Site icon Vistara News

Adani Group : ಮ್ಯಾನ್ಮಾರ್‌ ಬಂದರನ್ನು ಭಾರಿ ಡಿಸ್ಕೌಂಟ್‌ನಲ್ಲಿ ಮಾರಿದ ಅದಾನಿ ಗ್ರೂಪ್‌, ಕಾರಣವೇನು?

adani group

ಮುಂಬಯಿ: ಅದಾನಿ ಸಮೂಹದ ಅದಾನಿ ಪೋರ್ಟ್ಸ್‌, ಮ್ಯಾನ್ಮಾರ್‌ ಬಂದರನ್ನು 30 ದಶಲಕ್ಷ ಡಾಲರ್‌ ಡಿಸ್ಕೌಂಟ್‌ ದರದಲ್ಲಿ (ಅಂದಾಜು 246 ಕೋಟಿ ರೂ.) ಮಾರಾಟ ಮಾಡಿದೆ. (Adani Group) ಅದಾನಿ ಗ್ರೂಪ್‌ ಬಂದರಿನಲ್ಲಿ ಮಾಡಿರುವ ಹೂಡಿಕೆಗಿಂತಲೂ ಕಡಿಮೆ ದರಕ್ಕೆ ಮಾರಿದೆ. ಮ್ಯಾನ್ಮಾರ್‌ನಲ್ಲಿ ಮಿಲಿಟರಿ ದಂಗೆಯ ಬಳಿಕ ಅದಾನಿ ಸಮೂಹ ಈ ನಿರ್ಧಾರಕ್ಕೆ ಬಂದಿತ್ತು.

ಮ್ಯಾನ್ಮಾರ್‌ ಯೋಜನೆಯನ್ನು ಪೂರ್ಣಗೊಳಿಸುವಲ್ಲಿ ಉಂಟಾಗಿರುವ ಸವಾಲುಗಳು, ಅಮೆರಿಕದ ನಿರ್ಬಂಧಗಳು ಅದಾನಿ ಗ್ರೂಪ್‌ ಈ ನಿರ್ಧಾರಕ್ಕೆ ಬರಲು ಕಾರಣವೆನ್ನಲಾಗಿದೆ. ಯೋಜನೆಯಲ್ಲಿನ ಮೈನಾರಿಟಿ ಷೇರುದಾರರ ನಿಲುವು ಕೂಡ ಈ ನಿರ್ಧಾರಕ್ಕೆ ಪುಷ್ಟು ನೀಡಿದೆ ಎಂದು ಅದಾನಿ ಗ್ರೂಪ್‌ ಹೇಳಿದೆ. ಮ್ಯಾನ್ಮಾರ್‌ ಸೋಲಾರ್‌ ಎನರ್ಜಿ ಲಿಮಿಟೆಡ್‌ ಈ ಬಂದರನ್ನು ಖರೀದಿಸಿದೆ.

ಇದನ್ನೂ ಓದಿ: Adani Group : ಅದಾನಿ ಸಾಲ 21% ಏರಿಕೆ, ವಿದೇಶಿ ಬ್ಯಾಂಕ್‌ಗಳಿಂದ ಸಾಲ ವಿತರಣೆ ಚುರುಕು

2021ರಲ್ಲಿ ಷೇರು ವಿನಿಮಯ ಕೇಂದ್ರಕ್ಕೆ ಅದಾನಿ ಗ್ರೂಪ್‌ ಸಲ್ಲಿಸಿರುವ ವಿವರದ ಪ್ರಕಾರ, ಮ್ಯಾನ್ಮಾರ್‌ ಬಂದರಿನಲ್ಲಿ 127 ದಶಲಕ್ಷ ಡಾಲರ್‌ (ಅಂದಾಜು 1,041 ಕೋಟಿ ರೂ.) ಮೊತ್ತದಷ್ಟು ಹೂಡಿಕೆಯನ್ನು ಅದಾನಿ ಗ್ರೂಪ್‌ ಮಾಡಿದೆ. ಅದಾನಿ ಪೋರ್ಟ್ಸ್‌ ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ.

ಅದಾನಿ ಪೋರ್ಟ್‌ ವಹಿವಾಟು ಹೆಚ್ಚಳ:

ಅದಾನಿ ಪೋರ್ಟ್ಸ್‌ & ಸ್ಪೆಶಲ್‌ ಎಕನಾಮಿಕ್‌ ಝೋನ್‌ (Adani ports and special economic zone) ಕಳೆದ ಏಪ್ರಿಲ್‌ನಲ್ಲಿ 3.23 ಕೋಟಿ ಟನ್‌ ಸರಕುಗಳನ್ನು ಅದಾನಿ ಪೋರ್ಟ್ಸ್‌ ನಿರ್ವಹಿಸಿತ್ತು. ಕಳೆದ ವರ್ಷದ ಇದೇ ಅವಧಿಯಲ್ಲಿ 12.8% ಹೆಚ್ಚಳ ದಾಖಲಿಸಿತ್ತು.

Exit mobile version