ಹಾಂಕಾಂಗ್: ಅದಾನಿ ಗ್ರೂಪ್ (Adani group) ಈ ವರ್ಷ ಮಾರ್ಚ್ ಅಂತ್ಯದೊಳಗೆ ಸುಮಾರು 6,500 ಕೋಟಿ ರೂ. ಸಾಲವನ್ನು ಅವಧಿಗೆ ಮುನ್ನವೇ ಮರು ಪಾವತಿಸಲು ನಿರ್ಧರಿಸಿದೆ. ಕಂಪನಿಯ ಬಗ್ಗೆ ಹೂಡಿಕೆದಾರರ ವಿಶ್ವಾಸ ವೃದ್ಧಿಗೆ ಇದು ಸಹಕಾರಿಯಾಗಲಿದೆ. ಅದಾನಿ ಗ್ರೀನ್ ಎನರ್ಜಿ ತನ್ನ ಬಾಂಡ್‌ಗಳಿಗೆ ರಿಫೈನಾನ್ಸ್ ಮಾಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಹಾಂಕಾಂಗ್‌ನಲ್ಲಿ ಅದಾನಿ ಸಮೂಹದ ಆಡಳಿತ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ. ಕಂಪನಿಯ ವಕ್ತಾರರು ಈ ಕುರಿತು ಅಧಿಕೃತವಾಗಿ ತಿಳಿಸಿಲ್ಲ. ಕಳೆದ ಜನವರಿ 24ರಂದು ಹಿಂಡೆನ್ ಬರ್ಗ್ ವರದಿ ಪ್ರಕಟವಾದ ಬಳಿಕ ಅದಾನಿ ಕಂಪನಿಗಳ ಷೇರುಗಳ ಮಾರುಕಟ್ಟೆ ಮೌಲ್ಯದಲ್ಲಿ 12 ಲಕ್ಷ ಕೋಟಿ ರೂ. ನಷ್ಟವಾಗಿತ್ತು.
ಅದಾನಿ ಸಮೂಹದ ಕಂಪನಿಗಳು ಸಾಲವನ್ನು ಅವಧಿಗೆ ಮುನ್ನ ಮರು ಪಾವತಿಸುವ ಬಗ್ಗೆ ವರದಿಗಳ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ 8 ಅದಾನಿ ಕಂಪನಿಗಳ ಷೇರು ದರ ಮಂಗಳವಾರ ಚೇತರಿಸಿತು. ಅದಾನಿ ಎಂಟರ್‌ಪ್ರೈಸಸ್ ಷೇರು ದರ 14.90% ಏರಿಕೆ ದಾಖಲಿಸಿತು.