಿಬಿ ಹೈ ಸ್ಪೀಡ್ ಡೇಟಾ ಬಳಕೆಗೆ ದೊರೆಯಲಿದ್ದು, ಜೊತೆಗೆ ಸಂಪೂರ್ಣ ಅನ್ ಲಿಮಿಟೆಡ್ ಕಾಲಿಂಗ್ ಸಹ ಸಿಗಲಿದೆ. ಅಲ್ಲದೇ ಪ್ರತಿನಿತ್ಯ 100 ಎಸ್ಎಂಎಸ್ ಗಳನ್ನು ಸಹ ಉಚಿತವಾಗಿ ಕಳುಹಿಸಬಹುದಾಗಿದೆ.
ಆದರೆ ರಿಲಯನ್ಸ್ ರಿಟೇಲ್ ಸ್ಟೋರ್‌ಗಳು, ರಿಲಯನ್ಸ್ ಡಿಜಿಟಲ್ ಆನ್‌ಲೈನ್ ಅಥವಾ ಜಿಯೋಮಾರ್ಟ್ ನಲ್ಲಿ ಜಿಯೋ ಐಫೋನ್ 15 ಖರೀದಿ ಮಾಡಿದರೆ ಮಾತ್ರವೇ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.
ಈ ಸುದ್ದಿಯನ್ನೂ ಓದಿ: Apple iPhone : ಭಾರತದಲ್ಲಿ ಐಫೋನ್ 3ಜಿಯಿಂದ ಮೊದಲ ರಿಟೇಲ್ ಸ್ಟೋರ್ ತನಕ ಆ್ಯಪಲ್‌ನ 15 ವರ್ಷಗಳ ಯಾತ್ರೆ ಹೇಗಿತ್ತು?
ಜಿಯೋ ಬಳಕೆದಾರರಲಲ್ಲದವರಿಗೂ ಈ ಯೋಜನೆಯ ಲಾಭವು ದೊರೆಯಲಿದ್ದು, ಇದಕ್ಕಾಗಿ ಅವರು ಹೊಸ ಜಿಯೋ ಸಿಮ್ ಖರೀದಿ ಮಾಡಬೇಕು ಇಲ್ಲವೇ ಮೊಬೈಲ್ ನಂಬರ್ ಪೊರ್ಟಬಲಿಟಿ ಆಯ್ಕೆಯನ್ನು ತಮ್ಮದಾಗಿಸಿಕೊಳ್ಳಬೇಕಾಗಿದೆ.
ಈ ಪ್ಲಾನ್ ಸೆಪ್ಟೆಂಬರ್ 22ರಿಂದ ಆರಂಭವಾಗಲಿದ್ದು, ಐಫೋನ್ 15 ಖರೀದಿ ಮಾಡಿ ಜಿಯೋ ಸಿಮ್ ಅನ್ನು ಆಕ್ಟಿವ್ ಮಾಡಿದರೆ ಈ ಹೊಸ ಯೋಜನೆಯು 72 ಗಂಟೆಗಳ ಒಳಗೆ ನಿಮ್ಮ ಬಳಕೆಗೆ ಲಭ್ಯವಾಗಲಿದೆ. ಈ ಯೋಜನಯೂ ಕೇವಲ ಐಫೋನ್ 15 ನಲ್ಲಿ ಮಾತ್ರವೇ ಕಾರ್ಯನಿರ್ವಹಿಸಲಿದೆ.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ದೇಶ
ಪಿ-81 ವಿಮಾನ ನವೀಕರಣಕ್ಕೆ ಮೇಕ್ ಇನ್ ಇಂಡಿಯಾ ವಿಧಾನಕ್ಕೆ ಮುಂದಾದ ಬೋಯಿಂಗ್
12 ಬೋಯಿಂಗ್ ಪಿ-81 ವಿಮಾನಗಳನ್ನು ಈಗಾಗಲೇ ಭಾರತೀಯ ನೌಕಾ ಪಡೆಯ ಬಳಸುತ್ತಿದೆ. ಆದರೆ, ಇನ್ನಷ್ಟು ಆರ್ಡರ್‌ಗಳನ್ನು ಬೋಯಿಂಗ್ ನಿರೀಕ್ಷಿಸುತ್ತಿದೆ.
