ನವ ದೆಹಲಿ: ಅದಾನಿ ಸಮೂಹದ ಪ್ರವರ್ತಕರಾದ ಎಸ್.ಬಿ ಅದಾನಿ ಫ್ಯಾಮಿಲಿ ಟ್ರಸ್ಟ್ 15,446 ಕೋಟಿ ರೂ. ಮೌಲ್ಯದ 21 ಕೋಟಿ ಷೇರುಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ. (Adani Group) ಅದಾನಿ ಗ್ರೂಪ್‌ನ 4 ಕಂಪನಿಗಳ ಷೇರುಗಳನ್ನು ಬ್ಲಾಕ್ ಡೀಲ್ ಮೂಲಕ ಎಫ್‌ಐಐಗೆ ಷೇರು ಮಾಡಿದೆ. ಟ್ರಸ್ಟ್ ಅದಾನಿ ಗ್ರೂಪ್‌ನ ಪ್ರವರ್ತಕ ಸಂಸ್ಥೆಯಾಗಿದ್ದು, ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್ ಮತ್ತು ಅದಾನಿ ಗ್ರೀನ್ ಎನರ್ಜಿ, ಅದಾನಿ ಟ್ರಾನ್ಸ್‌ಮಿಶನ್ ಷೇರುಗಳನ್ನು ಮಾರಾಟ ಮಾಡಿದೆ.
ಅಮೆರಿಕ ಮೂಲದ ಜಿಕ್ಯೂಜಿ ಪಾರ್ಟ್‌ನರ್ಸ್ (GQG) , ಈ 15,446 ಕೋಟಿ ರೂ. ಮೌಲ್ಯದ ಷೇರುಗಳನ್ನು ಬ್ಲಾಕ್‌ಡೀಲ್‌ನಲ್ಲಿ ಖರೀದಿಸಿದೆ. ಜಿಕ್ಯೂಜಿ ಜತೆಗೆ ಐತಿಹಾಸಿಕ ಒಪ್ಪಂದ ಮಾಡಿರುವುದಕ್ಕೆ ಸಂತಸವಾಗುತ್ತಿದೆ ಎಂದು ಅದಾನಿ ಗ್ರೂಪ್ ಸಿಎಫ್‌ಒ ಜುಗೇಶಿಂದರ್ ಸಿಂಗ್ ತಿಳಿಸಿದ್ದಾರೆ. ಅದಾನಿ ಗ್ರೂಪ್‌ನ ಈ ಕಂಪನಿಗಳ ಭವಿಷ್ಯ ಉತ್ತಮವಾಗಿದ್ದು, ಹೂಡಿಕೆಗೆ ಸಂತಸವಾಗುತ್ತಿದೆ ಎಂದು ಜಿಕ್ಯೂಜಿ ಪಾರ್ಟ್‌ನರ್ಸ್ ಅಧ್ಯಕ್ಷ ರಾಜೀವ್ ಜೈನ್ ತಿಳಿಸಿದ್ದಾರೆ.