Site icon Vistara News

Adani Group |‌ ಧಾರಾವಿ ಸ್ಲಮ್‌ ಸಮಗ್ರ ಅಭಿವೃದ್ಧಿಗೆ ಅದಾನಿ ಪ್ರಾಪರ್ಟೀಸ್ ಸಜ್ಜು

dharavi slum

ಮುಂಬಯಿ: ಏಷ್ಯಾದಲ್ಲಿಯೇ ಅತಿ ದೊಡ್ಡ ಕೊಳಚೆ ಪ್ರದೇಶ ಎಂಬ ಕಳಂಕ ಪಡೆದಿರುವ ಮುಂಬಯಿನ ಧಾರಾವಿ ಸ್ಲಮ್‌ನ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಹಕ್ಕುಗಳನ್ನು ಅದಾನಿ ಪ್ರಾಪರ್ಟೀಸ್‌ (Adani Group) ಖರೀದಿಸಿದೆ.

ಅದಾನಿ ಪ್ರಾಪರ್ಟೀಸ್‌ 5,069 ಕೋಟಿ ರೂ.ಗಳಿಗೆ ಧಾರಾವಿ ಕೊಳಚೆ ಪ್ರದೇಶದ ಅಭಿವೃದ್ಧಿಪಡಿಸುವ ಹಕ್ಕುಗಳನ್ನು ತನ್ನದಾಗಿಸಿದೆ.

ವಾಣಿಜ್ಯ ರಾಜಧಾನಿ ಮುಂಬಯಿನ ಹೃದಯ ಭಾಗದಲ್ಲಿ 600 ಎಕರೆ ಪ್ರದೇಶದಲ್ಲಿ ಧಾರಾವಿ ಕೊಳಚೆ ಪ್ರದೇಶ ಹರಡಿದೆ. ಈ ಯೋಜನೆಯಲ್ಲಿ ಸರ್ಕಾರ 1,600 ಕೋಟಿ ರೂ. ಹೂಡಿಕೆ ಮಾಡಲಿದೆ. ರಿಯಾಲ್ಟಿ ದಿಗ್ಗಜ ಡಿಎಲ್‌ಎಫ್‌, ಮುಂಬಯಿ ಮೂಲದ ಶ್ರೀ ನಮನ್‌ ಡೆವಲಪರ್ಸ್‌ ಕೂಡ ಬಿಡ್‌ ಸಲ್ಲಿಸಿತ್ತು.

Exit mobile version