ಬೆಂಗಳೂರು / ನವದೆಹಲಿ: ಬೋಯಿಂಗ್ (Boeing) ಗುರುವಾರ ತನ್ನ ಪಿ-8ಐ( P-8I) ಕಡಲ ಕಣ್ಗಾವಲು ವಿಮಾನದ ತಯಾರಿಕೆ ಮತ್ತು ಸುಸ್ಥಿರತೆಯಲ್ಲಿ ಸಾಧಿಸಿದ ಗಣನೀಯ ಸ್ವದೇಶೀಕರಣವನ್ನು ಎತ್ತಿ ತೋರಿಸಿದೆ ಹಾಗೂ ಪ್ಲಾಟ್‌ಫಾರ್ಮ್‌ನ ದೃಷ್ಟಿಕೋನದ ಕುರಿತು ಮಾಧ್ಯಮಗಳಿಗೆ ಅದರ ಆತ್ಮನಿರ್ಭರ್ ಭಾರತ್ (Atmanirbhar Bharat) ಕಾರ್ಯತಂತ್ರದ ಭಾಗವಾಗಿ ಪರಿಣಾಮವಾಗಿ ಹೂಡಿಕೆ ಮತ್ತು ಆರ್ಥಿಕತೆಯ ಹೆಚ್ಚಳವನ್ನು ಸೂಚಿಸಿದೆ. ಹನ್ನೆರಡು P-8Iಗಳು ಈಗಾಗಲೇ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತೀಯ ನೌಕಾಪಡೆಯ ವಿಚಕ್ಷಣ ಮತ್ತು ಕಣ್ಗಾವಲು ಅಗತ್ಯಗಳನ್ನು ಪೂರೈಸುತ್ತಲಿವೆ.
ಬೋಯಿಂಗ್ ಈಗಾಗಲೇ ಆರ್ಥಿಕತೆಯ ಮೇಲೆ ಗಣನೀಯ ಪರಿಣಾಮವನ್ನು ಉಂಟುಮಾಡಿದೆ, ಇದು ಭಾರತೀಯ ನೌಕಾಪಡೆಯೊಂದಿಗೆ ಸೇವೆಯಲ್ಲಿರುವ ಪ್ರಸ್ತುತ P-8I ವಿಮಾನ ಫ್ಲೀಟ್ ಅನ್ನು ಬೆಂಬಲಿಸಲು 1.7 ಶತಕೋಟಿ ಡಾಲರ್ ಮೊತ್ತವನ್ನು ಹೊಂದಿಸಿದೆ. ಇದಲ್ಲದೆ, ಬೋಯಿಂಗ್ P-8I ಫ್ಲೀಟ್ ಅನ್ನು 18 ವಿಮಾನಗಳಿಗೆ ಹೆಚ್ಚಿಸುವುದರಿಂದ, ಹೂಡಿಕೆಗಳಲ್ಲಿ ಅಂದಾಜು 1.5 ಶತಕೋಟಿ ಡಾಲರ್ ಹೆಚ್ಚಳವು ಆಗಲಿದ್ದು ಇದರಿಂದಾಗಿ 2032 ರ ವೇಳೆಗೆ ಭಾರತದ ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಮತ್ತಷ್ಟು ಸ್ವದೇಶೀಕರಣದ ಅವಕಾಶಗಳು ಸೃಷ್ಟಿಯಾಗುತ್ತದೆ.
ಬೋಯಿಂಗ್ ಇಂಡಿಯಾದ ಅಧ್ಯಕ್ಷರಾದ ಸಲೀಲ್ ಗುಪ್ತೆ ಅವರು, “ಆತ್ಮನಿರ್ಭರ್ ಭಾರತ್ ದೃಷ್ಟಿಕೋನವನ್ನು ಮುಂದುವರಿಸಲು ಬೋಯಿಂಗ್‌ನ ಬದ್ಧತೆಯು P-8I ಫ್ಲೀಟ್‌ಗೆ ನಮ್ಮ ಸಮರ್ಪಣೆಯನ್ನು ಪ್ರೇರೇಪಿಸುತ್ತದೆ. ಭಾರತೀಯ ನೌಕಾಪಡೆಯ ಹೆಚ್ಚಿನ P-8I ವಿಮಾನಗಳ ಅಗತ್ಯಕ್ಕೆ ನಾವು ಪ್ರತಿಕ್ರಿಯಿಸುವಂತೆ, ನಾವು ಭಾರತ ಮತ್ತು ಜಾಗತಿಕ ಗ್ರಾಹಕರಿಗೆ ಲಾಭದಾಯಕವಾಗಿ ಭಾರತ, ಭಾರತಕ್ಕಾಗಿ ಮತ್ತು ಪ್ರಪಂಚಕ್ಕಾಗಿ ಎಂಜಿನಿಯರಿಂಗ್, ಉತ್ಪಾದನೆ ಮತ್ತು ಸುಸ್ಥಿರ ಸಾಮರ್ಥ್ಯಗಳನ್ನು ಹೆಚ್ಚಿಸುವುದು ಸಕ್ರಿಯವಾಗಿರುವುದನ್ನು ನೋಡುತ್ತಿದ್ದೇವೆ” ಎಂದು ಹೇಳಿದರು.
