ಮುಂಬಯಿ: ಅದಾನಿ ಗ್ರೂಪ್ ತನ್ನ (Adani Group) ಅಧೀನದಲ್ಲಿರುವ ಕಂಪನಿಗಳ ಸ್ವತಂತ್ರ ಆಡಿಟ್ ನಡೆಸಲು ಚಿಂತನೆ ನಡೆಸಿದೆ. ಆರು ಪ್ರಮುಖ ಅಕೌಂಟಿಂಗ್ ಕಂಪನಿಗಳ ಪೈಕಿ ಒಂದನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿರುವುದಾಗಿ ವರದಿಯಾಗಿದೆ. ಅಮೆರಿಕದ ಶಾರ್ಟ್ ಸೆಲ್ಲಿಂಗ್ ಕಂಪನಿ ಹಿಂಡೆನ್ ಬರ್ಗ್ (Hindenburg) ಮಾಡಿರುವ ಆರೋಪಗಳು ಹಾಗೂ ಷೇರುಗಳ ಪತನದ ಹಿನ್ನೆಲೆಯಲ್ಲಿ ತನ್ನ ಕಾರ್ಪೊರೇಟ್ ಆಡಳಿತದ ಬಗ್ಗೆ ಸ್ವತಂತ್ರ ಆಡಿಟ್ ನಡೆಸಲು ಉದ್ದೇಶಿಸಿದೆ ಎಂದು ವರದಿಯಾಗಿದೆ.
ಅದಾನಿ ಎಂಟರ್‌ಪ್ರೈಸಸ್ ಎಫ್‌ಪಿಒ ಮುಕ್ತಾಯವಾದೊಡನೆ ಸ್ವತಂತ್ರ ಆಡಿಟ್ ಆರಂಭವಾಗಲಿದೆ. ಅದಾನಿ ಗ್ರೂಪ್ ತನ್ನ ಅಧೀನದಲ್ಲಿರುವ 8 ಕಂಪನಿಗಳ ಬಗ್ಗೆ ಆಡಿಟ್ (audit) ನಡೆಸಲಿದೆ. ಲೆಕ್ಕಪತ್ರ ಪರಿಶೋಧನೆಯ ವರದಿಯನ್ನು ಆಡಳಿತ ಮಂಡಳಿ ಸಭೆಯಲ್ಲಿ ಮಂಡಿಸಲಾಗುವುದು. ಇದರ ಆಧಾರದಲ್ಲಿ ಆಡಳಿತ ಮಂಡಳಿ ನಿರ್ಧರಿಸಿದರೆ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಹಿಂಡೆನ್ ಬರ್ಗ್ ರೀಸರ್ಚ್ ಅನ್ನು ಸಾರಾಸಗಟಾಗಿ ನಿರಾಕರಿಸಿರುವ ಅದಾನಿ ಗ್ರೂಪ್ 413 ಪುಟಗಳ ಉತ್ತರವನ್ನು ಬಿಡುಗಡೆಗೊಳಿಸಿದೆ.