Site icon Vistara News

Adani group | ಎನ್‌ಡಿಟಿವಿಯ ಹೆಚ್ಚುವರಿ 26% ಷೇರು ಖರೀದಿಗೆ ಅದಾನಿ ಆಫರ್‌ ಇಂದಿನಿಂದ ಶುರು

Gautam Adani, who fell out of the world's top 10 billionaires list, fell to the 11th rank.

ನವ ದೆಹಲಿ: ಬಿಲಿಯನೇರ್‌ ಉದ್ಯಮಿ ಗೌತಮ್‌ ಅದಾನಿ ಅವರು ಎನ್‌ಡಿಟಿವಿ ಚಾನೆಲ್‌ನಲ್ಲಿನ ಹೆಚ್ಚುವರಿ 26% ಷೇರುಗಳನ್ನು ಖರೀದಿಸಲು ೪೯೩ ಕೋಟಿ ರೂ.ಗಳ ಆಫರ್‌ ಅನ್ನು ( Adani group) ಇಂದಿನಿಂದ ಆರಂಭಿಸಿದ್ದಾರೆ.

ಈ ಓಪನ್‌ ಆಫರ್‌ ನವೆಂಬರ್‌ 22ರಿಂದ ಡಿಸೆಂಬರ್‌ 5ರ ತನಕ ನಡೆಯಲಿದೆ ಎಂದು ಅದಾನಿ ಗ್ರೂಪ್‌ ಪರವಾಗಿ ಆಫರ್‌ ಅನ್ನು ನಿರ್ವಹಿಸುತ್ತಿರುವ ಜೆಎಂ ಫೈನಾನ್ಷಿಯಲ್‌ ತಿಳಿಸಿದೆ.

ಪ್ರತಿ ಷೇರಿಗೆ 294 ರೂ.ಗಳಂತೆ ಖರೀದಿಸಲು ಅದಾನಿ ಸಮೂಹ ಪ್ರಸ್ತಾಪಿಸಿದೆ. ಈ ಆಫರ್‌ ದರವು ಸೋಮವಾರದ ಎನ್‌ಡಿಟಿವಿಯ ಷೇರಿನ ದರಕ್ಕೆ ಹೋಲಿಸಿದರೆ 23% ಕಡಿಮೆಯಾಗಿದೆ. ಸೋಮವಾರ 382 ರೂ. ದರ ಇತ್ತು. 2022ರ ಸೆಪ್ಟೆಂಬರ್‌ 5ರಂದು ಎನ್‌ಡಿಟಿವಿ ಷೇರು ದರ 540 ರೂ.ಗೆ ಏರಿಕೆಯಾಗಿತ್ತು.

ವರದಿಗಳ ಪ್ರಕಾರ ಎನ್‌ಡಿಟಿವಿಯ ಪ್ರವರ್ತಕರಾದ ರಾಧಿಕಾ ರಾಯ್‌ ಮತ್ತು ಪ್ರಣಯ್‌ ರಾಯ್‌ ಅವರು (RRPR) ಅದಾನಿ ಗ್ರೂಪ್‌ನ ಈ ಓಪನ್‌ ಆಫರ್‌ ವಿರುದ್ಧ ಕಾನೂನು ಸಮರ ನಡೆಸುವ ಸಾಧ್ಯತೆ ಇಲ್ಲ.

Exit mobile version