ನವದೆಹಲಿ: ದೇಶದಲ್ಲಿ ತನ್ನ ನಿರ್ವಹಣೆಯಲ್ಲಿರುವ ಏರ್‌ಪೋರ್ಟ್‌ಗಳ ಸಮೀಪ ರಿಯಲ್ ಎಸ್ಟೇಟ್ ಯೋಜನೆಗಳನ್ನು ಹಮ್ಮಿಕೊಳ್ಳಲು ಅದಾನಿ ಗ್ರೂಪ್ ಯೋಜಿಸಿದೆ.
ಅದಾನಿ ಗ್ರೂಪ್ ತನ್ನ ಅಧೀನದಲ್ಲಿರುವ ಎಲ್ಲ ಏರ್‌ಪೋರ್ಟ್‌ಗಳ ಬಳಿ ೫೦೦ ಎಕರೆ ಪ್ರದೇಶದಲ್ಲಿ ೭ ಕೋಟಿ ಚದರ ಅಡಿ ಪ್ರದೇಶದಲ್ಲಿ ” ಏರೊ ಸಿಟಿʼ ಎಂಬ ರಿಯಲ್ ಎಸ್ಟೇಟ್ ಅಭಿವೃದ್ಧಿ ಯೋಜನೆಯನ್ನು ಕೈಗೊಳ್ಳಲಿದೆ. ಈ ಏರೊ ಸಿಟಿಗಳಲ್ಲಿ ಹೋಟೆಲ್, ಸಭಾ ಭವನ, ರಿಟೇಲ್ ಮಳಿಗೆಗಳು, ಮನರಂಜನೆ ಕೇಂದ್ರಗಳು, ಆಸ್ಪತ್ರೆ, ಲಾಜಿಸ್ಟಿಕ್ಸ್, ವಾಣಿಜ್ಯ ಕಚೇರಿಗಳು ನಿರ್ಮಾಣವಾಗಲಿವೆ.
ಮ್ಯಾರಿಯೆಟ್ ಇಂಟರ್‌ನ್ಯಾಶನಲ್, ಇಂಟರ್ ಕಾಂಟಿನೆಂಟಲ್ ಹೋಟೆಲ್ಸ್ ಗ್ರೂಪ್, ಹಿಲ್ಟನ್ ಮೊದಲಾದ ಹೋಟೆಲ್ ಸರಣಿ ಕಂಪನಿಗಳ ಜತೆಗೆ ಏರೊ ಸಿಟಿಗಳಲ್ಲಿ ಹೋಟೆಲ್‌ಗಳ ನಿರ್ಮಾಣಕ್ಕೆ ಆರಂಭಿಕ ಸುತ್ತಿನ ಮಾತುಕತೆ ನಡೆಸಿದೆ.
ಅದಾನಿ ಏರ್‌ಪೋರ್ಟ್ಸ್, ಮುಂಬಯಿ, ಜೈಪುರ, ಅಹಮದಾಬಾದ್, ಲಖನೌ, ಮಂಗಳೂರು, ಗುವಾಹಟಿ ಮತ್ತು ತಿರುವನಂತಪುರಂನಲ್ಲಿ ಏರ್‌ಪೋರ್ಟ್‌ಗಳನ್ನು ನಿರ್ವಹಿಸುತ್ತಿದೆ.