2013 ರಲ್ಲಿ ಪ್ರಾರಂಭವಾದಾಗಿನಿಂದ, 737 ನೆಕ್ಸ್ಟ್ ಜನರೇಷನ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ P-8I ವಿಮಾನವು ಭಾರತೀಯ ನೌಕಾಪಡೆಯ ಫ್ಲೀಟ್‌ನ ಅವಿಭಾಜ್ಯ ಅಂಗವಾಗಿದೆ ಹಾಗೂ ಹೆಚ್ಚಿನ ಕಾರ್ಯಾಚರಣೆಯ ಸಿದ್ಧತೆ ದರಗಳೊಂದಿಗೆ 40,000 ಹಾರಾಟದ ಗಂಟೆಗಳನ್ನು ಮೀರಿದೆ. INS ರಾಜೊಲಿಯಲ್ಲಿ ಅಶೋಕ್ ರಾಯ್ ತರಬೇತಿ ಸಿಮ್ಯುಲೇಟರ್ ಸಂಕೀರ್ಣವನ್ನು ಸ್ಥಾಪಿಸುವಲ್ಲಿ ಬೋಯಿಂಗ್ ಪ್ರಮುಖ ಪಾತ್ರವನ್ನು ವಹಿಸಿದೆ ಹಾಗೂ ಈ ವರ್ಷದ ಏಪ್ರಿಲ್‌ನಲ್ಲಿ ಉದ್ಘಾಟನೆಗೊಂಡ ಕೊಚ್ಚಿ ತರಬೇತಿ ಸಂಕೀರ್ಣವು P-8I ಏರ್‌ಕ್ರೂ ಮತ್ತು ತಾಂತ್ರಿಕ ತಂಡದ ತರಬೇತಿಗಾಗಿ ಅತ್ಯಾಧುನಿಕ ಸಿಮ್ಯುಲೇಟರ್ ಅನ್ನು ಒಳಗೊಂಡಿದೆ. ಈ ನೆಲ-ಆಧಾರಿತ ತರಬೇತಿಯನ್ನು ನೀಡುವುದರಿಂದ ವಿಮಾನದಲ್ಲಿ ತರಬೇತಿ ಸಮಯವನ್ನು ಕಡಿಮೆ ಮಾಡುತ್ತದೆ, ಭಾರತೀಯ ನೌಕಾಪಡೆಗೆ ಮಿಷನ್ ಪ್ರಾವೀಣ್ಯತೆ ಮತ್ತು ವಿಮಾನ ಲಭ್ಯತೆಯನ್ನು ಕೂಡ ಹೆಚ್ಚಿಸುತ್ತದೆ.
