Site icon Vistara News

Adani | ಅದಾನಿ ಗ್ರೂಪ್‌ ಈಗ ಭಾರತದ ಅತಿ ಹೆಚ್ಚು ಮಾರುಕಟ್ಟೆ ಬಂಡವಾಳ ಮೌಲ್ಯದ ಕಂಪನಿ, ಟಾಟಾ ನಂ.2

adani

ನವ ದೆಹಲಿ: ಉದ್ಯಮಿ ಗೌತಮ್‌ ಅದಾನಿ ನೇತೃತ್ವದ ಅದಾನಿ ಗ್ರೂಪ್‌ (Adani ) ದೇಶದಲ್ಲಿ ಅತಿ ಹೆಚ್ಚು ಮಾರುಕಟ್ಟೆ ಬಂಡವಾಳ ಮೌಲ್ಯವಿರುವ ಕಂಪನಿಯಾಗಿ ಹೊರಹೊಮ್ಮಿದೆ. ಈ ನಿಟ್ಟಿನಲ್ಲಿ ಅದು ಟಾಟಾ ಸಮೂಹವನ್ನೂ ಹಿಂದಿಕ್ಕಿದೆ.

ಅಂಬುಜಾ ಸಿಮೆಂಟ್‌ ಮತ್ತು ಎಸಿಸಿ ಸಿಮೆಂಟ್‌ ಕಂಪನಿಗಳನ್ನು ಖರೀದಿಸಿದ ಬಳಿಕ, ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ಟಾಟಾ ಸಮೂಹವನ್ನೂ ಹಿಂದಿಕ್ಕಲು ಅದಾನಿ ಗ್ರೂಪ್‌ಗೆ ಸಾಧ್ಯವಾಗಿದೆ.

ಅದಾನಿ ಗ್ರೂಪ್‌ನ ಮಾರುಕಟ್ಟೆ ಬಂಡವಾಳ ಮೌಲ್ಯ ಶುಕ್ರವಾರ 22.25 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಟಾಟಾ ಸಮೂಹದ್ದು 20.81 ಲಕ್ಷ ಕೋಟಿ ರೂ.ನಷ್ಟಿತ್ತು. ರಿಲಯನ್ಸ್‌ ಇಂಡಸ್ಟ್ರೀಸ್‌ ಮಾರುಕಟ್ಟೆ ಮೌಲ್ಯ 17.07 ಲಕ್ಷ ಕೋಟಿ ರೂ.ಗಳಾಗಿದೆ.

ಫೋರ್ಬ್ಸ್‌ ನಿಯತಕಾಲಿಕೆಯ ಪ್ರಕಾರ ಬಿಲಿಯನೇರ್‌ಗಳ ಹೊಸ ಪಟ್ಟಿಯಲ್ಲಿ ಗೌತಮ್‌ ಅದಾನಿಯವರು ಅಮೆಜಾನ್‌ನ ಜೆಫ್‌ ಬಿಜೋಸ್‌ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ್ದಾರೆ.

ಇದನ್ನೂ ಓದಿ:Gautam Adani | ಗೌತಮ್‌ ಅದಾನಿ ಈಗ ಜಗತ್ತಿನ ಎರಡನೇ ಶ್ರೀಮಂತ, ಫೋರ್ಬ್ಸ್‌ ಘೋಷಣೆ

Exit mobile version