ಮುಂಬಯಿ: ಅದಾನಿ ಎಂಟರ್‌ಪ್ರೈಸಸ್ (Adani Enterprises) 20,000 ಕೋಟಿ ರೂ.ಗಳ ಹೆಚ್ಚುವರಿ ಷೇರುಗಳನ್ನು ಬಿಡುಗಡೆಗೊಳಿಸಿದ ಬಳಿಕ (Follow-on public offer) ಬುಧವಾರ ಕಂಪನಿಯ ಷೇರು ದರದಲ್ಲಿ 30% ತನಕ ಕುಸಿತ ಸಂಭವಿಸಿತು. ಕ್ರೆಡಿಟ್ ಸ್ವೀಸ್, ಅದಾನಿ ಸಮೂಹದ ಕಂಪನಿಗಳ ಬಾಂಡ್‌ಗಳನ್ನು ಸ್ವೀಕರಿಸುವುದನ್ನು ಸ್ಥಗಿತಗೊಳಿಸಿರುವ ಬಗ್ಗೆ ವರದಿಯ ಹಿನ್ನೆಲೆಯಲ್ಲಿ ಷೇರು ದರ ಕುಸಿದಿದೆ.
ಅದಾನಿ ಸಮೂಹದ ಎಲ್ಲ 10 ಷೇರುಗಳ ದರಗಳೂ ಕುಸಿತಕ್ಕೀಡಾಯಿತು. ಅದಾನಿ ಪೋರ್ಟ್ (15%), ಅದಾನಿ ಟೋಟಲ್ ಗ್ಯಾಸ್ (10%), ಅಂಬುಜಾ ಸಿಮೆಂಟ್ (10%) ಷೇರು ದರ ಮಧ್ಯಂತರದಲ್ಲಿ ಕುಸಿತಕ್ಕೀಡಾಯಿತು. ಹಿಂಡೆನ್‌ಬರ್ಗ್ ವರದಿ ಪ್ರಕಟವಾದ ಬಳಿಕ ಅದಾನಿ ಗ್ರೂಪ್ ಕಂಪನಿಗಳ ಷೇರು ದರಗಳು ಕುಸಿಯುತ್ತಲೇ ಇವೆ.