ಈ ಸುದ್ದಿಯನ್ನೂ ಓದಿ: Air India Deal: 250 ವಿಮಾನ ಖರೀದಿಗೆ ಏರ್ ಇಂಡಿಯಾ ಒಪ್ಪಂದ, ಐತಿಹಾಸಿಕ ಎಂದ ಮೋದಿ, ಬೋಯಿಂಗ್ ಜತೆ ಮತ್ತೊಂದು ಡೀಲ್
“ಭಾರತ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಪರಸ್ಪರ ಕಾರ್ಯಸಾಧ್ಯತೆ ಮತ್ತು ಕಡಲ ಭದ್ರತಾ ಅಗತ್ಯತೆಗಳನ್ನು ಹೆಚ್ಚಿಸುವ ಸಂದರ್ಭದಲ್ಲಿಯೇ, ಒಂದು ಸಾಬೀತಾದ ಬಹು-ಮಿಷನ್ ವಿಮಾನವಾಗಿ P-8 ನೀಡುವ ಅಸಾಧಾರಣ ಸಾಮರ್ಥ್ಯವೂ ಸೇರಿದಂತೆ ಭಾರತೀಯ ನೌಕಾಪಡೆಯ ಜೊತೆಗಿನ ಪಾಲುದಾರಿಕೆಗೆ ನಾವು ಹೆಮ್ಮೆಪಡುತ್ತೇವೆ” ಎಂದು ಡಾನ್ ಗಿಲಿಯನ್, ವೈಸ್ ಪ್ರೆಸಿಡೆಂಟ್ ಹಾಗೂ ಜನರಲ್ ಮ್ಯಾನೇಜರ್, ಮೊಬಿಲಿಟಿ, ಕಣ್ಗಾವಲು ಮತ್ತು ಬಾಂಬರ್ಸ್, ಬೋಯಿಂಗ್ ಡಿಫೆನ್ಸ್, ಸ್ಪೇಸ್ ಮತ್ತು ಸೆಕ್ಯುರಿಟಿ ರವರು ತಿಳಿಸಿದರು. “ಬೋಯಿಂಗ್ ತನ್ನ P-8 ಪೂರೈಕೆದಾರ ಜಾಲವನ್ನು ಭಾರತದಲ್ಲಿ ವಿಸ್ತರಿಸಲು ಬದ್ಧವಾಗಿದೆ, ಇದು ಪ್ರಸ್ತುತ 15 ಸಾರ್ವಜನಿಕ ಮತ್ತು ಖಾಸಗಿ ಮೈಕ್ರೋ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಒಳಗೊಂಡಿದೆ, ಅವುಗಳು ಬೋಯಿಂಗ್‌ನ ಜಾಗತಿಕ ಪೂರೈಕೆ ಸರಪಳಿಯ ಒಂದು ಭಾಗವಾಗಿದೆ ಹಾಗೂ P-8.ಗಾಗಿ ನಿರ್ಣಾಯಕ ಭಾಗಗಳು, ಘಟಕಗಳು ಮತ್ತು ಸೇವೆಗಳನ್ನು ಒದಗಿಸುತ್ತಿದೆ.”
ಜಾಗತಿಕವಾಗಿ ಸಾಬೀತಾಗಿರುವ P-8 ಫ್ಲೀಟ್, ಸೇವೆಯಲ್ಲಿರುವ 160 ಕ್ಕೂ ಹೆಚ್ಚು ವಿಮಾನಗಳನ್ನು ಹಾಗೂ ಜಗತ್ತಿನಾದ್ಯಂತ ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ನಾರ್ವೆ, ದಕ್ಷಿಣ ಕೊರಿಯಾ, ಹಾಗೂ ಜರ್ಮನಿಯಂತಹ ಮಿತ್ರರಾಷ್ಟ್ರಗಳನ್ನು ಒಳಗೊಂಡಂತೆ 500,000 ಗೂ ಹೆಚ್ಚು ಅಪಘಾತ-ಮುಕ್ತ ಹಾರಾಟದ ಸಮಯವನ್ನು ಸಂಗ್ರಹಿಸಿವೆ.
-
ಕರ್ನಾಟಕ23 hours ago
Heart Attack: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಸದ್ದಿಗೆ ಹಾರಿಹೋಯ್ತು ಯುವಕನ ಪ್ರಾಣ!
-
ಸುವಚನ17 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕರ್ನಾಟಕ8 hours ago
Suspicious death : ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
-
ದೇಶ13 hours ago
Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್ ಹಾಸನ್
-
ಅಂಕಣ16 hours ago
ವಿಸ್ತಾರ ಅಂಕಣ: ಮಣ್ಣು ಬರೀ ಮಣ್ಣಲ್ಲ, ಅದು ನಮ್ಮ ಭಾವಕೋಶ, ನಾವು ಮಣ್ಣಿನ ಮಕ್ಕಳು!
-
ದೇಶ22 hours ago
‘ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ’! ಡ್ಯಾನಿಶ್ ಅಲಿಯನ್ನು ಭೇಟಿಯಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
-
ವೈರಲ್ ನ್ಯೂಸ್3 hours ago
Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
-
South Cinema5 hours ago
Silk Smitha: ಸಿಲ್ಕ್ ಸ್ಮಿತಾ ಶವದ ಮೇಲೆ ಅತ್ಯಾಚಾರ ; ನಟಿಯ ಪುಣ್ಯತಿಥಿಯಂದು ಅಚ್ಚರಿಯ ಸತ್ಯ ಹೊರಬಿತ್ತು!